ಗರ್ಭಾವಸ್ಥೆಯಲ್ಲಿ ಕೇಸರಿ ತಿನ್ನುವುದರಿಂದಾಗುವ ಲಾಭಗಳೇನು?

ಭಾನುಪ್ರಿಯ ಡಿ.ಕೆ

ಗರ್ಭಾವಸ್ಥೆಯಲ್ಲಿ ಕೇಸರಿ ತಿನ್ನುವುದರಿಂದಾಗುವ ಲಾಭಗಳೇನು?

ಗರ್ಭಾವಸ್ಥೆಯಲ್ಲಿ ಕೇಸರಿಯನ್ನು ಮಿತವಾಗಿ ಸೇವಿಸುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಎನ್ನಲಾಗಿದೆ.

ಜೀರ್ಣಕ್ರಿಯೆಗೆ ಸಹಕಾರಿ

ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಗ್ಯಾಸ್, ಎದೆಯುರಿ ಮತ್ತು ಮಲಬದ್ಧತೆಯಂತಹ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಕೇಸರಿ ಸಹಾಯ ಮಾಡುತ್ತದೆ.

ರಕ್ತದೊತ್ತಡ ನಿಯಂತ್ರಣ

ಕೇಸರಿಯಲ್ಲಿರುವ ಪೊಟ್ಯಾಸಿಯಮ್ ಮತ್ತು ಕ್ರೋಸೆಟಿನ್ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ, ಇದು ಗರ್ಭಿಣಿಯರಿಗೆ ಅತ್ಯಂತ ಅವಶ್ಯಕ.

ಉತ್ತಮ ನಿದ್ರೆ

ಗರ್ಭಿಣಿಯರು ಹೆಚ್ಚಾಗಿ ಅನುಭವಿಸುವ ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡಿ, ಮನಸ್ಸನ್ನು ಶಾಂತಗೊಳಿಸುವ ಮೂಲಕ ಉತ್ತಮ ನಿದ್ರೆ ಬರಲು ಇದು ಸಹಕರಿಸುತ್ತದೆ.

ಸ್ನಾಯು ಸೆಳೆತದಿಂದ ಮುಕ್ತಿ

ಗರ್ಭಾವಸ್ಥೆಯ ಕೊನೆಯ ತಿಂಗಳುಗಳಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ಮತ್ತು ಕಾಲುಗಳ ಸ್ನಾಯು ಸೆಳೆತವನ್ನು ಕಡಿಮೆ ಮಾಡಲು ಕೇಸರಿ ನೈಸರ್ಗಿಕ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.

ಮೂಡ್ ಸ್ವಿಂಗ್ಸ್ ನಿಯಂತ್ರಣ

ಹಾರ್ಮೋನ್ ಬದಲಾವಣೆಗಳಿಂದ ಉಂಟಾಗುವ ಮಾನಸಿಕ ಏರಿಳಿತಗಳನ್ನು ಅಥವಾ 'ಮೂಡ್ ಸ್ವಿಂಗ್ಸ್' ಅನ್ನು ನಿಯಂತ್ರಿಸಿ, ಉತ್ಸಾಹದಿಂದ ಇರಲು ಸಹಾಯ ಮಾಡುತ್ತದೆ.