ಸೌತ್​ ಇಂಡಿಯನ್ ಫೀಲ್ ಗುಡ್ ಸಿನಿಮಾಗಳಿವು

ವಿಜಯವಾಣಿ ಸುದ್ದಿ ಜಾಲ

ಕಂಡು ಕೊಂಡೇನ್​ ಕಂಡು ಕೊಂಡೇನ್

ಜೇನ್ ಆಸ್ಟಿನ್ ಅವರ 1811ರ 'ಸೆನ್ಸ್ ಅಂಡ್ ಸೆನ್ಸಿಬಿಲಿಟಿ' ಕಾದಂಬರಿ ಆಧರಿಸಿ ನಿರ್ಮಿಸಿದ ಕಂಡು ಕೊಂಡೇನ್​ ಕಂಡು ಕೊಂಡೇನ್ ಫೀಲ್​ ಗುಡ್ ಸಿನಿಮಾ. ನಾಲ್ಕೈದು ಬಾರಿ ನೋಡಿದರೂ ಬೋರ್ ಒಡಿಸದೆ..ನೋಡಿಸಿಕೊಂಡು ಹೋಗುತ್ತದೆ. ಟಬು, ಐಶ್ವರ್ಯಾ ರೈ, ಮಮ್ಮುಟಿ, ಅಬ್ಬಾಸ್, ಅಜಿತ್ ಕುಮಾ ನಟನೆಯ ಸಿನಿಮಾವಿದು.

ಅಲೈಪಾಯುದಯ್​​​

ಮಣಿರತ್ನಂ ನಿರ್ದೇಶನದ ಅಲೈಪಾಯುದಯ್​​​ ಮತ್ತೆ ಮತ್ತೆ ನೋಡಿಸಿಕೊಳ್ಳುವ ಎಂದಿಗೂ ಬೋರ್ ಒಡಿಸದ ಸಿನಿಮಾವಾಗಿದೆ. ಇದರಲ್ಲಿನ ಪ್ರತೀ ಹಾಡು ನಿಮಗೆ ಕನೆಕ್ಟ್ ಆಗೋದು ಗ್ಯಾರಂಟಿ. ಮಾಧವನ್​, ಶಾಲಿನಿ ನಟನೆಯ ಸಿನಿಮಾ ಇದಾಗಿದೆ.

ಒಂದು ಮೊಟ್ಟೆಯ ಕತೆ

ರಾಜ್​ ಬಿ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಒಂದು ಮೊಟ್ಟೆಯ ಕತೆ ಫೀಲ್​ ಗುಡ್​​​ ಸಿನಿಮಾವಾಗಿದೆ. ಬೋಳು ತಲೆಯ ಯುವಕನಿಗೆ ಹುಡುಗಿ ಹುಡುಕುವ ಸುತ್ತ ಕತೆ ಕಟ್ಟಲಾಗಿದೆ. ಸಿನಿಮಾದ ಹಾಡು ಇಷ್ಟವಾಗುತ್ತದೆ.

777 ಚಾರ್ಲಿ

ರಕ್ಷಿತ್​ ಶೆಟ್ಟಿ, ಸಂಗೀತ ಶೃಂಗೇರಿ ನಟಿಸಿರುವ, ಕಿರಣ್​ ರಾಜ್​ ನಿರ್ದೇಶನದ ಚಾರ್ಲಿ ಸಿನಿಮಾವು ಸಾಕಷ್ಟು ಹಿಟ್ ಕಂಡಿತ್ತು. ಒರಟು ಸ್ವಭಾವದ ಯುವಕನ ಮನಸ್ಸು ಕರಗಿಸುವ ಶ್ವಾನದ ಸುತ್ತ ಕತೆ ಇದೆ. ನಿರೂಪಣೆ, ಸಂಗೀತ ಮತ್ತೆ ನೋಡಿಸಿಕೊಳ್ಳುವಂತೆ ಮಾಡುತ್ತದೆ.

