ಹೆಚ್ಚಿನ ಪ್ರೋಟೀನ್​ಭರಿತ ಹಣ್ಣು

ರಮೇಶ್​ ಕುಮಾರ್​​ ಬಿ ಎಡಮೋಳೆ

ಹೆಚ್ಚಿನ ಪ್ರೋಟೀನ್​ಭರಿತ ಹಣ್ಣು

ಹಣ್ಣುಗಳಲ್ಲಿ ಯಾವ ಹಣ್ಣು ಅತಿ ಹೆಚ್ಚು ಪ್ರೋಟೀನ್​ ಹೊಂದಿರುತ್ತವೆ ಎಂಬ ಉಪಯುಕ್ತ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.

ಪೇರಲ ಹಣ್ಣು

ಪೇರಲ ಅಥವಾ ಸೀಬೆ ಹಣ್ಣು ಸಿಹಿ ರುಚಿ ಹೊಂದಿರುವ ಉಷ್ಣವಲಯದ ಹಣ್ಣಾಗಿದೆ. ಇದರಲ್ಲಿ ವಿಟಮಿನ್ ಸಿ ಮತ್ತು ಫೈಬರ್ ಸಮೃದ್ಧವಾಗಿದೆ. ಎಲ್ಲ ಹಣ್ಣುಗಳಲ್ಲಿ ಅತ್ಯಧಿಕ ಪ್ರೋಟೀನ್ ಅಂಶ ಹೊಂದಿದ್ದು, ಪ್ರತಿ ಕಪ್‌ಗೆ 4.21 ಗ್ರಾಂ ಪ್ರೋಟೀನ್ ಇರುತ್ತದೆ.

ಆವಕಾಡೋ

ಆವಕಾಡೋಗಳು ಸಿಹಿಯಾಗಿರುವುದಿಲ್ಲ. ಸಕ್ಕರೆ ಮಿಶ್ರಣ ಮಾಡಿ ಜ್ಯೂಸ್​ ಮಾಡಿ ಸವಿಯುತ್ತಾರೆ. 201 ಗ್ರಾಂ ಆವಕಾಡೋದಲ್ಲಿ 4.01 ಗ್ರಾಂ ಪ್ರೋಟೀನ್ ಇರುತ್ತದೆ. ಅಲ್ಲದೆ, ಫೈಬರ್, ವಿಟಮಿನ್ ಇ ಮತ್ತು ಸಿ, ಮೆಗ್ನೀಶಿಯಂ ಹಾಗೂ ಫೋಲೇಟ್‌ ಸಮೃದ್ಧವಾಗಿವೆ.

ಹಲಸಿನ ಹಣ್ಣು

ಗಾತ್ರದಲ್ಲಿ ಎಲ್ಲ ಹಣ್ಣುಗಳಿಗಿಂತ ದೊಡ್ಡದಾಗಿರುವ ಈ ಹಣ್ಣಿನಲ್ಲಿ ಪ್ರತಿ ಕಪ್‌ಗೆ 2.84 ಗ್ರಾಂ ಪ್ರೋಟೀನ್ ಇರುತ್ತದೆ. ಅಲ್ಲದೆ, ಬಿ ಜೀವಸತ್ವಗಳು, ವಿಟಮಿನ್ ಸಿ, ಮೆಗ್ನೀಸಿಯಂ ಮತ್ತು ಪೊಟ್ಯಾಸಿಯಂಗಳಲ್ಲಿಯೂ ಸಮೃದ್ಧವಾಗಿವೆ. ಕ್ಯಾರೊಟಿನಾಯ್ಡ್ ಉತ್ಕರ್ಷಣ ನಿರೋಧಕಗಳೂ ಕೂಡ ಇವೆ.

ಪ್ಯಾಶನ್ ಫ್ರೂಟ್

100 ಗ್ರಾಂ ಪ್ಯಾಶನ್ ಫ್ರೂಟ್​ನಲ್ಲಿ 2.2 ಗ್ರಾಂ ಪ್ರೋಟೀನ್ ಇರುತ್ತದೆ. ಅಲ್ಲದೆ, ವಿಟಮಿನ್ ಸಿ, ಕ್ಯಾರೊಟಿನಾಯ್ಡ್‌ಗಳು ಮತ್ತು ಪಾಲಿಫಿನಾಲ್ ಸಂಯುಕ್ತಗಳನ್ನು ಒಳಗೊಂಡಂತೆ ಉತ್ಕರ್ಷಣ ನಿರೋಧಕಗಳ ಮೂಲವಾಗಿದೆ.

