ವಿಜಯವಾಣಿ ಸುದ್ದಿ ಜಾಲ
ಜ್ಯೋತಿ ರೈ ಮೂಲತಃ ಕರ್ನಾಟಕ ರಾಜ್ಯದ ಮಂಗಳೂರು ಮೂಲದವರಾಗಿದ್ದು, ಕೊಡಗಿನ ಮಡಿಕೇರಿಯಲ್ಲಿ ಜನಿಸಿದರು. ನಟನಾ ಕ್ಷೇತ್ರಕ್ಕೆ ಬರುವ ಮೊದಲು ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.
ಕನ್ನಡ ಕಿರುತೆರೆಯ ಜನಪ್ರಿಯತೆ
'ಬಂದೇ ಬರತಾವ ಕಾಲ' ಧಾರಾವಾಹಿಯ ಮೂಲಕ ನಟನಾ ರಂಗಕ್ಕೆ ಕಾಲಿಟ್ಟ ಜ್ಯೋತಿಗೆ ದೊಡ್ಡ ಬ್ರೇಕ್ ತಂದುಕೊಟ್ಟಿದ್ದು 'ಜೋಗುಳ' ಧಾರಾವಾಹಿಯ ದೇವಕಿ ಪಾತ್ರ. ನಂತರ 'ಕಿನ್ನರಿ', 'ಮೂರು ಗಂಟು', 'ಕಸ್ತೂರಿ ನಿವಾಸ', 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ' ಸೇರಿದಂತೆ 20 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ.
ತೆಲುಗು ಚಿತ್ರರಂಗದಲ್ಲಿ 'ಜಗತಿ ಮೇಡಂ' ಕ್ರೇಜ್
ಕನ್ನಡದಷ್ಟೇ ಅಲ್ಲದೆ ತೆಲುಗು ಕಿರುತೆರೆಯಲ್ಲೂ ಭಾರಿ ಜನಪ್ರಿಯತೆ ಗಳಿಸಿದ ಇವರು, ಸ್ಟಾರ್ ಮಾ ವಾಹಿನಿಯ ಹಿಟ್ ಧಾರಾವಾಹಿ 'ಗುಪ್ಪೆಡಂತ ಮನಸು'ನಲ್ಲಿ ನಟಿಸಿದ 'ಜಗತಿ ಮೇಡಂ' ಪಾತ್ರದ ಮೂಲಕ ಆಂಧ್ರ ಮತ್ತು ತೆಲಂಗಾಣದಲ್ಲಿ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದರು.
ಬೆಳ್ಳಿತೆರೆ ಹಾಗೂ ತುಳು ಸಿನಿಮಾ ಪ್ರವೇಶ
ಕಿರುತೆರೆ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲೂ ಗುರುತಿಸಿಕೊಂಡಿರುವ ಇವರು, ರಾಷ್ಟ್ರಪ್ರಶಸ್ತಿ ವಿಜೇತ ತುಳು ಚಿತ್ರ 'ಮದಿಪು' ಮೂಲಕ ಸಿನಿಮಾಗೆ ಪಾದಾರ್ಪಣೆ ಮಾಡಿದರು. ಕನ್ನಡದಲ್ಲಿ 'ಸೀತಾರಾಮ ಕಲ್ಯಾಣ', 'ಗಂಧದ ಕುಡಿ', 'ವರ್ಣಪಟಲ', '99' ಹಾಗೂ 'ದಿಯಾ' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಗ್ಲಾಮರಸ್ ಮೇಕ್ಓವರ್
ಧಾರಾವಾಹಿಗಳಲ್ಲಿ ಸದಾ ಸೀರೆ, ಸಂಪ್ರದಾಯಬದ್ಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜ್ಯೋತಿ ರೈ, ನಂತರದ ದಿನಗಳಲ್ಲಿ ತಮ್ಮ ಅಲ್ಟ್ರಾ-ಗ್ಲಾಮರಸ್ ಫೋಟೋಶೂಟ್ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದರು. ನಿರ್ದೇಶಕ ಸುಕು ಪೂರ್ವಜ್ ಅವರನ್ನು ಮದುವೆಯಾದ ಬಳಿಕ ಹೆಸರನ್ನು 'ಜ್ಯೋತಿ ಪೂರ್ವಜ್' ಎಂದು ಬದಲಾಯಿಸಿಕೊಂಡಿದ್ದಾರೆ.