ತಮಿಳು ಚಿತ್ರರಂಗದ ಸ್ಟಾರ್ ಹಿರಿಯ ನಟ, ಅಭಿಮಾನಿಗಳ ನೆಚ್ಚಿನ 'ತಲಾ' ಅಜಿತ್ ಕುಮಾರ್ ಸದ್ಯ ಚಿತ್ರರಂಗದಿಂದ ದೂರ ಸರಿಯುತ್ತಿದ್ದಾರೆ.
ಸಿನಿಮಾ ಮಾತ್ರವಲ್ಲ ಕಾರ್ ರೇಸಿಂಗ್ಗೂ ಸೈ
ಅಜಿತ್ ಕುಮಾರ್ ನಟನೆಯ ಹಳೆಯ ಚಿತ್ರ ಸದ್ಯ ಬಾಕ್ಸ್ ಆಫೀಸ್ನಲ್ಲಿ ಹೊಸ ಪೈಪೋಟಿಯನ್ನೇ ಹುಟ್ಟುಹಾಕಿದ್ದು, ಗಿಲ್ಲಿ ಚಿತ್ರದ ದಾಖಲೆ ಮುರಿದಿದೆ.
'ಗಿಲ್ಲಿ' ದಾಖಲೆ ಮುರಿದ ಅಜಿತ್ ಸಿನಿಮಾ
ಮುಂಗಡ ಬುಕ್ಕಿಂಗ್ನಲ್ಲಿ ಭಾರೀ ಸದ್ದು ಮಾಡಿದ ಚಿತ್ರ, ಕೇವಲ ತಮಿಳುನಾಡು ಮಾತ್ರವಲ್ಲದೇ ಬೆಂಗಳೂರಿನಲ್ಲಿಯೂ ಹೆಚ್ಚುವರಿ ಬುಕ್ಕಿಂಗ್ ದಾಖಲಿಸಿತು
2.20 ಕೋಟಿ ರೂ.
ತಮಿಳುನಾಡಿನಲ್ಲಿ ಮೊದಲ ದಿನಕ್ಕೆ 2.20 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಇದು ವಿಜಯ್ ಅವರ 'ಗಿಲ್ಲಿ' ರೀ-ರಿಲೀಸ್ ಸಮಯದಲ್ಲಿ ದಾಖಲಿಸಿದ ಮುಂಗಡ ಬುಕ್ಕಿಂಗ್ ದಾಖಲೆಯನ್ನು ಹಿಂದಿಕ್ಕಿದೆ
'ದಳಪತಿ' ದಾಖಲೆ ಹಿಂದಿಕ್ಕಿದ 'ತಲಾ'
'ಗಿಲ್ಲಿ' ರೀ-ರಿಲೀಸ್ ಸಮಯದಲ್ಲಿ ಮೊದಲ ದಿನಕ್ಕೆ 2.15 ಕೋಟಿ ರೂ. ಗಳಿಸಿತ್ತು. ಆದರೀಗ, ಆ ರೆಕಾರ್ಡ್ ಅನ್ನು ಅಜಿತ್ ಸಿನಿಮಾ 2.20 ಕೋಟಿ ರೂ. ಗಳಿಸಿ ಮುರಿದಿದೆ
'ಗುಡ್ ಬ್ಯಾಡ್ ಅಗ್ಲಿ'ಯೇ ಲಾಸ್ಟ್
ಅಜಿತ್ ಕೊನೆಯದಾಗಿ ಕಾಣಿಸಿಕೊಂಡಿದ್ದು, 'ಗುಡ್ ಬ್ಯಾಡ್ ಅಗ್ಲಿ' ಚಿತ್ರದ ಮೂಲಕ. ಇದು ಹಿಟ್ ಗಳಿಸಿ, ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ರೂ. ಗಳಿಕೆಯನ್ನು ದಾಟಿತು.
ಚಿತ್ರಗಳ ಕೆಲಸ ವಿಳಂಬ
ರೇಸಿಂಗ್ ಸೀಸನ್ನಲ್ಲಿ ಬಿಜಿಯಾಗಿರುವ ಅಜಿತ್, ಚಿತ್ರದಿಂದ ಸದ್ಯ ದೂರ ಉಳಿದಿದ್ದಾರೆ. ಇದೇ ಕಾರಣಗಳಿಂದ ಅವರ ಮುಂಬರುವ ಸಿನಿಮಾಗಳ ಕೆಲಸ ವಿಳಂಬವಾಗುತ್ತಿದೆ