ಯಾರು ಮಖಾನ ತಿನ್ನಬಾರ್ದು?

ರಮೇಶ್​ ಕುಮಾರ್​​ ಬಿ ಎಡಮೋಳೆ

ಯಾರು ಮಖಾನ ತಿನ್ನಬಾರ್ದು?

ಮಖಾನ ತಿನ್ನುವುದು ಆರೋಗ್ಯಕ್ಕೆ ಉತ್ತಮವಾಗಿದ್ದರು ಕೂಡ ಕೆಲವು ಮಂದಿ ಮಖಾನದಿಂದ ದೂರ ಇರುವುದು ತುಂಬಾ ಒಳ್ಳೆಯದು.

ಇಂಥವರು ದೂರ ಇರಿ

ಮೂತ್ರಪಿಂಡ ಸಮಸ್ಯೆ, ಕಡಿಮೆ ರಕ್ತದೊತ್ತಡ, ಮಲಬದ್ಧತೆ, ಜೀರ್ಣಕಾರಿ ಸಮಸ್ಯೆ, ಅಲರ್ಜಿ, ಮಧುಮೇಹ ಹಾಗೂ ಆಹಾರ ಕ್ರಮ ಪಾಲಿಸುವ ಜನರು ಮಖಾನದಿಂದ ದೂರವಿದ್ದರೆ ಒಳ್ಳೆಯದು.

ಮಲಬದ್ಧತೆ

ಮಖಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಮಲಬದ್ಧತೆ ಅಥವಾ ಹೊಟ್ಟೆ ಉಬ್ಬರ ಉಂಟಾಗಬಹುದು.

ತೂಕ ಹೆಚ್ಚಳ

ತುಪ್ಪ ಅಥವಾ ಎಣ್ಣೆಯಿಂದ ಹುರಿದ ಮಖಾನವು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದ್ದು ತೂಕ ಹೆಚ್ಚಿಸಲು ಕಾರಣವಾಗಬಹುದು.

ಅಲರ್ಜಿ

ಅಲರ್ಜಿ ಇರುವರು ಮಖಾನ ತಿನ್ನುವ ಮುನ್ನ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ, ಕೆಲವರಲ್ಲಿ ಮಖಾನ ಅಲರ್ಜಿ ಪ್ರತಿಕ್ರಿಯೆ ಉಂಟು ಮಾಡಬಹುದು.

ರಕ್ತದೊತ್ತಡ

ಮಖಾನದಲ್ಲಿರುವ ಹೆಚ್ಚಿನ ಪೊಟ್ಯಾಸಿಯಂ, ಕಡಿಮೆ ರಕ್ತದೊತ್ತಡ ಹೊಂದಿರುವ ಜನರಲ್ಲಿ ಬಿಪಿ ಮತ್ತಷ್ಟು ಕಡಿಮೆಯಾಗಲು ಕಾರಣವಾಗಬಹುದು.

ಮೂತ್ರಪಿಂಡ

ಅಧಿಕವಾಗಿರುವ ಪೊಟ್ಯಾಸಿಯಂ ಮೂತ್ರಪಿಂಡದ ಸಮಸ್ಯೆಗಳಿರುವ ಜನರಿಗೆ ಹಾನಿಕಾರಕವಾಗಬಹುದು.

ಗ್ಲೂಕೋಸ್ ಮಟ್ಟ

ಮಧುಮೇಹ ಇರುವವರು ಹೆಚ್ಚು ತಿಂದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಬದಲಾವಣೆಗಳನ್ನು ಅನುಭವಿಸಬಹುದು.

ಗಮನಿಸಿ

ಮಖಾನವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು ಮತ್ತು ಅತಿಯಾಗಿ ಸೇವಿಸಬಾರದು. ಸೇವಿಸಿದರೆ ಆರೋಗ್ಯ ಸಮಸ್ಯೆ ಕಾಡಬಹುದು.