ಬೀನ್ಸ್ ತರಕಾರಿಯು ಪ್ರೋಟೀನ್, ಫೈಬರ್, ವಿಟಮಿನ್‌ಗಳು ಮತ್ತು ಮಿನರಲ್‌ಗಳಿಂದ ಸಮೃದ್ಧವಾಗಿದ್ದು, ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಅನೇಕ ಆರೋಗ್ಯ ಲಾಭಗಳಿವೆ.
ಹೃದಯ ಆರೋಗ್ಯ
ಬೀನ್ಸ್‌ನಲ್ಲಿ ಇರುವ ಫೈಬರ್ ಮತ್ತು ಪೊಟ್ಯಾಸಿಯಂ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿ, ರಕ್ತದೊತ್ತಡ ನಿಯಂತ್ರಿಸಿ ಹೃದ್ರೋಗ ಅಪಾಯ ಕಡಿಮೆ ಮಾಡುತ್ತದೆ.
ತೂಕ ನಿಯಂತ್ರಣ
ಬೀನ್ಸ್‌ನಲ್ಲಿ ಹೆಚ್ಚು ಫೈಬರ್ ಮತ್ತು ಪ್ರೋಟೀನ್ ಇರುವುದರಿಂದ ದೀರ್ಘ ಕಾಲ ಹೊಟ್ಟೆ ತುಂಬಿರುವಂತೆ ಭಾಸವಾಗಿ, ಹಸಿವು ಕಡಿಮೆ ಮಾಡಿ, ತೂಕ ಇಳಿಸಲು ಸಹಾಯ ಮಾಡುತ್ತದೆ.
ರಕ್ತದ ಸಕ್ಕರೆ ನಿಯಂತ್ರಣ
ಈ ತರಕಾರಿಯಲ್ಲಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವುದರಿಂದ ಮಧುಮೇಹಿಗಳಿಗೆ ರಕ್ತದಲ್ಲಿ ಸಕ್ಕರೆ ಮಟ್ಟ ಸ್ಥಿರವಾಗಿರಿಸುತ್ತದೆ.
ಜೀರ್ಣಕ್ರಿಯೆ ಸುಧಾರಣೆ
ಬೀನ್ಸ್‌ನಲ್ಲಿ ಫೈಬರ್ ಅಂಶ ಸಮೃದ್ಧವಾಗಿರುವುದರಿಂದ ಮಲಬದ್ಧತೆಯನ್ನು ತಡೆಗಟ್ಟಿ, ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ಪ್ರೋಟೀನ್ ಮೂಲ
ಸಸ್ಯಾಹಾರಿಗಳಿಗೆ ಬೀನ್ಸ್ ಉತ್ತಮ ಪ್ರೋಟೀನ್ ಮೂಲವಾಗಿದ್ದು, ಸ್ನಾಯುಗಳ ಬೆಳವಣಿಗೆಗೆ ಸಹಾಯಕವಾಗಿದೆ. ಜಿಮ್ ಮಾಡುವವರು ಆಗಾಗ ಬೀನ್ಸ್ ಸೇವಿಸಿದರೆ ಒಳ್ಳೆಯದು.
ಕ್ಯಾನ್ಸರ್ ಅಪಾಯ ಕಡಿಮೆ
ಬೀನ್ಸ್ನಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್ ಅಂಶವು ಕೊಲೊನ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತವೆ.
ಕರುಳಿನ ಮೈಕ್ರೋಬಯೋಮ್ ಸುಧಾರಣೆ
ಬೀನ್ಸ್ನಲ್ಲಿರುವ ಪ್ರಿಬಯಾಟಿಕ್ ಗುಣಗಳಿಂದ ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಬೆಳೆಯಲು ಸಹಾಯ ಮಾಡುತ್ತದೆ. ಇದರಿಂದ ಕರುಳಿನ ಮೈಕ್ರೋಬಯೋಮ್ ಸುಧಾರಣೆಯಾಗುತ್ತದೆ.
ಉರಿಯೂತ ಕಡಿಮೆ
ಬೀನ್ಸ್ನಲ್ಲಿರುವ ಆ್ಯಂಟಿಇನ್‌ಫ್ಲಮೇಟರಿ ಅಂದರೆ, ಉರಿಯೂತ ನಿವಾರಕ ಗುಣಗಳು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತವೆ.
ರಕ್ತಹೀನತೆ
ಬೀನ್ಸ್‌ನಲ್ಲಿ ಐರನ್ ಹಾಗೂ ಫೋಲೇಟ್ ಅಂಶ ಸಮೃದ್ಧವಾಗಿದ್ದು, ರಕ್ತಹೀನತೆ ತಡೆಗಟ್ಟಲು ಸಹಾಯ ಮಾಡುತ್ತದೆ.
ಆಯುಷ್ಯ ಹೆಚ್ಚು
ಬೀನ್ಸ್ ಅನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೀರ್ಘಾಯುಷ್ಯ ಮತ್ತು ಆರೋಗ್ಯಯುವ ಜೀವನಕ್ಕೆ ಸಹಾಯ ಮಾಡುತ್ತದೆ.
ಗಮನಿಸಿ
ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆ ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.