ಬೇಸಿಗೆಯಲ್ಲಿ ಹೀಗಿರಲಿ ನಿಮ್ಮ ಮನೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೇಸಿಗೆಯಲ್ಲಿ ಹೀಗಿರಲಿ ನಿಮ್ಮ ಮನೆ

ಬೇಸಿಗೆಯ ಧಗಧಗಿಸುವ ಬಿಸಿಲಿನಿಂದ ಪಾರಾಗಲು ಮತ್ತು ನಮ್ಮ ಮನೆಯನ್ನು ಸದಾಗ ತಂಪಾಗಿರಿಸಲು ಏನು ಮಾಡಬೇಕೆಂದು ನಾವೀಗ ತಿಳಿದುಕೊಳ್ಳೋಣ.

ಕಿಟಕಿ ಮತ್ತು ಪರದೆಗಳ ನಿರ್ವಹಣೆ

ಮಧ್ಯಾಹ್ನ 11 ರಿಂದ ಸಂಜೆ 5 ರವರೆಗೆ, ಸೂರ್ಯನ ನೇರ ಕಿರಣಗಳು ಬೀಳುವ ಕಿಟಕಿಗಳನ್ನು ಮುಚ್ಚಿಡಿ. ದಪ್ಪನೆ ಅಥವಾ ತಿಳಿ ಬಣ್ಣದ ಥರ್ಮಲ್ ಪರದೆ ಬಳಸಿ. ಇದು ಹೊರಗಿನ ಶಾಖ ಮನೆಯೊಳಗೆ ಬರದಂತೆ ತಡೆಯುತ್ತದೆ.

ನೈಸರ್ಗಿಕ ಗಾಳಿ

ಮನೆಯಲ್ಲಿ ಗಾಳಿಯ ಓಡಾಟ ಚೆನ್ನಾಗಿರಲಿ. ಎದುರುಬದಿ ಇರುವ ಕಿಟಕಿ ಅಥವಾ ಬಾಗಿಲುಗಳನ್ನು ತೆರೆಯುವುದರಿಂದ ಬಿಸಿ ಗಾಳಿ ಹೊರಹೋಗಿ ತಂಪು ಗಾಳಿ ಒಳಬರುತ್ತದೆ.

ಗಿಡಗಳು ಇರಲಿ

ಮನೆಯ ಒಳಗೆ ಮತ್ತು ಬಾಲ್ಕನಿಗಳಲ್ಲಿ ಗಿಡಗಳನ್ನು ಬೆಳೆಸಿ. ಅಲೋವೆರಾ, ಸ್ನೇಕ್ ಪ್ಲಾಂಟ್ ಅಥವಾ ಮನಿ ಪ್ಲಾಂಟ್​ನಂತಹ ಗಿಡಗಳು ಗಾಳಿಯನ್ನು ಶುದ್ಧೀಕರಿಸುವುದಲ್ಲದೆ, ತೇವಾಂಶವನ್ನು ಉಳಿಸಿ ಮನೆಯನ್ನು ತಂಪಾಗಿರಿಸುತ್ತವೆ.

ವಿದ್ಯುತ್ ಉಪಕರಣ ಬಳಕೆ ಕಡಿಮೆ

ಬಲ್ಬ್‌ಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು ಚಾಲನೆಯಲ್ಲಿದ್ದಾಗ ಶಾಖವನ್ನು ಹೊರಸೂಸುತ್ತವೆ. ಹಳೆಯ ಇನ್ಕ್ಯಾಂಡಿಸೆಂಟ್ ಬಲ್ಬ್‌ಗಳ ಬದಲಿಗೆ LED ಬಲ್ಬ್‌ಗಳನ್ನು ಬಳಸಿ. ಅನಗತ್ಯವಾಗಿ ಟಿವಿ, ಕಂಪ್ಯೂಟರ್ ಅಥವಾ ಓವನ್ ಬಳಸಬೇಡಿ.

ತಂಪು ನೆಲಹಾಸು

ಬೇಸಿಗೆಯಲ್ಲಿ ನೆಲದ ಮೇಲೆ ದಪ್ಪನೆಯ ಕಾರ್ಪೆಟ್‌ಗಳಿದ್ದರೆ ಅವುಗಳನ್ನು ತೆಗೆದಿಡಿ. ಬರಿ ನೆಲವು ತಂಪಾಗಿರುತ್ತದೆ. ಸಾಧ್ಯವಾದರೆ, ಸಂಜೆ ಹೊತ್ತು ನೆಲವನ್ನು ಹಸಿ ಬಟ್ಟೆಯಿಂದ ಒರೆಸುವುದರಿಂದ ಮನೆಯ ತಾಪಮಾನ ತಕ್ಷಣ ಕಡಿಮೆಯಾಗುತ್ತದೆ.

ಕಾಟನ್ ಬಟ್ಟೆಗಳ ಬಳಕೆ

ಮನೆಯಲ್ಲಿ ಸೋಫಾ ಕವರ್‌ಗಳು, ಬೆಡ್ ಶೀಟ್ ಹಾಗೂ ದಿಂಬಿನ ಕವರ್‌ಗಳಿಗೆ ಹತ್ತಿ ಬಟ್ಟೆಯನ್ನೇ ಬಳಸಿ. ಸಿಂಥೆಟಿಕ್ ಅಥವಾ ರೇಷ್ಮೆ ಬಟ್ಟೆಗಳು ಶಾಖವನ್ನು ಹಿಡಿದಿಟ್ಟುಕೊಳ್ಳುತ್ತವೆ, ಆದರೆ ಹತ್ತಿ ಬಟ್ಟೆ ಗಾಳಿಯಾಡಲು ಬಿಡುತ್ತದೆ.