ನೀಲಿ ಸೀರೆಯಲ್ಲಿ ಮಿಂಚಿದ ಮೀನಾಕ್ಷಿ..! Meenaakshi Chaudhary

ವಿಜಯವಾಣಿ ಸುದ್ದಿ ಜಾಲ

ಸೌತ್ ಸಿನಿಮಾ ರಂಗದ ಬೇಡಿಕೆ ನಟಿ

ಸೌತ್ ಸಿನಿಮಾ ರಂಗದ ಬೇಡಿಕೆಯ ನಟಿ ಮೀನಾಕ್ಷಿ ಚೌಧರಿ ( Meenaakshi Chaudhary ) ತಮ್ಮ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ವೃಷಕರ್ಮ'ದ ಸುದ್ದಿಗೋಷ್ಠಿಯಲ್ಲಿ ನೀಲಿ ಬಣ್ಣದ ಸೀರೆಯುಟ್ಟು ಎಲ್ಲರ ಗಮನ ಸೆಳೆದಿದ್ದಾರೆ.

ಫೋಟೋಗಳು ವೈರಲ್​

ಸಾಂಪ್ರದಾಯಿಕ ಉಡುಗೆಯಲ್ಲಿ ಅತ್ಯಂತ ಸುಂದರವಾಗಿ ಕಾಣಿಸಿಕೊಂಡಿರುವ ಮೀನಾಕ್ಷಿ ಅವರ ಈ ಹೊಸ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ನೀಲಿ ಸೀರೆಯಲ್ಲಿ ಮಿಂಚಿಂಗ್

ತಿಳಿ ಹಾಗೂ ಆಕರ್ಷಕ ನೀಲಿ ಬಣ್ಣದ ಸೀರೆಯಲ್ಲಿ ಮೀನಾಕ್ಷಿ ಅತ್ಯಂತ ಮುದ್ದಾಗಿ (ಕ್ಯೂಟ್ ಆಗಿ) ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮನಗೆದ್ದಿದ್ದಾರೆ.

ಸಾಂಪ್ರದಾಯಿಕ ಲುಕ್

ಸೀರೆಗೆ ಒಪ್ಪುವಂತಹ ಸರಳ ಆಭರಣಗಳು ಮತ್ತು ಆಕರ್ಷಕ ಹೇರ್‌ಸ್ಟೈಲ್‌ನೊಂದಿಗೆ ಮೀನಾಕ್ಷಿ ಅವರ ಸಾಂಪ್ರದಾಯಿಕ ಲುಕ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಅಭಿಮಾನಿಗಳ ಫಿದಾ

ನಟಿಯ ಈ ಹೊಸ ಫೋಟೋಗಳನ್ನು ಕಂಡ ನೆಟ್ಟಿಗರು ಮತ್ತು ಅಭಿಮಾನಿಗಳು ಲೈಕ್ಸ್ ಹಾಗೂ ಕಾಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ.

ಸಿನಿಮಾ ನಿರೀಕ್ಷೆ

ಮೀನಾಕ್ಷಿ ಚೌಧರಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ವೃಷಕರ್ಮ' ಸಿನಿಮಾದ ಪ್ರಚಾರ ಕಾರ್ಯಗಳಿಗೆ ಭರ್ಜರಿ ಚಾಲನೆ ಸಿಕ್ಕಿದ್ದು, ಚಿತ್ರದ ಮೇಲೆ ಭಾರಿ ನಿರೀಕ್ಷೆ ಮೂಡಿದೆ.

ನಾಗಚೈತನ್ಯಗೆ ಜೋಡಿ

ಮೀನಾಕ್ಷಿ ಚೌಧರಿ ಅವರು 'ವೃಷಕರ್ಮ' ಸಿನಿಮಾದಲ್ಲಿ ನಟ ನಾಗ ಚೈತನ್ಯ ಅವರಿಗೆ ಜೋಡಿಯಾಗಿದ್ದಾರೆ.

ಬಾಲಿವುಡ್​ ಸಿನಿಮಾ

'ವೃಷಕರ್ಮ' ಮಾತ್ರವಲ್ಲದೆ, ಮೀನಾಕ್ಷಿ ಅವರು ಬಾಲಿವುಡ್ ನಟ ಜಾನ್ ಅಬ್ರಾಹಂ ಜೊತೆ 'ಫೋರ್ಸ್ 3' (Force 3) ಹಿಂದಿ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ.