ಬೇಸಿಗೆಯಲ್ಲಿ ಮಕ್ಕಳಿಗೆ ಯಾವ ಬಟ್ಟೆ ಬೆಸ್ಟ್? ಇಲ್ಲಿದೆ ಸಿಂಪಲ್ ಟಿಪ್ಸ್!
ಭಾನುಪ್ರಿಯ ಡಿ.ಕೆ
ಬೇಸಿಗೆಯಲ್ಲಿ ಮಕ್ಕಳಿಗೆ ಯಾವ ಬಟ್ಟೆ ಬೆಸ್ಟ್? ಇಲ್ಲಿದೆ ಸಿಂಪಲ್ ಟಿಪ್ಸ್!
ಬೇಸಿಗೆಯ ಬಿಸಿಲಿನಲ್ಲಿ ಮಕ್ಕಳು ಆರಾಮದಾಯಕವಾಗಿ ಮತ್ತು ತಂಪಾಗಿರಲು ಸೂಕ್ತವಾದ ಬಟ್ಟೆಗಳನ್ನು ಆಯ್ಕೆ ಮಾಡುವುದು ತುಂಬಾ ಮುಖ್ಯ. ಮಕ್ಕಳ ಬೇಸಿಗೆಯ ದಿನಗಳನ್ನು ಹಸನ್ಮುಖಿಯಾಗಿಸಲು ಇಲ್ಲಿವೆ ಅತ್ಯುತ್ತಮ ಉಡುಪುಗಳು.
ಹತ್ತಿ ಟಿ-ಶರ್ಟ್ ಮತ್ತು ಶಾರ್ಟ್ಸ್
ಇದು ಬೇಸಿಗೆಗೆ ಅತ್ಯಂತ ಜನಪ್ರಿಯ ಮತ್ತು ಆರಾಮದಾಯಕ ಜೋಡಿ. ಮೃದುವಾದ ಹತ್ತಿ ಬಟ್ಟೆಯು ಬೆವರಿನ ತೇವಾಂಶವನ್ನು ಬೇಗನೆ ಹೀರಿಕೊಳ್ಳುತ್ತದೆ ಮತ್ತು ಮಕ್ಕಳು ಮುಕ್ತವಾಗಿ ಆಟವಾಡಲು ನೆರವಾಗುತ್ತದೆ.
ಲಿನಿನ್ ಫ್ರಾಕ್ಸ್
ಹೆಣ್ಣು ಮಕ್ಕಳಿಗೆ ಲಿನಿನ್ ಅಥವಾ ಹಗುರವಾದ ಕಾಟನ್ ಫ್ರಾಕ್‌ಗಳು ಧರಿಸಲು ತುಂಬಾ ಹಗುರವಾಗಿರುತ್ತವೆ. ತಿಳಿ ಬಣ್ಣದ ಮತ್ತು ಲೂಸ್ ಫಿಟ್ಟಿಂಗ್ ಇರುವ ಫ್ರಾಕ್‌ಗಳು ಗಾಳಿಯಾಡಲು ಸುಲಭ ಮಾಡಿಕೊಡುತ್ತವೆ.
ಕಾಟನ್ ರೊಂಪರ್ಸ್
ಸಣ್ಣ ಮಕ್ಕಳಿಗೆ ರೊಂಪರ್ಸ್ ಅತ್ಯುತ್ತಮ ಆಯ್ಕೆ. ಇದು ಒಂದೇ ಪೀಸ್ ಉಡುಪಾಗಿದ್ದು, ಮಗುವಿನ ಇಡೀ ದೇಹಕ್ಕೆ ಆರಾಮ ನೀಡುತ್ತದೆ ಹಾಗೂ ಡೈಪರ್ ಬದಲಾಯಿಸಲು ಕೂಡ ಸುಲಭವಾಗಿರುತ್ತದೆ.
ಹಗುರವಾದ ಕುರ್ತಾ-ಪೈಜಾ
ಹಬ್ಬ ಹರಿದಿನಗಳು ಅಥವಾ ಸಣ್ಣಪುಟ್ಟ ಸಮಾರಂಭಗಳಿಗೆ ಲೂಸ್ ಆದ ಹತ್ತಿ ಕುರ್ತಾ ಮತ್ತು ಪೈಜಾ ಧರಿಸಬಹುದು. ಇದು ಸಾಂಪ್ರದಾಯಿಕ ಲುಕ್ ನೀಡುವ ಜೊತೆಗೆ ಬಿಸಿಲಿನಿಂದ ತ್ವಚೆಯನ್ನು ರಕ್ಷಿಸುತ್ತದೆ.
ಸ್ಲೀವ್‌ಲೆಸ್ ಜಂಪ್‌ಸೂಟ್ಸ್
ಇವು ಈಗಿನ ಟ್ರೆಂಡ್ ಜತೆಗೆ ಮಕ್ಕಳಿಗೆ ಕಂಫರ್ಟ್ ಕೂಡ ನೀಡುತ್ತವೆ. ತೆಳುವಾದ ಬಟ್ಟೆಯ ಜಂಪ್‌ಸೂಟ್‌ಗಳು ಬೇಸಿಗೆಯ ಸಂಜೆ ಸಮಯದ ವಾಕಿಂಗ್ ಅಥವಾ ಔಟಿಂಗ್‌ಗೆ ಸೂಕ್ತ.