ಚಳಿಗಾಲದಲ್ಲಿ ಜನರು ಮಾಡುವ ಕೆಲ ಸಾಮಾನ್ಯ ತಪ್ಪುಗಳು ಆರೋಗ್ಯ, ಚರ್ಮ ಮತ್ತು ದೈನಂದಿನ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಆ ಕಾಮನ್ ಮಿಸ್ಟೇಕ್ಸ್ ಯಾವುವು ಅನ್ನೋದನ್ನ ನಾವೀಗ ತಿಳಿಯೋಣ.
ಬೆಚ್ಚಗಿನ ಬಟ್ಟೆ ಧರಿಸದಿರುವುದು
ಚಳಿಗಾದಲ್ಲಿ ಸಾಕಷ್ಟು ಬೆಚ್ಚಗಿನ ಬಟ್ಟೆಗಳನ್ನು ಧರಿಸಬೇಕು. ಹೊರಗೆ ಹೋಗುವಾಗ ಕೈಗಳು, ಕಾಲುಗಳು ಮತ್ತು ತಲೆಯನ್ನು ಮುಚ್ಚದೇ ಇರುವುದರಿಂದ ಹೈಪೋಥರ್ಮಿಯಾ ಅಥವಾ ಶೀತಕ್ಕೆ ಒಳಗಾಗುವ ಅಪಾಯ ಹೆಚ್ಚು.
ಕಡಿಮೆ ನೀರು ಕುಡಿಯುವುದು
ಚಳಿಯಲ್ಲಿ ಬಾಯಾರಿಕೆ ಕಡಿಮೆ ಎನಿಸಿದರೂ ಡಿಹೈಡ್ರೇಷನ್ ಆಗುತ್ತದೆ. ಇದು ಚರ್ಮ ಒಣಗುವುದು, ರೋಗನಿರೋಧಕ ಶಕ್ತಿ ಕಡಿಮೆಯಾಗುವುದು ಮತ್ತು ಆಯಾಸಕ್ಕೆ ಕಾರಣವಾಗುತ್ತದೆ.
ಮಾಯಿಶ್ಚರೈಸರ್ ಬಳಸದಿರುವುದು
ಚಳಿಗಾಲದಲ್ಲಿ ಚರ್ಮಕ್ಕೆ ಮಾಯಿಶ್ಚರೈಸರ್ ಅಥವಾ ಸನ್‌ಸ್ಕ್ರೀನ್ ಬಳಸದಿರುವುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಶೀತ ಗಾಳಿಗೆ ಒಡ್ಡಿಕೊಳ್ಳುವುದರಿಂದ ಚರ್ಮ ಒಣಗುತ್ತದೆ. ಸನ್‌ಸ್ಕ್ರೀನ್ ಹಾಕದೇ ಹೋದರೆ UV ಕಿರಣಗಳು ಚರ್ಮವನ್ನು ಹಾನಿಮಾಡುತ್ತವೆ.
ಬಿಸಿ ನೀರಿನಲ್ಲಿ ದೀರ್ಘ ಸ್ನಾನ
ಚಳಿಗಾಲದಲ್ಲಿ ಬಿಸಿ ನೀರಿನಲ್ಲಿ ದೀರ್ಘ ಕಾಲ ಸ್ನಾನ ಮಾಡುವುದರಿಂದ ಚರ್ಮದ ನೈಸರ್ಗಿಕ ಎಣ್ಣೆ ಮಾಯವಾಗುತ್ತದೆ ಮತ್ತು ತುರಿಕೆ ಉಂಟುಮಾಡುತ್ತದೆ.
ಆ್ಯಂಟಿಬಯಾಟಿಕ್ ತೆಗೆದುಕೊಳ್ಳುವುದು
ಚಳಿಗಾಲದಲ್ಲಿ ಶೀತ ಅಥವಾ ಜ್ವರ ಬಂದಾಗ ಆ್ಯಂಟಿಬಯಾಟಿಕ್‌ಗಳನ್ನು ತೆಗೆದುಕೊಳ್ಳಬಾರದು. ಶೀತ ಸಾಮಾನ್ಯವಾಗಿ ವೈರಲ್ ಸೋಂಕು ಆಗಿರುತ್ತದೆ. ಆ್ಯಂಟಿಬಯಾಟಿಕ್ ಇದರ ವಿರುದ್ಧ ಕೆಲಸ ಮಾಡದು ಮತ್ತು ಅನಗತ್ಯವಾಗಿ ದೇಹಕ್ಕೆ ಹಾನಿ ಮಾಡುತ್ತದೆ.
ಮದ್ಯಪಾನ ಅಥವಾ ಧೂಮಪಾನ ಹೆಚ್ಚಳ
ಚಳಿಯಲ್ಲಿ ಬೆಚ್ಚನೆ ಅನುಭನ ನೀಡುತ್ತದೆ ಎಂದು ಭಾವಿಸಿ, ಜನರು ಮಾಡುವ ಸಾಮಾನ್ಯ ತಪ್ಪುಗಳಲ್ಲಿ ಅತಿಯಾದ ಮದ್ಯಪಾನ ಮತ್ತು ಧೂಮಪಾನವು ಒಂದು. ಇದು ರಕ್ತನಾಳಗಳನ್ನು ಸಂಕುಚಿತಗೊಳಿಸಿ ಹಾರ್ಟ್ ಅಟ್ಯಾಕ್ ಅಪಾಯ ಹೆಚ್ಚಿಸುತ್ತದೆ.
ವಿಶ್ರಾಂತಿ ಪಡೆಯದಿರುವುದು
ಚಳಿಯಲ್ಲಿ ದೇಹಕ್ಕೆ ಹೆಚ್ಚು ಶಕ್ತಿ ಬೇಕು. ಕಡಿಮೆ ನಿದ್ದೆಯಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಶೀತ-ಕೆಮ್ಮು ಬರುವ ಸಾಧ್ಯತೆ ಹೆಚ್ಚು.
ಕರಿದ ಅಥವಾ ಸಿಹಿ ಆಹಾರ
ಚಳಿಗಾಲದಲ್ಲಿ ಕರಿದ ಅಥವಾ ಸಿಹಿ ಆಹಾರಗಳನ್ನು ಹೆಚ್ಚಾಗಿ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ.