ರೈಲು ದುರಂತದಲ್ಲಿ ಮಡಿದವರಿಗಾಗಿ ಕ್ಯಾಂಡಲ್​ ಮಾರ್ಚ್​ ನಡೆಸಿದ ಶ್ರೀರಾಮ, ಸೀತಾ, ಹನುಮಂತ…

ಅಮೃತಸರ: ದಸರಾ ಸಂಭ್ರಮದಲ್ಲಿದ್ದಾಗಲೇ ರೈಲು ಹರಿದು ಮೃತಪಟ್ಟವರಿಗಾಗಿ ಚಂಡೀಘಡ್ ಶ್ರೀ ರಾಮಲೀಲಾ ಸಮಿತಿ ಕಲಾವಿದರು, ಶ್ರೀರಾಮ, ಸೀತಾ, ಆಂಜನೇಯನ ವೇಷ ಧರಿಸಿ ಕ್ಯಾಂಡಲ್​ ಮಾರ್ಚ್​ ನಡೆಸಿದರು. ಹಲವರೊಂದಿಗೆ ಸೇರಿ ಕ್ಯಾಂಡಲ್​ ಹಿಡಿದು ರಸ್ತೆಯಲ್ಲಿ ಸಂಚರಿಸಿದರು.

ಅಮೃತಸರದಲ್ಲಿ ದಸರಾದಿನ ರಾವಣನ ಪ್ರತಿಕೃತಿ ದಹನ ನಡೆಯುತ್ತಿದ್ದಾಗ ರೈಲು ಹರಿದು ಜನರು ಬಲಿಯಾಗಿದ್ದಾರೆ. ಹಿಂದೆಂದೂ ಇಂಥ ದುರ್ಘಟನೆ ನಡೆದಿರಲಿಲ್ಲ. ನಮಗೆ ತುಂಬ ನೋವಾಗಿದೆ. ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳುತ್ತದೆ ಎಂಬ ನಂಬಿಕೆ ಇದೆ. ರಾಮಲೀಲಾ ಸಮಿತಿ ಕಲಾವಿದರಿಗೆ ಮುಂದಿನ ಬಾರಿ ಸರಿಯಾದ ಮಾರ್ಗದರ್ಶನ ನೀಡಿ ಎಂದು ಈ ಕ್ಯಾಂಡಲ್​ ಹಿಡಿದುಕೊಂಡು ಸಂಬಂಧಪಟ್ಟ ಅಧಿಕಾರಿಗಳ ಬಳಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಕಲಾವಿದ ಚಕ್ಷು ಪುರಿ ಹೇಳಿದರು.

ಶುಕ್ರವಾರ ನಡೆದ ರೈಲು ದುರಂತದಲ್ಲಿ 60 ಜನರು ಮೃತಪಟ್ಟಿದ್ದು 57 ಜನರು ತೀವ್ರಗಾಯಗೊಂಡಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50,000 ರೂ. ನೀಡಲು ಅನುಮೋದನೆ ನೀಡಿದ್ದಾರೆ.