ಈ ಮಸಾಲೆಗಳು ಗಂಟಲು ಕಿರಿಕಿರಿ, ಸೋರುವ ಮೂಗಿಗೆ ಮದ್ದು

ವಿಜಯವಾಣಿ ಸುದ್ದಿ ಜಾಲ

ಮಳೆ ಮತ್ತು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಕೆಮ್ಮ, ನೆಗಡಿ, ವೈರಲ್​ ಜ್ವರದಂತ ಸೋಂಕುಗಳು ಮನೆಯಲ್ಲಿಯೇ ಸಿಗುವ ಕೆಲವೊಂದು ಮಸಾಲೆ ಪದಾರ್ಥ ಬಳಸಿಕೊಂಡು ಕಿರಿಕಿರಿ ದೂರವಾಗಿಸಿಕೊಳ್ಳಿ.

ಶೀತವಾಗುವ ಮುನ್ಸೂಚನೆ ಸಿಕ್ಕುತ್ತಲೇ ಅದಕ್ಕೆ ಮದ್ದನ್ನು ಎರೆದುಕೊಳ್ಳಬೇಕು. ಇಲ್ಲವಾದಲ್ಲಿ ಗಂಟಲು ಕಿರಿಕಿರಿಯಾಗಿ ಕಾಡುವ ಕೆಮ್ಮು, ನಿರಂತರ ಸೋರುವ ಮೂಗು ನಿಮ್ಮ ನಿದ್ದೆ, ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತದೆ.

ಅರಿಶಿನ

ಅರಿಶಿನ ಆಯುರ್ವೇದದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಶಕ್ತಿಶಾಲಿ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಗಂಟಲಲ್ಲಿ ಕಾಡುವ ಕೆರೆತ ನೋವು ಶಮನಕ್ಕೆ ಸಹಾಯ ಮಾಡುತ್ತದೆ.

ಕರಿಮೆಣಸು

ಕರಿಮೆಣಸು ಇದನ್ನು ಪಾನೀಯಗಳಲ್ಲಿ ಅಥವಾ ಅರಿಶಿನ ಹಾಲಿನಲ್ಲಿ ಸೇರಿಸಿ ಸೇವಿಸಬಹುದಾಗಿದೆ. ಮೂಗು ಸೋರುವಿಕೆ ನಿಲ್ಲಲ್ಲು ಸಹಾಯ ಮಾಡುತ್ತದೆ.

ಶುಂಠಿ

ಶುಂಠಿ ಸಹ ಉರಿಯೂತ ನಿವಾರಕ ಗುಣ ಹೊಂದಿದೆ. ಗಂಟಲಿನ ಅಸ್ವಸ್ಥತೆಯನ್ನು ಸುಲಭವಾಗಿ ಕಡಿಮೆ ಮಾಡುತ್ತದೆ. ಬಿಸಿ ಬಿಸಿ ಶುಂಠಿ ಚಹಾ ಗಂಟಲಿಗೆ ಹಿತ.

ಚಕ್ಕೆ

ದಾಲ್ಚಿನ್ನಿಯಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಸಂಯುಕ್ತಗಳಿವೆ. ಇದನ್ನು ಅಲ್ಪ ಪ್ರಮಾಣದಲ್ಲಿ ಬಿಸಿ ನೀರಿಗೆ ಅಥವಾ ಚಹಾಗೆ ಸೇರಿಸಿ ಸೇವಿಸುವುದರಿಂದ ಗಂಟಲ ಕಿರಿಕಿರಿ ಮಾಯವಾಗುತ್ತದೆ.

ಲವಂಗ

ಲವಂಗದಲ್ಲಿ ಯುಜೆನಾಲ್ ಎನ್ನುವ ಅಂಶವಿದೆ. ಇದು ಆಂಟಿಆಕ್ಸಿಡೆಂಟ್ ಮತ್ತು ಆಂಟಿಮೈಕ್ರೊಬಿಯಲ್ ಗುಣ ಹೊಂದಿದೆ. ಬಿಸಿ ಪಾನೀಯಗಳೊಂದಿಗೆ ಕುಡಿದಾಗ ಗಂಟಲಿಗೆ ಹಿತ ನೀಡುತ್ತದೆ.

ಏಲಕ್ಕಿ

ಏಲಕ್ಕಿಯು ಉತ್ಕರ್ಷಣ ನಿರೋಧಕಗುಣಗಳನ್ನು ಹೊಂದಿದ್ದು, ಬಾಯಿಯನ್ನು ತಾಜಾವಾಗಿಡಲು ಸಹಾಯ ಮಾಡುತ್ತದೆ.