ಬೆಂಗಳೂರು ಡೇಸ್​​

ನಜ್ರಿಯಾ, ದುಲ್ಕರ್​​, ನಿವಿನ್​ ಪೌಲಿ ನಟನೆಯ ಬೆಂಗಳೂರು ಡೇಸ್ ಚಿತ್ರದ ನಿರೂಪಣೆ, ಕತೆ ಹಾಡು ಎಲ್ಲವೂ ಹೆಚ್ಚು ಇಷ್ಟವಾಗುತ್ತದೆ. ಕನಸುಗಳೊಂದಿಗೆ ಪ್ರೀತಿಯನ್ನು ಬೆನ್ನಟ್ಟುವ ಮೂವರು ಸೋದರ ಸಂಬಂಧಿಗಳ ಸುತ್ತ ಕತೆ ಕಟ್ಟಲಾಗಿದೆ.

ಮಹೇಶಿಂತೆ ಪ್ರತೀಕಾರಂ

ಕೇರಳದ ಇಡುಕ್ಕಿ ಜಿಲ್ಲೆಯ ಸುತ್ತ..ಒಬ್ಬ ಕ್ಯಾಮೆರಾ ಮ್ಯಾನ್​, ಆತನ ಸರಳತೆ..ಪ್ರೀತಿಯ ಸುತ್ತ ಕತೆಯನ್ನು ಹೆಣೆಯಲಾಗಿದೆ. ಈ ಸಿನಿಮಾದ ಇಡುಕ್ಕಿ ಹಾಡಂತು ನಿಮ್ಮ ಪ್ಲೇ ಲಿಸ್ಟ್ ಸೇರೋದ್ರಲ್ಲಿ ಎರಡು ಮಾತಿಲ್ಲ. ಫಹಾದ್​​​​ ಅದ್ಭುತವಾಗಿ ನಟಿಸಿದ್ದಾರೆ.

ಬೊಮ್ಮರಿಲ್ಲು

ತಮಿಳಿನಲ್ಲಿಯೂ ಡಬ್​ ಆಗಿರುವ ಬೊಮ್ಮರಿಲ್ಲು ಸಿನಿಮಾ ಕಾಮಿಡಿ, ಫ್ಯಾಮಿಲಿ ಎಂಟರ್​ಟೈನ್​ಮೆಂಟ್ ಸಿನಿಮಾವಾಗಿದೆ. ಮೆಚ್ಯೂರ್ಡ್​ ಹುಡುಗ..ಪೆದ್ದು ಪೆದ್ದು ಮಾತನಾಡುವ ಹುಡುಗಿ ಪ್ರೀತಿಯಲ್ಲಿ ಬಿದ್ದಾಗ ಆಗುವ ಘಟನೆಗಳ ಸುತ್ತ ಸಿನಿಮಾ ಸುತ್ತುತ್ತದೆ. ಎಂದಿಗೂ ಬೋರ್​ ಒಡಿಸದ ಸಿನಿಮಾ.

ನುವ್ವೊಸ್ತಾನಂಟೆ ನೇನೊದ್ದಾಂಟಾನ

ತ್ರಿಷಾ ಮತ್ತು ಸಿದ್ಧಾರ್ಥ್​ ನಟನೆಯ ನುವ್ವಸ್ತಾನಂಟೆ ನೇನೊದ್ದಾಂಟಾನ ಸಿನಿಮಾವು ಫೀಲ್​ ಗುಡ್​ ಚಿತ್ರವಾಗಿದೆ. ಪ್ರೀತಿಯ ಮೇಲೆ ಬೇಸರ ಮೂಡಿದಾಗ ಈ ಚಿತ್ರವನ್ನೊಮ್ಮೆ ವೀಕ್ಷಿಸಿದರೆ ಸಾಕು ತಪ್ಪು ಗ್ರಹಿಕೆ ಮಾಯವಾಗೋದಂತು ಗ್ಯಾರಂಟಿ.