ಬಿಸಿ ಮತ್ತು ಪೌಷ್ಟಿಕ ಆಹಾರ ಸೇವಿಸಿ
ದೇಹವನ್ನು ಒಳಗಿನಿಂದ ಬೆಚ್ಚಗಿಡಲು ಬಿಸಿ ಆಹಾರಗಳು ಅತ್ಯಗತ್ಯ. ಸೊಪ್ಪು, ದಾಳಿಂಬೆ, ಹಾಲು, ತುಪ್ಪ, ಬೆಲ್ಲ, ಶುಂಠಿ, ಬೆಳ್ಳುಳ್ಳಿ ಮತ್ತು ಮಸಾಲೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ನೀಡಿ ಜ್ವರದಿಂದ ರಕ್ಷಣೆ ನೀಡುತ್ತವೆ.