ಅಮೃತ ಬಿಂದು

ಶ್ರೀ ಶೈವಾಗಮ

ತದೇವ ಶಿವಲಿಂಗಂ ಹಿ ತಲ್ಲಿಂಗಂ ತು ಚತುರ್ವಿಧಂ | ಪರಬಿಂದುಃ ಪರೋ ನಾದಶ್ಚಾಪರೌ ಬಿಂದುನಾದಕೌ ||

ಉಪರ್ಯಧೋಭಾಗನಿಷ್ಠಾಶ್ಚತ್ವಾರೊà—ಪಿ ಸುರಾರ್ಚಿತಃ || ಪ್ರಪಂಚದ ಮೂಲಕಾರಣವಾದ ಲಿಂಗವೇ ಪರಬಿಂದು, ಪರನಾದ, ಅಪರಬಿಂದು, ಅಪರನಾದ ಎಂದು ನಾಲ್ಕು ಪ್ರಕಾರ. ಅದರ ಮೇಲ್ಭಾಗ ಮತ್ತು ಕೆಳಭಾಗಕ್ಕೆ ಸಂಬಂಧಿಸಿದ ಈ ನಾಲ್ಕು ಪ್ರಕಾರಗಳೂ ದೇವತೆಗಳಿಂದ ಪೂಜಿಸಲ್ಪಟ್ಟಿವೆ. ಪ್ರಪಂಚದ ಸೃಷ್ಟಿಗೆ ಸಂಬಂಧಿಸಿದಂತೆ ಈ ನಾದ-ಬಿಂದುಗಳ ವಿವರಣೆ ಹೀಗಿದೆ¬: ಬಿಂದು ಎಂದರೆ ಸೃಷ್ಟಿಯ ಉಪಾದಾನ ಕಾರಣ. ಪರಬಿಂದು ಎಂದರೆ ಶುದ್ಧ ಸೃಷ್ಟಿಗೆ ಉಪಾದಾನ ಕಾರಣ. ಅಪರಬಿಂದು ಎಂದರೆ ಅಶುದ್ಧಸೃಷ್ಟಿ ಎಂದು ಕರೆಯಲಾಗುವ ಇತರ ಜಗತ್ತಿನ ಸೃಷ್ಟಿಗೆ ಉಪಾದಾನ ಕಾರಣ. ನಾದವೆಂದರೆ ಜ್ಞಾನಶಕ್ತಿ. ಶುದ್ಧ ಸೃಷ್ಟಿಯಲ್ಲಿ ಅದು ಶುದ್ಧವಿದ್ಯಾ ರೂಪದಲ್ಲಿರುತ್ತದೆ. ಇದನ್ನೇ ಪರನಾದ ಎನ್ನುತ್ತಾರೆ. ಇದೇ ಸಂಕುಚಿತಗೊಂಡು ಜೀವಾತ್ಮರಲ್ಲಿ ನೆಲೆಸಿದಾಗ ಅಪರನಾದ ಎನಿಸಿಕೊಳ್ಳುತ್ತದೆ.

| ಚಂದ್ರಜ್ಞಾನಾಗಮ (3.10) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

Leave a Reply

Your email address will not be published. Required fields are marked *