ಪಪ್ಪಾಯಿ ಹಣ್ಣಿನಲ್ಲಿದೆ ಆರೋಗ್ಯದ ರಹಸ್ಯ!

ವಿಜಯವಾಣಿ ಸುದ್ದಿ ಜಾಲ

ಪಪ್ಪಾಯಿ ಹಣ್ಣ ಆರೋಗ್ಯಕ್ಕೆ ಕಾಂತಿಯುತ ತ್ವಚೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ಜೀವಸತ್ವಗಳು, ಉತ್ಕರ್ಷಣ ನಿರೋಧಕ, ಜೀರ್ಣಕಾರಿ ಕಿಣ್ವಗಳಿಂದ ಪಪ್ಪಾಯ ಕೂಡಿದೆ.

ಆರೋಗ್ಯಕ್ಕೆ ಮದ್ದು

ಪಪ್ಪಾಯ ಹಣ್ಣು ನಿತ್ಯ ತಿನ್ನುವುದರಿಂದ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಹೃದಯದ ಆರೋಗ್ಯ ಮತ್ತು ಒಟ್ಟಾರೆ ಆರೋಗ್ಯವು ಉತ್ತಮಗೊಳ್ಳುತ್ತದೆ.

ಜೀರ್ಣಕ್ರಿಯೆ

ಪಪ್ಪಾಯದಲ್ಲಿರುವ ಪಪೈನ್ ಎಂಬ ಕಿಣ್ವ ಮತ್ತು ಅಧಿಕ ನಾರಿನಾಂಶವು ತಿಂದ ಆಹಾರವನ್ನು ಸುಲಭವಾಗಿ ಜೀರ್ಣಗೊಳಿಸುತ್ತದೆ. ಇಷ್ಟೇ ಅಲ್ಲದೇ ಮಲವನ್ನು ಮೃದುಗೊಳಿಸಿ ಸರಾಗವಾದ ಮಲವಿಸರ್ಜನೆ ಸಹಾಯ ಮಾಡುತ್ತದೆ.

ಚರ್ಮದ ಕಾಂತಿ ಹೆಚ್ಚಳ

ಪಪ್ಪಾಯದಲ್ಲಿರುವ ವಿಟಮಿನ್​ ಮತ್ತು ಆಂಟಿಆಕ್ಸಿಡೆಂಟ್‌ಗಳು ಚರ್ಮವು ಹಾನಿಯಾಗದಂತೆ ರಕ್ಷಿಸುತ್ತವೆ. ಇದರ ನಿಯಮಿತ ಸೇವನೆಯಿಂದ ಕಾಂತಿಯುತ ಮತ್ತು ಆರೋಗ್ಯಕರ ಚರ್ಮವನ್ನು ಪಡೆಯಬಹುದು.

ಕಣ್ಣಿನ ಆರೋಗ್ಯ

ಪಪ್ಪಾಯ ಹಣ್ಣಿನಲ್ಲಿರುವ ಬೀಟಾ ಕ್ಯೋಟಿನ್, ಲುಟಿನ್ ಮತ್ತು ಜಿಯಾಕ್ಸಾಂಥಿನ್ ಎನ್ನುವ ಅಂಶ ದೃಷ್ಟಿಹೀನತೆ ಕಾಡದಂತೆ ಕಣ್ಣಿನ ದೃಷ್ಟಿಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ತೂಕ ಇಳಿಕೆಗೆ ಸಹಾಯ

ಪಪ್ಪಾಯಿಯಲ್ಲಿ ಕ್ಯಾಲೊರಿಗಳು ತುಂಬಾ ಕಡಿಮೆ ಮತ್ತು ನಾರಿನಾಂಶ ಹೆಚ್ಚಿರುತ್ತದೆ. ಇದು ಹೊಟ್ಟೆ ತುಂಬಿದ ಅನುಭವವನ್ನು ನೀಡಿ ತೂಕವನ್ನು ನಿಯಂತ್ರಿಸಲು ನೆರವಾಗುತ್ತದೆ.

ಉರಿಯೂತ ನಿವಾರಣೆ

ಪಪ್ಪಾಯಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಿ, ದೇಹದಲ್ಲಿ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.