ಮೊಳಕೆ ಕಾಳುಗಳು ಅತ್ಯಂತ ಪೌಷ್ಟಿಕಾಂಶ ಸಮೃದ್ಧ ಆಹಾರಗಳಲ್ಲಿ ಒಂದು. ಕಾಳುಗಳನ್ನು ನೆನೆಸಿ ಮೊಳಕೆ ಬರಿಸಿದಾಗ, ಅವುಗಳಲ್ಲಿ ಇರುವ ಪೋಷಕಾಂಶಗಳು ಹೆಚ್ಚು ಲಭ್ಯವಾಗುತ್ತವೆ.
ಜೀರ್ಣಕ್ರಿಯೆ ಸುಧಾರಣೆ
ಮೊಳಕೆಯಾಗುವ ಪ್ರಕ್ರಿಯೆಯಲ್ಲಿ ಕಿಣ್ವಗಳು ಹೆಚ್ಚಾಗುತ್ತವೆ ಮತ್ತು ಫೈಬರ್ನಿಂದ ಕೂಡಿರುತ್ತದೆ. ಇದರಿಂದ ಮಲಬದ್ಧತೆ, ಗ್ಯಾಸ್, ಉಬ್ಬು ತಗ್ಗುತ್ತದೆ. ಜೀರ್ಣಾಂಗ ವ್ಯವಸ್ಥೆ ಸುಲಭವಾಗಿ ಕೆಲಸ ಮಾಡುತ್ತದೆ.
ಪ್ರೋಟೀನ್ ಮತ್ತು ಪೋಷಕಾಂಶಗಳ ಹೆಚ್ಚಳ
ಮೊಳಕೆಯಾದ ಕಾಳುಗಳಲ್ಲಿ ಪ್ರೋಟೀನ್ ಹೆಚ್ಚು ಇರುತ್ತದೆ. ವಿಟಮಿನ್ C, ವಿಟಮಿನ್ K, ವಿಟಮಿನ್ B, ಐರನ್, ಮ್ಯಾಗ್ನೀಸಿಯಂ, ಫೋಲೇಟ್ ಮುಂತಾದವುಗಳು ಗಣನೀಯವಾಗಿ ಹೆಚ್ಚಾಗುತ್ತವೆ.
ತೂಕ ನಿಯಂತ್ರಣಕ್ಕೆ ಸಹಾಯ
ಕಡಿಮೆ ಕ್ಯಾಲರಿ, ಹೆಚ್ಚು ಫೈಬರ್ ಮತ್ತು ಪ್ರೋಟೀನ್ ಇರುವುದರಿಂದ ಹೊಟ್ಟೆ ತುಂಬಿದಂತೆ ಅನಿಸುವುದರ ಜೊತೆಗೆ ಹಸಿವನ್ನು ನಿಯಂತ್ರಿಸುತ್ತದೆ. ಇದುಚಯಾಪಚಯ ಕ್ರಿಯೆ ಹೆಚ್ಚಿಸಿ ತೂಕ ಕಡಿಮೆಯಾಗಲು ಸಹಾಯ ಮಾಡುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಳ
ವಿಟಮಿನ್ C ಮತ್ತು ಆಂಟಿಯಾಕ್ಸಿಡೆಂಟ್‌ಗಳು ಹೆಚ್ಚಾಗಿರುವುದರಿಂದ ರೋಗಗಳಿಂದ ರಕ್ಷಣೆ ನೀಡುತ್ತದೆ. ರಕ್ತದಲ್ಲಿ ಐರನ್ ಹೆಚ್ಚಾಗಿ ಅನೀಮಿಯಾ ತಡೆಯುತ್ತದೆ.
ಹೃದಯ ಆರೋಗ್ಯಕ್ಕೆ ಒಳ್ಳೆಯದು
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ರಕ್ತದೊತ್ತಡ ನಿಯಂತ್ರಿಸುತ್ತದೆ. ಒಮೆಗಾ-3 ಮತ್ತು ಪೊಟ್ಯಾಶಿಯಂ ಇರುವುದರಿಂದ ಹೃದಯಕ್ಕೆ ಉತ್ತಮ