More

    ಅಮೃತಬಿಂದು; ವಿಷಯಗಳನ್ನು ವಿಷವೆಂದು ಭಾವಿಸಿ ತ್ಯಜಿಸಬೇಕು

    ಶ್ರೀ ಶೈವಾಗಮ

    ಭೋಗಪ್ರಯುಕ್ತವಾಂಛಾಯಾಂ ರಾಹಿತ್ಯಂ ಯದ್ಧಿ ಮಾನಸೇ | ಭೋಗಾಸಕ್ತಿಚ್ಯುತಿಃ ಪಂಚಚತ್ವಾರಿಂಶಂ ಸಮೀರಿತಮ್ ||

    ಶಬ್ದ ಸ್ಪರ್ಶಾದಿ ವಿಷಯಭೋಗಗಳಿಗೆ ಸಂಬಂಧಿಸಿದಂತೆ ಮನಸ್ಸಿನಲ್ಲಿ ಅತಿಯಾದ ಆಕಾಂಕ್ಷೆಗಳು ಜನಿಸದಂತೆ ನೋಡಿಕೊಳ್ಳುವುದು ಭೋಗಾಸಕ್ತಿಚ್ಯುತಿ ಎಂದು ಕರೆಯಲ್ಪಡುವ ನಲವತ್ತೈದನೆಯ ಶೀಲ. ‘ವಿಷಯಾನ್ ವಿಷವತ್ ತ್ಯಜ’ ಎಂಬ ಸೂಕ್ತಿಯಂತೆ ವಿಷಯಗಳನ್ನು ವಿಷವೆಂದು ಭಾವಿಸಿ ತ್ಯಜಿಸಬೇಕು. ಇಲ್ಲವೆ ನಿರಾಸಕ್ತಿಯಿಂದ ಅನುಭವಿಸಬೇಕು. ಆಸಕ್ತಿಯಿಂದ ವಿಷಯಗಳನ್ನು ಉಪಭೋಗಿಸಿದಾಗ ಮನದಲ್ಲಿ ವಾಸನೆ ಬೆಳೆಯುತ್ತದೆ. ಈ ವಾಸನೆಯಿಂದ ಮನಸ್ಸು ಮೋಹಗ್ರಸ್ತವಾಗುತ್ತದೆ. ಈ ವ್ಯಾಮೋಹವೇ ಸಾಂಸಾರಿಕ ಬಂಧನಕ್ಕೆ ಕಾರಣವಾಗುತ್ತದೆ. ಆದ್ದರಿಂದ ಧರ್ಮಕಾರ್ಯಗಳನ್ನು ಆಸಕ್ತಿಯಿಂದ ಮತ್ತು ವಿಷಯಗಳ ಉಪಭೋಗವನ್ನು ನಿರಾಸಕ್ತಿಯಿಂದ ಮಾಡಬೇಕು.

    | ಚಂದ್ರಜ್ಞಾನಾಗಮ (9.103 ) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts