ಒಡೆದ ತುಟಿಗೆ ಬಾಯ್ ಹೇಳಿ..ಇಲ್ಲಿದೆ ಚಳಿಗಾಲಕ್ಕೆ ಬೆಸ್ಟ್ ಲಿಪ್ ಕೇರ್ ಟಿಪ್ಸ್

ವಿಜಯವಾಣಿ ಸುದ್ದಿ ಜಾಲ

ಚಳಿಗಾಲದಲ್ಲಿ ತುಟಿ ಒಡೆದು ಕಿರಿಕಿರಿ ಮಾಡುತ್ತಿದ್ದರೆ, ದುಬಾರಿ ಕ್ರೀಂಗಳನ್ನು ಖರೀದಿ ಮಾಡಿ ಹಣ ವೆಚ್ಚ ಮಾಡುವ ಬದಲಿಗೆ ಈ ಮನೆ ಮದ್ದನ್ನು ಟ್ರೈ ಮಾಡಿ...ಒಡೆದ ತುಟಿಗೆ ಹೇಳಿ ಗುಡ್​ ಬೈ.

ಹೆಚ್ಚು ನೀರು ಕುಡಿಯಿರಿ

ಚಳಿಗಾಲದಲ್ಲಿ ಬಾಯಾರಿಕೆಯಾಗುವುದು ಕಡಿಮೆ ಹೀಗೆಂದು, ನೀವು ನೀರು ಕುಡಿಯುವುದನ್ನು ನಿಲ್ಲಿಸಿದರೆ, ಚರ್ಮ ಒಡೆದು ತುರಿಕೆ ಕಾಡುವುದು ಗ್ಯಾರಂಟಿ. ಹೀಗಾಗಿ ಹೆಚ್ಚು ನೀರು ಕುಡಿಯುವತ್ತ ಗಮನಹರಿಸಿ.

ನಾಲಿಗೆಯನ್ನು ತುಟಿಗೆ ಟಚ್ ಮಾಡ್ಬೇಡಿ

ತುಟಿ ಒಣಗಿದಾಗ ಲಿಪ್​ ಬಾಂಬ್​ ಹಚ್ಚಿ. ಆದರೆ, ನಾಲಿಗೆಯಿಂದ ತುಟಿ ಹುಜ್ಜುವುದರಿಂದ ಲಾಲಾರಸವು ಒಣಗುವವರೆಗೂ ಹಾಯಾಗಿ ಎನಿಸಿದರೆ, ನಂತರ ಇನ್ನಷ್ಟು ಬಿರುಕು ಬಿಟ್ಟು, ತುಟಿ ನೋವಿಗೆ ಕಾರಣವಾಗುತ್ತೆ.

ತುಟಿ ಮೇಲೆ ಎದ್ದ ಚರ್ಮ ಕೀಳಬೇಡಿ

ನೀರು ಕುಡಿಯದೆ ಇದ್ದಾಗ ಅಥವಾ ಸಾಮಾನ್ಯವಾಗಿ ಏಳುವ ಚರ್ಮವನ್ನು ಹಲ್ಲಿನಿಂದ ಅಥವಾ ಕೈನಿಂದ ಎಳೆಯುವ ಅಭ್ಯಾಸವಿದ್ದರೆ ಬಿಟ್ಟು ಬಿಡಿ..ಇದು ಒಣ ತುಟಿಯು ಗಾಯಕ್ಕೊಳಗಾಗುವಂತೆ ಮಾಡುವುದು ದಿಟ.

ರಾತ್ರಿ ವೇಳೆ ತುಟಿ ಬಗ್ಗೆ ಗಮನಕೊಡಿ

ಹಗಲಿನಲ್ಲಿ ಕೇರ್​ ಮಾಡುವಷ್ಟೇ ರಾತ್ರಿ ವೇಳೆ ತುಟಿಯ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ರಾತ್ರಿ ಮಲಗುವ ಮುನ್ನ ತುಟಿ ಸ್ವಚ್ಛಗೊಳಿಸಿ, ಪೆಟ್ರೋಲಿಯಂ ಜೆಲ್​ ಹಚ್ಚುವ ಮೂಲಕ ಕೇರ್​ ಮಾಡಬೇಕಾಗುತ್ತದೆ.

ಹೀಗೆ ಮಾಡಬೇಡಿ

ತುಟಿಗೆ ನಿಂಬೆ ಹಣ್ಣು, ಸಕ್ಕರೆಯನ್ನು ಉಜ್ಜಬೇಡಿ..ಪರಿಮಳಯುಕ್ತ ಲಿಪ್​ ಬಾಮ್​ ಅಥವಾ ವ್ಯಾಸ್​​ಲಿನ್​ಗಳನ್ನು ಒಡೆದ ಚರ್ಮದ ಮೇಲೆ ಬಳಕೆ ಮಾಡಬೇಡಿ. ಪದೇ ಪದೇ ತುಟಿ ತೊಳೆಯುವುದು..ನಿಮ್ಮ ಚರ್ಮ ಕೀಳುವ ಕೆಟ್ಟ ಅಭ್ಯಾಸ ಇನ್ನೂ ಬಿಟ್ಟುಬಿಡಿ.