ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಮಾಡುವುದರಿಂದ ಆಗುವ ತೊಂದರೆಗಳೇನು?

Vijayavan

ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಮಾಡುವುದರಿಂದ ಆಗುವ ತೊಂದರೆಗಳೇನು?

ಚಳಿಗಾಲದಲ್ಲಿ ಆದಷ್ಟು ಜನರು ಬಿಸಿ ನೀರಿನ ಸ್ನಾನವನ್ನು ಮಾಡಲು ಬಯಸುತ್ತಾರೆ. ಆದರೆ, ಈ ಬಿಸಿ ನೀರಿನಿಂದ ಸ್ನಾನ ಮಾಡುವುದು ಬಹಳ ಒಳ್ಳೆಯದಲ್ಲ.

ಚರ್ಮದ ತುರಿಕೆ

ಬಿಸಿ ನೀರು ಚರ್ಮದ ನೈಸರ್ಗಿಕ ಎಣ್ಣೆಗಳನ್ನು ತೆಗೆದುಹಾಕಿ ಚರ್ಮವನ್ನು ಒಣಗುವಂತೆ ಮಾಡುತ್ತದೆ. ಇದು ಚಳಿಗಾಲದಲ್ಲಿ ಹೆಚ್ಚಾಗಿ ತುರಿಕೆ, ಕೆಂಪುಗುಳ್ಳೆಗಳು ಅಥವಾ ಒಡಕುಗಳಿಗೆ ಕಾರಣವಾಗುತ್ತದೆ.

ಕೂದಲಿನ ದೌರ್ಬಲ್ಯ ಮತ್ತು ಉದುರುವಿಕೆ

ಬಿಸಿ ನೀರಿನಿಂದ ತಲೆ ಸ್ನಾನ ಮಾಡುವುದರಿಂದ ಇದು ಕೂದಲಿನ ಬೇರುಗಳನ್ನು ದುರ್ಬಲಗೊಳಿಸಿ, ಒಣಗಿಸಿ ಉದುರುವಿಕೆಗೆ ಕಾರಣವಾಗುತ್ತದೆ. ಇದರಿಂದ ತಲೆಯ ಹೊಟ್ಟು ಜಾಸ್ತಿಯಾಗಬಹುದು.

ರಕ್ತದೊತ್ತಡ ಮತ್ತು ಹೃದಯಕ್ಕೆ ಒತ್ತಡ

ತುಂಬಾ ಬಿಸಿ ನೀರು ರಕ್ತನಾಳಗಳನ್ನು ವಿಸ್ತರಿಸಿ ರಕ್ತದೊತ್ತಡ ಹೆಚ್ಚಿಸುತ್ತದೆ. ಇದು ಹೃದಯಕ್ಕೆ ಹೆಚ್ಚು ಒತ್ತಡ ಬೀಳುವುದರ ಜೊತೆಗೆ ಹೃದಯರೋಗಿಗಳಿಗೆ ಸಮಸ್ಯೆ ಉಂಟಾಗಬಹುದು.

ಪುರುಷರಲ್ಲಿ ವೀರ್ಯಾಣು ಸಂಖ್ಯೆ ಕಡಿಮೆಯಾಗುವುದು

ಬಿಸಿ ನೀರು scrotal ತಾಪಮಾನ ಹೆಚ್ಚಿಸಿ, ವೀರ್ಯಾಣುಗಳ ಗುಣಮಟ್ಟ ಮತ್ತು ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ದೀರ್ಘಕಾಲ ಬಿಸಿ ಸ್ನಾನ ಮಾಡುವುದು fertility ಸಮಸ್ಯೆಗಳಿಗೆ ಕಾರಣವಾಗಬಹುದು.

ಚರ್ಮದಲ್ಲಿ ಉರಿ, ಕೆಂಪು ಮತ್ತು ಅಲರ್ಜಿ

ಬಿಸಿ ನೀರು ಚರ್ಮದ ಪದರವನ್ನು ಹಾನಿಗೊಳಿಸುತ್ತದೆ. ಇದರಿಂದ ಚರ್ಮದಲ್ಲಿ ಕೆಂಪು ಗುಳ್ಳೆಗಳು, ಉರಿಯುವುದು, ಅಲರ್ಜಿಯನ್ನು ಉತ್ಪತ್ತಿ ಮಾಡುತ್ತದೆ.