ಐಪಿಎಲ್​ ತಂಡಗಳ ಮಹಿಳಾ ಮಾಲೀಕರು

ವಿನಾಯಕ ನಾಯಕ

ಐಪಿಎಲ್​ ತಂಡಗಳ ಮಹಿಳಾ ಮಾಲೀಕರು

ಐಪಿಎಲ್​ ಎಂದ ತಕ್ಷಣ ಕೇವಲ ಸಿಕ್ಸ್​-ಫೋರ್​ಗಳು ಮಾತ್ರವಲ್ಲ, ಜಣ-ಜಣ ಎಂಬ ಹಣದ ಹೊಳೆಯನ್ನೇ ಈ ಟೂರ್ನಿ ಹರಿಸುತ್ತದೆ. ಉದ್ಯಮ ಎಂದ ಕೂಡಲೇ ನಮಗೆ ಕೇವಲ ಪುರುಷ ಉದ್ಯಮ ಪತಿಗಳ ಹೆಸರೇ ನೆನಪಿಗೆ ಬರುತ್ತದೆ. ಅದರೆ ಸ್ತ್ರೀ ಸಮಾನತೆ ಎನ್ನುವುದು ಈ ಐಪಿಎಲ್​ನಲ್ಲಿ ಸ್ವಲ್ಪ ಹೆಚ್ಚಾಗಿಯೇ ಕಾಣಿಸುತ್ತದೆ.

ನಿತಾ ಅಂಬಾನಿ

ಮುಂಬೈ ಇಂಡಿಯನ್ಸ್ ತಂಡದ ಮಾಲಕರಾಗಿರುವ ಇವರು ಐಪಿಎಲ್‌ನ ಅತ್ಯಂತ ಪ್ರಭಾವಶಾಲಿ ಮಹಿಳಾ ಮಾಲೀಕರಲ್ಲಿ ಒಬ್ಬರಾಗಿದ್ದಾರೆ. ಇವರು ಮುಂಬೈ ತಂಡದ ಪ್ರತಿಯೊಂದು ಪಂದ್ಯದಲ್ಲಿ ಖುದ್ದಾಗಿ ಹಾಜರಿದ್ದು ತಂಡದ ಆಟಗಾರರನ್ನು ಪ್ರೋತ್ಸಾಹಿಸುತ್ತಾರೆ.

ಪ್ರೀತಿ ಜಿಂಟಾ

ಪಂಜಾಬ್ ಕಿಂಗ್ಸ್ ತಂಡದ ಮಾಲೀಕರಲ್ಲಿ ಒಬ್ಬರಾದ ಬಾಲಿವುಡ್​ ನಟಿ ಪ್ರೀತಿ ಜಿಂಟಾ, ಮ್ಯಾಚ್​ ನೋಡಲು ಬಂದರೆಂದರೆ ಕ್ಯಾಮರಾಮ್ಯಾನ್​ಗಳ ದೃಷ್ಟಿ ಬೇರೆ ಕಡೆ ಸರಿಯುವುದೇ ಇಲ್ಲ. ಇವರು ತಮ್ಮ ತಂಡದ ಆಟಗಾರರ ಪ್ರಮುಖ ಚೀಯರ್​ ಲೀಡರ್​ ಎಂದರೂ ತಪ್ಪಾಗದು.

ಜೂಹಿ ಚಾವ್ಲಾ

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹ ಮಾಲೀಕರಾಗಿರುವ ಬಾಲಿವುಡ್​ ನಟಿ ಜೂಹಿ ಚಾವ್ಲಾ, ತಮ್ಮ ಪತಿ ಜಯ್ ಮೆಹ್ತಾ ಜೊತೆಗೆ ತಂಡದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದ್ದಾರೆ.

ಕಾವ್ಯ ಮಾರನ್

ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾಗಿರುವ ಕಲಾನಿತಿ ಮಾರನ್ ಅವರ ಪುತ್ರಿ ಕಾವ್ಯ ಮಾರನ್. ಕವ್ಯಾ ಅವರೇ ಎಸ್​ಆರ್​ಹೆಚ್​ ತಂಡದ ಸಂಪೂಣ್ ವ್ಯವಹಾರವನ್ನು ನೋಡಿಕೊಳ್ಳುತ್ತಾರೆ. ಇವರು ಸ್ಟೇಡಿಯಂಗೆ ಬಂದ ದಿನ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗುತ್ತದೆ.

ಅನನ್ಯಾ ಬಿರ್ಲಾ

ಇತ್ತೀಚೆಗೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಖರೀದಿಸಿರುವ ಬಿರ್ಲಾ ಗ್ರೂಪ್​ನ ಅನನ್ಯಾ ಬಿರ್ಲಾ ಆರ್​ಸಿಬಿಯ ನೂತನ ಮಾಲೀಕರಾಗಿದ್ದಾರೆ. ಮಾರ್ಚ್​ 28 ರಂದು ನಡೆಯಲಿರುವ ಪ್ರಾರಂಭಿಕ ಪಂದ್ಯದಲ್ಲಿ ಇವರ ಬರುವಿಕೆಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಾ ಕುಳಿತಿದ್ದಾರೆ.