ವಿಜಯವಾಣಿ ಸುದ್ದಿ ಜಾಲ
ಎಲ್ಲೆ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅನನ್ಯಾ ಪಾಂಡೆ ಅವರು ಡೀಪ್ ಓಪನ್ ಬ್ಯಾಕ್ ನೆಕ್ ಇರುವ ಗೌನ್ ತೊಟ್ಟು ಎಲ್ಲರ ಗಮನ ಸೆಳೆದರು. ಅವರಿಗೆ 'ಗ್ಲೋಬಲ್ ಫೇಸ್ ಆಫ್ ಬ್ಯೂಟಿ' ಪ್ರಶಸ್ತಿ ದಕ್ಕಿದೆ.
ಕಪ್ಪ ಬಣ್ಣದ ಡೀಪ್ ಓಪನ್ ಬ್ಯಾಕ್ ನೆಕ್ ಗೌನ್, ಮಧ್ಯ ಕಪ್ಪು ಗರಿಗಳುನ್ನು ಅಲಂಕರಿಸಿ ಅದಕ್ಕೆ ಚಿನ್ನದ ಸರ ಜೋತು ಬಿಡಲಾಗಿತ್ತು. ಇದಕ್ಕೆ ಬಿಳಿ ಮತ್ತು ಕ್ರೀಂ ಬಣ್ಣದ ಮುತ್ತಿನ ಓಲೆ ಧರಿಸಿದ್ದರು.
ಅನನ್ಯಾ ಪಾಂಡೆ ಅವರ ಸ್ವಾಭಾವಿಕ ಮೇಕಪ್ ಮೂಲಕ ಸಂಪೂರ್ಣ ಗಮನವು ಅವರ ಉಡುಪಿನ ಮೇಲಿತ್ತು. ಈ ಡ್ರೆಸ್ ವಿನ್ಯಾಸವನ್ನು ಮ್ಯಾಥಿಯು ಬ್ಲೇಜಿ ಮಾಡಿದ್ದರು.
ಸದ್ಯ ಅನನ್ಯಾ ಪಾಂಡೆಯಾವುದೇ ಸಿನಿಮಾವನ್ನು ಕೈಗೆತ್ತಿಕೊಂಡಿಲ್ಲ. ಆದರೆ ಇತ್ತೀಚೆಗೆ ಬಿಡುಗಡೆಯಾದ ಯಾವುದೇ ಸಿನಿಮಾಗಳು ಹಿಟ್ ಕಂಡಿಲ್ಲ
ಲೈಗರ್, ಪತಿ ಪತ್ನಿ ಔರ್ ದೋ, ಸ್ಟೂಡೆಂಟ್ ಆಫ್ ದಿ ಇಯರ್ 2 ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಿಲ್ಲ.
ಚಾಂದ್ ಮೇರಾ ದಿಲ್, ನಾಗ್ಜಿಲ್ಲಾ, ಕಾಲ್ ಮಿ ಬೇ ಸೀಸನ್ 2, ಕೇಸರಿ ಚಾಪ್ಟರ್ 2 ಹಾಗೂ ಸಿಟಿಆರ್ ಎಲ್ ಅವರ ಸಿನಿಮಾಗಳಾಗಿವೆ.