ವಿಜಯವಾಣಿ ಸುದ್ದಿ ಜಾಲ
ಮೊಬೈಲ್ ನೋಡುವುದಕ್ಕಿಂತ ಕತೆ, ಕವನ, ಕಾದಂಬರಿ ಪುಸ್ತಕ ಓದುವುದು ಮನಸ್ಸಿಗೆ ನೆಮ್ಮದಿಯನ್ನು ನೀಡುವ ಸುಂದರ ಮದ್ದು. ಇಲ್ಲಿ ಮೆಸೇಜ್ಗಳ ಕಿರಿಕಿರಿ ಇಲ್ಲ. ಹೀಯಾಳಿಸುವವರು ಕಾಣೋದಿಲ್ಲ..ನಿಮ್ಮನ್ನು ಅಭೂತಪೂರ್ವ ವ್ಯಕ್ತಿಯನ್ನಾಗಿ ಬದಲಾಯಿಸುವ ಶಕ್ತಿ ಮಾತ್ರ ಈ ಪುಸ್ತಕ ಎನ್ನುವ ಔಷಧಿಗೆ ಇದೆ.
ಈ ದೀಪಾವಳಿ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆ ಇದೆ. ಅದನ್ನು ಅರ್ಥಪೂರ್ಣವಾಗಿ ಬಳಕೆ ಮಾಡಬೇಕು ಎಂದು ಬಯಸಿದ್ದರೆ..ಕನ್ನಡದ ಈ ಪುಸ್ತಕ ಓದಲು ಮೀಸಲಿಡಿ..ಒಂದೇ ಗುಟುಕಿನಲ್ಲಿ ಓದಬಹುದಾದ ಪುಸ್ತಕ..ಎಲ್ಲಿಯೂ ಬೋರ್ ಹೊಡಿಸುವುದು ಇಲ್ಲ.
ಚಂದ್ರಶೇಖರ್ ಕಂಬಾರರು ಬರೆದಿರುವ ಜ್ಞಾನಪೀಠ ಪ್ರಶಸ್ತಿ ವಿಜೇತ ಪುಸ್ತಕ ಜಿಕೆ ಮಾಸ್ತರರ ಪ್ರಣಯ ಪ್ರಸಂಗ. ನೀವೊಮ್ಮೆ ಕುಳಿತು ಓದಲು ಶುರು ಮಾಡಿದರೆ, ಅರ್ಧದಿನದಲ್ಲೇ ಮುಗಿಸುತ್ತೀರಿ. ಇಲ್ಲಿ ಜಿಕೆ ಮಾಸ್ತರರ ಜೀವನದಲ್ಲಿ ನಡೆಯುವ ಹಾಸ್ಯಮಯ ಪ್ರೇಮದ ಬಗ್ಗೆ ಚಿತ್ರಿಸಲಾಗಿದೆ.
ಶಿವ ಕುಮಾರ್ ಮಾವಲಿ ರಚಿಸಿರುವ ಟೈಪಿಸ್ಟ್ ತಿರಸ್ಕರಿಸಿದ ಕತೆಗಳು ಒಂದು ಕಥಾ ಸಂಕಲನ. 30 ಸಣ್ಣ ಕತೆಗಳು ಇದರಲ್ಲಿವೆ. ಇಂದಿನ ಕಾಲಘಟ್ಟಕ್ಕೆ ಸರಿಯಾಗಿ ಹೊಂದಿಕೆಯಾಗುವಂತಹ ಕತೆಯನ್ನು ಶಿವಕುಮಾರ್ ಮಾವಲಿ ಅವರು ಕಟ್ಟಿಕೊಟ್ಟಿದ್ದಾರೆ.
ಕನ್ನಡದ ಲೇಖಕ ಮತ್ತು ಪತ್ರಕರ್ತರಾದ ದಯಾನಂದ ಅವರು ರಚಿಸಿರುವ ದೇವರ ಕಚ್ಚು ಸೇಬು ಕಥಾ ಸಂಕಲನವಾಗಿದೆ. ಇಂದಿನ ಯಾಂತ್ರಿಕ ಬದುಕು..ಬಿಡಿಸಿಕೊಳ್ಳಲಾಗದ ಬಂಧನಗಳ ಮಧ್ಯ ಇರುವ ತಡಕಾಟ, ಪ್ರೇಮದ ತೊಳಲಾಟವನ್ನು ಕಟ್ಟಿಕೊಟ್ಟಿದ್ದಾರೆ ಲೇಖಕರು.
ನಟಿ, ನಿರ್ದೇಶಕಿ ರಂಜನಿ ರಾಘವನ್ ರಚನೆಯ ಕತೆ ಡಬ್ಬಿ ಈಗಾಗಲೇ ಸಾಕಷ್ಟು ಹೆಸರು ಮಾಡಿದೆ. ಮನುಷ್ಯನ ಜೀವನ, ಹಳ್ಳಿ ಸೊಗಡು, ಜನರ ಜೀವನ ಶೈಲಿಯ ಸುತ್ತ ಸಾಕಷ್ಟು ಕತೆಗಳನ್ನು ಬರೆದಿದ್ದಾರೆ.
ಮೊದಲಿಗೆ ಕತೆ ಓದಲು ಆರಂಭಿಸುವವರು ತೇಜಸ್ವಿ ಅವರ ಪುಸ್ತಕವನ್ನೇ ಆಯ್ಕೆ ಮಾಡುತ್ತಾರೆ. ಅದರಂತೆ ನೀವು ಸಹ ಪರಿಸರದ ಕತೆಗಳನ್ನು ಓದಬಹುದು. ಗೊತ್ತೇ ಇರದ ಜೀವಿ ಹಾಗೂ ಗೊತ್ತಿರುವ ಜೀವಿಗಳ ವಿಶೇಷ ಗುಣದ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದೆ.