Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ಅಮೃತಸರ ರೈಲು ದುರಂತ: ರೈಲ್ವೆ ಅಧಿಕಾರಿಗಳ ಬಳಿ ರೈಲು ಚಾಲಕ ಹೇಳಿದ್ದೇನು?

Sunday, 21.10.2018, 11:54 AM       No Comments

ಅಮೃತಸರ: ದಸರಾ ಹಬ್ಬದ ಸಂಭ್ರಮದಲ್ಲಿದ್ದ ದೇಶದ ಜನತೆಗೆ ದಿಢೀರ್​ ಶಾಕ್​ ನೀಡಿದ ಅಮೃತಸರ ರೈಲು ದುರಂತ ಸಂಬಂಧ ರೈಲು ಚಾಲಕ ಅರವಿಂದ್​ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.​

ರೈಲ್ವೆ ಅಧಿಕಾರಿಗಳಿಗೆ ಬರವಣಿಗೆ ರೂಪದಲ್ಲಿ ಹೇಳಿಕೆ ನೀಡಿರುವ ರೈಲು ಚಾಲಕ, ಘಟನೆಯ ದಿನ ನಾನು ರೈಲು ಹಳಿಯ ಬಳಿ ಜನಜಂಗುಳಿ ಇರುವುದನ್ನು ನೋಡಿದೆ. ತಕ್ಷಣ ಹಾರ್ನ್​ ಮಾಡಿದೆ. ಅಲ್ಲದೆ, ಎಮರ್ಜೆನ್ಸಿ ಬ್ರೇಕ್​ ಕೂಡ ಹಾಕಿದೆ. ಆದರೂ ರೈಲು ಕೆಲವು ಜನರ ಮೇಲೆ ಹರಿಯಿತು. ಯಾವಾಗ ಜನರ ದೊಡ್ಡ ಗುಂಪು ಕಲ್ಲುಗಳ ಎಸೆಯುವ ಮೂಲಕ ರೈಲಿನ ಮೇಲೆ ಆಕ್ರಮಣ ಮಾಡಲು ಮುಂದಾದರೂ ಅಷ್ಟೊತ್ತಿಗೆ ರೈಲು ಕೂಡ ನಿಂತಿತು. ಆದರೆ, ನನ್ನ ಪ್ರಯಾಣಿಕರ ಹಿತದೃಷ್ಟಿಯಿಂದ ನಾನು ರೈಲು ಚಾಲನೆಯನ್ನು ಮುಂದುವರಿಸಿದೆ ಎಂದು ತಿಳಿಸಿದ್ದಾನೆ.

ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ದೀಪಕ್​ ಮಿಶ್ರಾ ಅವರು ಘಟನಾ ಕುರಿತಾಗಿ ಮಾತನಾಡಿದ್ದು, ಇದರಲ್ಲಿ ಚಾಲಕನ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಚಾಲಕ ನಿಯಮಿತ ವೇಗದಲ್ಲಿ ರೈಲು ಚಾಲನೆ ಮಾಡುತ್ತಿದ್ದ. ಈ ದುರಂತವು ರೈಲು ಅಪಘಾತ ಪ್ರಕರಣವಲ್ಲ. ಇದು ಅತಿಕ್ರಮಣ ಪ್ರಕರಣವಾಗಿದ್ದು, ಮೃತಪಟ್ಟ ಕುಟುಂಬಗಳಿಗೆ ಯಾವುದೇ ಪರಿಹಾರವನ್ನು ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆಯಲ್ಲಿ ಪಂಜಾಬ್​ ಸರ್ಕಾರ ಶನಿವಾರ ಈ ದುರಂತವನ್ನು ಮ್ಯಾಜಿಸ್ಟ್ರಿಯಲ್ ತನಿಖೆಗೆ ಆದೇಶಿಸಿದ್ದು, ನಾಲ್ಕು ವಾರದೊಳಗೆ ವರದಿ ಸಲ್ಲಿಸುವಂತೆ ಪಂಜಾಬ್​ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​ ತಿಳಿಸಿದ್ದಾರೆ.

ದಸರಾ ಹಬ್ಬದ ದಿನವೇ ಪಂಜಾಬ್​ನ ಅಮೃತಸರ ಭೀಕರ ರೈಲು ದುರಂತಕ್ಕೆ ಸಾಕ್ಷಿಯಾಗಿತ್ತು. ಶುಕ್ರವಾರ ರಾತ್ರಿ ಜೋಡಿ ರೈಲು ಹಳಿ ಸಮೀಪದ ಮೈದಾನದಲ್ಲಿ ನಡೆಯುತ್ತಿದ್ದ ರಾವಣ ಪ್ರತಿಕೃತಿ ದಹನ ವೀಕ್ಷಿಸುತ್ತಿದ್ದವರ ಮೇಲೆ ಹರಿದ ಪರಿಣಾಮ 60 ಜನರು ಸಾವನ್ನಪ್ಪಿ, ನೂರಾರು ಜನರು ಗಾಯಗೊಂಡಿದ್ದರು. (ಏಜೆನ್ಸೀಸ್​)

ದುರಂತ ದಶಮಿ

ಅಮೃತಸರ ರೈಲು ದುರಂತ| ನಿರ್ಲಕ್ಷ್ಯದಿಂದಾದ ಅಪಘಾತದ ಹಿಂದೆ ಯಾವ ದುರುದ್ದೇಶಗಳೂ ಕೆಲಸ ಮಾಡಿಲ್ಲ ಎಂದ ಸಿಧು

ಅಮೃತಸರ ರೈಲು ದುರಂತ: ಹಳಿ ಮೇಲೆ ಜನರಿರುವುದು ತಿಳಿದಿರಲಿಲ್ಲ ಎಂದ ಚಾಲಕ

ಅಮೃತಸರ ರೈಲು ದುರಂತ: ಘಟನೆಯ ಹಿಂದಿನ ಭಯಾನಕ ಸತ್ಯಗಳಿವು

ಜೀವ ಉಳಿಸಿ ಜೀವಬಿಟ್ಟ ರಾವಣ

Leave a Reply

Your email address will not be published. Required fields are marked *

Back To Top