ಚಿಕನ್​-ಮಟನ್​ ಪೈಕಿ ಮಧುಮೇಹಿಗಳಿಗೆ ಯಾವುದು ಬೆಸ್ಟ್​?

ಮೋಹನ್​ ಶೆಟ್ಟಿ

ಚಿಕನ್​-ಮಟನ್​ ಪೈಕಿ ಮಧುಮೇಹಿಗಳಿಗೆ ಯಾವುದು ಬೆಸ್ಟ್​?

ಮಧುಮೇಹಿಗಳಿಗೆ ಎಲ್ಲಾ ಆಹಾರಗಳು ಸೂಕ್ತವಲ್ಲ. ಸ್ವೀಟ್ಸ್​, ಸಕ್ಕರೆ ಅಂಶವಿರುವ ಆಹಾರಗಳಿಂದ ದೂರವಿರುವುದು ಮತ್ತು ಯಾವುದು ತಮಗೆ ಉತ್ತಮವೋ, ಅವುಗಳನ್ನು ಹೆಚ್ಚಾಗಿ ಸೇವಿಸುವುದು ಒಳಿತು.

ಮಧುಮೇಹಿಗಳಿಗೆ ಯಾವುದು ಬೆಸ್ಟ್​

ಹಾಗೆ ನೋಡುವುದಾದರೆ, ಕೋಳಿ ಮಾಂಸ ಅಥವಾ ಮಟನ್ ಇವುಗಳ ಪೈಕಿ ಮಧುಮೇಹಿಗಳಿಗೆ ಯಾವುದು ಬೆಸ್ಟ್​ ಎಂಬುದನ್ನು ಇಲ್ಲಿ ತಿಳಿಯೋಣ ಬನ್ನಿ.

ಮಟನ್ ಸಂಪೂರ್ಣವಾಗಿ ನಿಲ್ಲಿಸುವ ಅಗತ್ಯವಿಲ್ಲ

ಮಧುಮೇಹಿಗಳು ಮಟನ್ ಸಂಪೂರ್ಣವಾಗಿ ನಿಲ್ಲಿಸುವ ಅಗತ್ಯವಿಲ್ಲ. ಬದಲಿಗೆ ಮಿತವಾಗಿ ಸೇವಿಸಿದ್ರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ವೈದ್ಯಕೀಯ ತಜ್ಞರು ಹೇಳ್ತಾರೆ

ಕೆಂಪು ಮಾಂಸ

ವಾಸ್ತವವಾಗಿ, ಮಟನ್ ಕೆಂಪು ಮಾಂಸದ ವರ್ಗಕ್ಕೆ (ರೆಡ್​ ಮೀಟ್) ಸೇರಿದ್ದು, ಇದು ಸತು, ಕಬ್ಬಿಣ ಮತ್ತು ವಿಟಮಿನ್ ಬಿ12 ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ

ಮಟನ್‌ನಲ್ಲಿ ಕೊಬ್ಬು ಅಧಿಕ

ಮಧುಮೇಹದಿಂದ ಬಳಲುತ್ತಿರುವ ಜನರು ಆಸೆಯಿಂದ ಹೆಚ್ಚಾಗಿ ಸೇವಿಸಿದರೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಟನ್‌ನಲ್ಲಿ ಕೊಬ್ಬು ಅಧಿಕವಾಗಿದೆ

ಹೃದಯ ಸಮಸ್ಯೆಗಳ ಅಪಾಯ

ಇದು ದೇಹದಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ ಮತ್ತು ಕೆಂಪು ಮಾಂಸದ ಅತಿಯಾದ ಸೇವನೆಯಿಂದ ಹೃದಯ ಸಮಸ್ಯೆಗಳ ಅಪಾಯವೂ ಇದೆ ಎಂದು ಹೇಳಲಾಗಿದೆ

ಎಣ್ಣೆಯಲ್ಲಿ ಕರಿದ ಚಿಕನ್

ಮಟನ್​ಗಿಂತ ಕೋಳಿ ಮಾಂಸ ಒಳ್ಳೆಯದು, ಆದರೆ, ಎಣ್ಣೆಯಲ್ಲಿ ಕರಿದ ಚಿಕನ್ ಮತ್ತು ಮಸಾಲೆಯುಕ್ತ ಕರಿಗಳಿಂದ ಕೂಡಿರುವ ಚಿಕನ್​ ತಿನ್ನುವುದು ತೊಂದರೆಯೇ

ದಿಢೀರ್ ಏರಿಕೆಯಾಗಲ್ಲ

ಈ ಮಾಂಸದಲ್ಲಿ ಪ್ರೋಟೀನ್ ಅಧಿಕವಾಗಿದ್ದು, ಕೊಬ್ಬು ಕಡಿಮೆ ಇರುತ್ತದೆ. ಇದನ್ನು ತಿಂದಾಗ ರಕ್ತದಲ್ಲಿನ ಸಕ್ಕರೆ ಮಟ್ಟ ದಿಢೀರ್ ಏರಿಕೆಯಾಗಲ್ಲ