ವಿನಾಯಕ ನಾಯಕ
ಪತ್ರಿಕೋದ್ಯಮ ವಿದ್ಯಾರ್ಥಿನಿ
ರಶ್ಮಿಕಾ ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಮನೋವಿಜ್ಞಾನ, ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು. ಕಾಲೇಜು ದಿನಗಳಲ್ಲಿ ಮಾಡಲಿಂಗ್ ಕ್ಷೇತ್ರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಹಲವು ಸ್ಪರ್ಧೆಗಳಲ್ಲಿ ವಿಜೇತರಾಗಿ ಗಮನ ಸೆಳೆದಿದ್ದರು.
ಕಿರಿಕ್ ಪಾರ್ಟಿ ಖ್ಯಾತಿ
ರಶ್ಮಿಕಾ 2016ರಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ' ಎಂಬ ಕನ್ನಡ ಚಲನಚಿತ್ರದ ಮೂಲಕ ನಾಯಕಿಯಾಗಿ ನಟನೆಗೆ ಪದಾರ್ಪಣೆ ಮಾಡಿದರು. ಈ ಸಿನಿಮಾವು ದೊಡ್ಡ ಯಶಸ್ಸು ಗಳಿಸಿ ಇವರಿಗೆ ಭಾರಿ ಜನಪ್ರಿಯತೆ ತಂದುಕೊಟ್ಟಿತು.
ತೆಲುಗು ರಂಗಕ್ಕೆ ಕಾಲಿಟ್ಟ ಕನ್ನಡತಿ
ಕನ್ನಡದ ನಂತರ ತೆಲುಗು ಚಲನಚಿತ್ರರಂಗಕ್ಕೆ ಕಾಲಿಟ್ಟ ಇವರು 'ಚಾಲೋ' ಮತ್ತು 'ಗೀತಾ ಗೋವಿಂದಂ' ಸಿನಿಮಾಗಳ ಮೂಲಕ ಭಾರಿ ಯಶಸ್ಸು ಕಂಡರು. ಈ ಚಿತ್ರಗಳು ಇವರಿಗೆ ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದ ಮಾರುಕಟ್ಟೆ ಹಾಗೂ ಖ್ಯಾತಿಯನ್ನು ತಂದುಕೊಟ್ಟವು.
ನ್ಯಾಷನಲ್ ಕ್ರಶ್ ಖ್ಯಾತಿ
ಅಲ್ಲು ಅರ್ಜುನ್ ಜೊತೆ ನಟಿಸಿದ 'ಪುಷ್ಪ: ದಿ ರೈಸ್' ಸಿನಿಮಾ ಇವರ ವೃತ್ತಿಜೀವನದಲ್ಲಿ ದೊಡ್ಡ ಮೈಲಿಗಲ್ಲಾಯಿತು. ಈ ಚಿತ್ರದ ಮೂಲಕ ಇವರು ದೇಶಾದ್ಯಂತ 'ನ್ಯಾಷನಲ್ ಕ್ರಶ್' ಎಂದು ಗುರುತಿಸಲ್ಪಟ್ಟು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು.
ಬಾಲಿವುಡ್‌ಗೆ ಎಂಟ್ರಿ
ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಜೊತೆ 'ಗುಡ್‌ಬೈ' ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದರು. ನಂತರ ರಣಬೀರ್ ಕಪೂರ್ ಜೊತೆ ನಟಿಸಿದ 'ಅನಿಮಲ್' ಹಾಗೂ ವಿಕಿ ಕೌಶಲ್ ಜೊತೆ ನಟಿಸಿದ 'ಛಾವಾ' ಚಿತ್ರಗಳು ಭಾರಿ ವಾಣಿಜ್ಯ ಯಶಸ್ಸು ಗಳಿಸಿದವು.
ವಿಜಯ್ ದೇವರಕೊಂಡ ಪತ್ನಿ
ರಶ್ಮಿಕಾ ಮಂದಣ್ಣ ದೀರ್ಘಕಾಲದ ಗೆಳೆಯ ನಟ ವಿಜಯ ದೇವ್ ಕೊಂಡ ಅವರನ್ನು ವಿವಾಹವಾಗಿದ್ದಾರೆ. ಇವರು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಯಶಸ್ವಿ ನಾಯಕಿಯಾಗಿ ನಟಿಸುತ್ತಾ ಜಾಗತಿಕ ಮಟ್ಟದಲ್ಲಿಯೂ ಭಾರತೀಯ ಫ್ಯಾಷನ್ ಪ್ರತಿನಿಧಿಸುತ್ತಿದ್ದಾರೆ.