ಬ್ಲ್ಯಾಕ್​ಬೆರೀಸ್​​

ಒಂದು ಕಪ್​ ಬ್ಲ್ಯಾಕ್‌ಬೆರಿ ಹಣ್ಣು 2 ಗ್ರಾಂ ಪ್ರೋಟೀನ್ ನೀಡುತ್ತದೆ. ಬ್ಲ್ಯಾಕ್‌ಬೆರಿಗಳು ಫೈಬರ್, ವಿಟಮಿನ್ ಸಿ ಮತ್ತು ಕೆ ಹಾಗೂ ಮ್ಯಾಂಗನೀಸ್‌ನ ಅತ್ಯುತ್ತಮ ಮೂಲವಾಗಿದೆ.

ರಾಸ್​ಬೆರಿಸ್​

ಒಂದು ಕಪ್ ರಾಸ್​ಬೆರಿ ಹಣ್ಣಿನಲ್ಲಿ 1.48 ಗ್ರಾಂ ಪ್ರೋಟೀನ್ ಜೊತೆಗೆ ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ವಿಟಮಿನ್ ಸಿ ಹೊಂದಿರುತ್ತದೆ.

ಏಪ್ರಿಕಾಟ್

ಒಂದು ಕಪ್ ಏಪ್ರಿಕಾಟ್‌ 2.31 ಗ್ರಾಂ ಪ್ರೋಟೀನ್ ಹೊಂದಿರುತ್ತವೆ. ಒಣಗಿದ ಏಪ್ರಿಕಾಟ್‌ಗಳು ತಾಜಾ ಏಪ್ರಿಕಾಟ್‌ಗಳಿಗಿಂತ ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿರುತ್ತವೆ. ಪ್ರತಿ ಕಪ್‌ಗೆ 4.41 ಗ್ರಾಂ ಪ್ರೋಟೀನ್ ಇರುತ್ತದೆ.

ದಾಳಿಂಬೆ

ದಾಳಿಂಬೆ ಬೀಜಗಳು ಪ್ರತಿ ಕಪ್‌ಗೆ 2.9 ಗ್ರಾಂ ಪ್ರೋಟೀನ್ ಹೊಂದಿರುತ್ತವೆ. ಅಲ್ಲದೆ, ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಸಂಯುಕ್ತಗಳಲ್ಲಿಯೂ ಅಧಿಕವಾಗಿವೆ.

ಕಿವಿ

ಕಿವಿ ಹಣ್ಣನ್ನು ಸಾಮಾನ್ಯವಾಗಿ ಕಿವಿಸ್ ಎಂದು ಕರೆಯಲಾಗುತ್ತದೆ. ಇವು ಫೋಲೇಟ್ ಮತ್ತು ವಿಟಮಿನ್ ಸಿ, ಇ ಮತ್ತು ಕೆ ಪೋಷಕಾಂಶಗಳನ್ನು ಒಳಗೊಂಡಿದೆ. ಪ್ರತಿ ಕಪ್‌ಗೆ 2 ಗ್ರಾಂಗಿಂತ ಕಡಿಮೆ ಪ್ರೋಟೀನ್ ಅನ್ನು ಹೊಂದಿರುತ್ತವೆ.

ಚೆರ್ರಿ ಹಣ್ಣು

ಇತರ ಹಣ್ಣುಗಳಂತೆ ಚೆರ್ರಿಗಳಲ್ಲಿ ಪ್ರೋಟೀನ್ ಹೆಚ್ಚಿಲ್ಲ ಆದರೆ, 1 ಕಪ್ ಸಿಹಿ ಚೆರ್ರಿ ಹಣ್ಣು 1.63 ಗ್ರಾಂ ಪ್ರೋಟೀನ್ ನೀಡುತ್ತದೆ. ಚೆರ್ರಿ ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕಗಳು, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಇರುತ್ತವೆ.