ನವೆಂಬರ್​ನಲ್ಲಿ ಪ್ರೇಮಿ ಜೊತೆಗೆ ಭೇಟಿ ನೀಡಲು ಕರ್ನಾಟಕದ ಈ ಪ್ಲೇಸ್ ಬೆಸ್ಟ್

ವಿಜಯವಾಣಿ ಸುದ್ದಿ ಜಾಲ

ನವೆಂಬರ್​ನಿಂದ ಆರಂಭವಾಗುವ ಚಳಿಗಾಲದಲ್ಲಿ ಸಾಮಾನ್ಯವಾಗಿ ಪ್ರೇಮಿಗಳು ಪ್ರವಾಸಕ್ಕೆ ಯೋಜನೆ ರೂಪಿಸಿಕೊಳ್ಳುತ್ತಾರೆ. ನೀವು ಆ ಲಿಸ್ಟ್​​ನಲ್ಲಿದ್ದಾರೆ. ಕರ್ನಾಟಕದ ಈ ಸ್ಥಳಕ್ಕೆ ಭೇಟಿ ನೀಡಿ.. ಇಲ್ಲಿ ಬೆಸ್ಟ್ ಎಕ್ಸಪೀರಿಯನ್ಸ್ ಸಿಗೋದು ಗ್ಯಾರಂಟಿ

ಕೂರ್ಗ್​​

ಭಾರತದ ಸ್ಕಾಟ್ಲೆಂಡ್​ ಎಂದು ಕರೆಯುವ ಕೂಡಗಿನಲ್ಲಿ ಕಾಫಿ ತೋಟ, ಹಸಿರು ಕಾಡು, ಮಂಜಿನಿಂದ ಕೂಡಿದ ಬೆಟ್ಟಗಳು ಬೇರೆಯದ್ದೇ ಮಜಲನ್ನು ನೀಡುತ್ತದೆ. ಪ್ರೇಮಿ ಜೊತೆ ಭೇಟಿ ನೀಡಲು ಇದು ಸೂಕ್ತ ತಾಣ.

ಸಕಲೇಶಪುರ

ಬಿಸ್ಲೆ ಘಾಟ್​​, ಮಂಜೇಹಳ್ಳಿ ಜಲಪಾತ, ಸಕಲೇಶ್ವರ ದೇವಸ್ಥಾನ, ಶೆಟ್ಟಿಹಳ್ಳಿ ರೋಜರಿ ಚರ್ಚ್​​, ಜೇನು ಕಲ್ಲು ಗುಡ್ಡ, ಅಗ್ನಿ ಗುಡ್ಡ ಬೆಟ್ಟ ಸುತ್ತಾಡಬಹುದು.

ಹಂಪಿ

ಬೇಸಿಗೆಯಲ್ಲಿ ಹಂಪಿ ನೋಡಲು ಸಾಧ್ಯವಿಲ್ಲ. ಆ ಕಾರಣದಿಂದಾಗಿ ಈ ಚಳಿಗಾಲದಲ್ಲಿ ಪ್ರೇಮಿ ಜೊತೆಗೆ ಹಂಪಿಗೆ ಭೇಟಿ ನೀಡಿ. ಫೋಟೋ ಶೂಟ್​ಗೆ ಉತ್ತಮ ಸ್ಥಳ ಜೊತೆಗೆ ರೆಸಾರ್ಟ್​​​ಗಳು ಇರುವ ಕಾರಣ ಉಳಿದುಕೊಳ್ಳಲು ಯಾವುದೇ ಸಮಸ್ಯೆ ಇರೋದಿಲ್ಲ.

ಚಿಕ್ಕಮಗಳೂರು

ಮುಳ್ಳಯ್ಯನಗಿರಿ, ಬಾಬಾ ಬುಡನ್​ ಗಿರಿ, ಕೆಮ್ಮಣ್ಣುಗುಂಡಿ, ಭದ್ರಾ ವನ್ಯಜೀವಿ ಅಭಯಾರಣ್ಯ ಸೇರಿದಂತೆ ಬೆಟ್ಟ, ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ದಾಂಡೇಲಿ

ಉತ್ತರ ಕನ್ನಡದಲ್ಲಿರುವ ದಾಂಡೇಲಿ ಪ್ರವಾಸಕ್ಕೆ ಬೆಸ್ಟ್​ ಪ್ಲೇಸ್​. ರಿವರ್​ ರಾಫ್ಟಿಂಗ್​​, ಪ್ರಾಣಿ ಪಕ್ಷಿ ನೋಡಲು, ಪ್ರಕೃತಿಯ ಸೌಂದರ್ಯ, ಕವಳ ಗುಹೆ, ಸಿಂಥೇರಿ ರಾಕ್ಸ್​​​ ಅನ್ನು ಕಣ್ತುಂಬಿಕೊಳ್ಳಬಹುದು.

ಉಡುಪಿ

ಉಡುಪಿಯಲ್ಲಿರುವ ಬೀಚ್​ಗಳಿಗೆ ಭೇಟಿ ನೀಡಬಹುದು. ಇಲ್ಲಿನ ಮಲ್ಪೆ ಬೀಚ್​, ಸೇಂಟ್​ ಮೇರಿಸ್ ದ್ವೀಪ, ಕಾಪು, ಮರವಂತೆ ಬೀಚ್​​​ ಹಾಗೂ ಡೆಲ್ಟಾ ಬೀಚ್ನಲ್ಲಿ ನಿಮ್ಮ ರಜಾ ದಿನವನ್ನು ಕಳೆಯಬಹುದು. ಪ್ರಪೋಸ್ ಮಾಡಲು ಇದು ಸರಿಯಾದ ಸ್ಥಳವಾಗಿದೆ.