ಆನ್​ಲೈನ್​ ವಂಚನೆಯಿಂದ ತಪ್ಪಿಸಿಕೊಳ್ಳಲು UIDAI ನೀಡಿದ 5 ಪ್ರಮುಖ ಎಚ್ಚರಿಕೆಗಳಿವು!

ಮೋಹನ್​ ಶೆಟ್ಟಿ

ಆನ್​ಲೈನ್​ ವಂಚನೆಯಿಂದ ತಪ್ಪಿಸಿಕೊಳ್ಳಲು UIDAI ನೀಡಿದ 5 ಪ್ರಮುಖ ಎಚ್ಚರಿಕೆಗಳಿವು!

ಇತ್ತೀಚೆಗೆ ಯುಐಡಿಎಐ (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ಹೊಸ ವೈಶಿಷ್ಟ್ಯಗಳೊಂದಿಗೆ ನೂತನ ಆಧಾರ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದೆ.

ಎಲ್ಲವೂ ಈಗ ಡಿಜಿಟಲೀಕರಣ

ಈ ಅಪ್ಲಿಕೇಶನ್ ಸಹಾಯದಿಂದ ಇನ್ಮುಂದೆ ಸರ್ಕಾರಿ ಕಚೇರಿ ಅಥವಾ ಇತರೆ ಕೆಲಸಗಳಿಗೆ ಕಾರ್ಡ್​ ಕೊಂಡೊಯ್ಯುವ ಅಗತ್ಯವಿಲ್ಲ. ಕಾರಣ, ಎಲ್ಲವೂ ಈಗ ಡಿಜಿಟಲೀಕರಣವಾಗಿದೆ.

5 ಪ್ರಮುಖ ಎಚ್ಚರಿಕೆಗಳು

ಡಿಜಿಟಲ್ ಗುರುತನ್ನು ಸುರಕ್ಷಿತವಾಗಿರಿಸಲು ಮತ್ತು ಆನ್‌ಲೈನ್ ವಂಚಕರಿಂದ ವಂಚನೆಗೆ ಒಳಗಾದಂತೆ ಇರಲು ಸಂಸ್ಥೆ ಐದು ಪ್ರಮುಖ ಸೂಚನೆಗಳನ್ನು ನೀಡಿದೆ.

1. ಆಧಾರ್ ಕಾರ್ಡ್ ರಕ್ಷಣೆ

ನಿಮ್ಮ ಆಧಾರ್ ವಿವರಗಳು ಹ್ಯಾಕರ್‌ಗಳ ಕೈಗೆ ಸಿಕ್ಕರೆ, ಅವುಗಳನ್ನು ಆನ್‌ಲೈನ್ ವಂಚನೆ, ಸೈಬರ್ ವಂಚನೆ ಮತ್ತು ಇತರೆ ವಂಚನೆಗಳಿಗೆ ಬಳಸಿಕೊಳ್ಳುವ ಅಪಾಯವಿದೆ.

2. ಈ ತಪ್ಪನ್ನು ಎಂದಿಗೂ ಮಾಡಬೇಡಿ!

ನಿಮ್ಮ ಆಧಾರ್ OTP ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾರೋ ಬ್ಯಾಂಕ್ ಹೆಸರಿನಲ್ಲಿ ಅಥವಾ ಇನ್ಯಾವುದಕ್ಕೋ ಕೇಳಿದರೆಂದು ಶೇರ್ ಮಾಡಿ, ನಿಮ್ಮ ವೈಯಕ್ತಿಕ ಮಾಹಿತಿಯ ದುರುಪಯೋಗಕ್ಕೆ ಕಾರಣವಾಗಬಹುದು.

3. ಮಾಸ್ಕ್ಡ್ ಆಧಾರ್ ಕಾರ್ಡ್

ಪ್ರಮುಖ ಸೇವೆಗಳಿಗೆ ಮಾಸ್ಕ್ಡ್ ಆಧಾರ್ ಕಾರ್ಡ್ ಅನ್ನು ಬಳಸಲು ಸಂಸ್ಥೆ ಶಿಫಾರಸು ಮಾಡುತ್ತದೆ. ಕಾರಣ, ಇದರಲ್ಲಿ, 12 ಅಂಕಿಯ ಆಧಾರ್ ಸಂಖ್ಯೆ ಸಂಪೂರ್ಣವಾಗಿ ಗೋಚರಿಸುವುದಿಲ್ಲ.

4. ಫಿಂಗರ್‌ಪ್ರಿಂಟ್ ಲಾಕ್

“ಫಿಂಗರ್‌ಪ್ರಿಂಟ್ ಲಾಕ್” ಆ್ಯಕ್ಟಿವೇಟ್ ಮಾಡಿಕೊಳ್ಳುವ ಮೂಲಕ ನಿಮ್ಮ ಆಧಾರ್‌ಗೆ ಲಿಂಕ್ ಮಾಡಲಾದ ಫಿಂಗರ್‌ಪ್ರಿಂಟ್, ಐರಿಸ್ ಮತ್ತು ಫೇಸ್​ ಐಡೆಂಟಿಫಿಕೆಶೇನ್ ಡೇಟಾವನ್ನು ಲಾಕ್ ಮಾಡುತ್ತದೆ.

5. ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ

ನಿಮ್ಮ ಆಧಾರ್ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಅಥವಾ ಯಾವುದೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇರ್​ ಬೇಡ. ಹಾಗೆ ಮಾಡುವುದರಿಂದ, ಅಪಾಯ ಹೆಚ್ಚು.

6. ಸಹಾಯವಾಣಿ ಸಂಖ್ಯೆಗಳನ್ನು ಬಳಸಿ

ಈಗಾಗಲೇ ವಂಚನೆ ಅಥವಾ ಸೈಬರ್ ಅಪರಾಧಕ್ಕೆ ಸಿಲುಕಿದ್ದರೆ, ತಕ್ಷಣ ಕ್ರಮ ತೆಗೆದುಕೊಳ್ಳಿ. ಸಹಾಯವಾಣಿ ಸಂಖ್ಯೆ 1947 ಮತ್ತು ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಬಹುದು.