ನೋಡಲೇಬೇಕಾದ ಕನ್ನಡದ 90ರ ಸಿನಿಮಾಗಳಿವು

ವಿಜಯವಾಣಿ ಸುದ್ದಿ ಜಾಲ

ಒಂದು ಮುತ್ತಿನ ಕಥೆ

1967ರಲ್ಲಿ ರಿಲೀಸ್​ ಆದ ಶಂಕರ್​ ನಾಗ್​ ನಿರ್ದೇಶನದ ಒಂದು ಮುತ್ತಿನ ಕತೆ. ಸಿನಿಮಾದಲ್ಲಿ ರಾಜ್​ ಕುಮಾರ್​ ಸೇರಿದಂತೆ ಘಟಾನುಘಟಿ ನಟ-ನಟಿಯರು ಬಣ್ಣ ಹಚ್ಚಿದ್ದಾರೆ. ಮುತ್ತು ಹುಡುಕುವ ಕಾರ್ಮಿಕರ ಸಮಸ್ಯೆ, ಅವರ ಮುಗ್ಧತೆ ದುರ್ಬಳಕೆ ಸುತ್ತ ಕತೆ ಹೆಣೆಯಲಾಗಿದೆ.

ದ್ವೀಪ

ಗಿರೀಶ್​ ಕಾಸರವಳ್ಳಿ ನಿರ್ದೇಶನದ, ರಾಷ್ಟ್ರೀಯ ಪ್ರಶಸ್ತಿ ಪಡೆದ ದ್ವೀಪ ಸಿನಿಮಾ. ಸೌಂದರ್ಯ ಅವರ ನಿರ್ಮಾಣ, ನಟನೆಯಲ್ಲಿ ಮೂಡಿಬಂದ ಸಿನಿಮಾ ಇದಾಗಿದೆ. ಅಣೆಕಟ್ಟು ನಿರ್ಮಾಣ, ಊರು ಮುಳುಗುವ ಸುತ್ತ ಸಿನಿಮಾ ಕತೆ ಸುತ್ತುತ್ತದೆ.

ಘಟಶ್ರಾದ್ಧ

ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿರುವ ಘಟಶ್ರಾದ್ಧ ಸಿನಿಮಾವನ್ನು ಗಿರೀಶ್​ ಕಾಸರವಳ್ಳಿ ನಿರ್ದೇಶಿಸಿದ್ದಾರೆ. 1977ರಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಇತ್ತೀಚೆಗೆ ವೆನಿಸ್​ ಚಲನಚಿತ್ರೋತ್ಸವದಲ್ಲಿ ಈ ಸಿನಿಮಾ ಪ್ರಸಾರ ಕಂಡಿತ್ತು.

ಬಂಗಾರದ ಹೂ

ರಾಷ್ಟ್ರ ಪ್ರಶಸ್ತಿ ಪಡೆದ ಬಂಗಾರದ ಹೂ ಸಿನಿಮಾ. ನಟ ರಾಜ್​ಕುಮಾರ್​​ ಹಾಗೂ ಕಲ್ಪನಾ ನಟಿಸಿರುವ ಸಿನಿಮಾಕ್ಕೆ ಬಿಎ ಅರಸ ಕುಮಾರ್​ ಆಕ್ಷನ್​ ಕಟ್ ಹೇಳಿದ್ದಾರೆ.

ತಬರನ ಕತೆ

ಪೂರ್ಣಚಂದ್ರ ತೇಜಸ್ವಿ ಅವರ ಕತೆಯಾಧಾರಿತ, ಗಿರೀಶ್​ ಕಾಸರವಳ್ಳಿ ನಿರ್ದೇಶನದ ತಬರನ ಕತೆ ಸಿನಿಮಾಕ್ಕೆ ರಾಷ್ಟ್ರೀಯ ಪ್ರಶಸ್ತಿ ದಕ್ಕಿದೆ. ನಿವೃತ್ತಿ ಸರ್ಕಾರಿ ನೌಕರ ಪಿಂಚಣಿ ಹಣಕ್ಕಾಗಿ ಹೋರಾಡುವುದು ಸಿನಿಮಾದಲ್ಲಿದೆ. ಅಧಿಕಾರಿ ಶಾಹಿಯ ಬಗ್ಗೆ ಸಿನಿಮಾ ಹೇಳುತ್ತದೆ.

ಚಿನ್ನಾರಿ ಮುತ್ತ

ಟಿಎನ್​​ ನಾಗಾಭರಣ ನಿರ್ದೇಶನದ ಚಿನ್ನಾರಿ ಮುತ್ತ ಸಿನಿಮಾವು ಮಕ್ಕಳಿಗೆ ಖಂಡಿತ ಇಷ್ಟವಾಗುವ ಸಿನಿಮಾ ನಗರಕ್ಕೆ ಬರುವ ಮುತ್ತ ಕಳ್ಳತನಕ್ಕಿಳಿದು..ಓಟಗಾರನಾಗುವ ಸುತ್ತ ಕತೆ ಕಟ್ಟಲಾಗಿದೆ. ರಾಷ್ಟ್ರೀಯ ಪ್ರಶಸ್ತಿ ಪಡೆದ ಸಿನಿಮಾ ಇದಾಗಿದೆ.