ಬಹುದಿನಗಳಿಂದ ಸ್ನೇಹಿತರಾಗಿದ್ದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ, ಇಂದು ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಐಷಾರಾಮಿ ರೆಸಾರ್ಟ್‌ನಲ್ಲಿ ಅದ್ಧೂರಿ ವಿವಾಹ
ಹಲವು ವರ್ಷಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ಕಡೆಗೂ ತೆರೆ ಎಳೆದ ಈ ಜೋಡಿ, ಗುರುವಾರ (ಫೆ. 26) ರಾಜಸ್ಥಾನದ ಉದಯಪುರದ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆಯಾದರು
ತೆಲುಗು ಸಂಪ್ರದಾಯ, ಕೊಡವ ಶೈಲಿಯಲ್ಲಿ ಮದುವೆ
ತೆಲುಗು ಸಂಪ್ರದಾಯ, ಕೊಡವ ಶೈಲಿಯಲ್ಲಿ ಮದುವೆ
ವಿಜಯ್ ಮತ್ತು ರಶ್ಮಿಕಾ ಜೋಡಿ ಇಂದು ಎರಡು ವಿಭಿನ್ನ ಸಂಪ್ರದಾಯಗಳ ಮೂಲಕ ಮದುವೆಯಾದರು. ಇಂದು ಬೆಳಗ್ಗೆ 10:10ಕ್ಕೆ ತೆಲುಗು ಸಂಪ್ರದಾಯದಂತೆ ವಿವಾಹ
ಉದಯಪುರದ ಐಟಿಸಿ ಮೆಮೆಂಟೋಸ್ ಹೋಟೆಲ್
ಅದೇ ಸಂಜೆ ರಶ್ಮಿಕಾ ಮಂದಣ್ಣ ಅವರ ಕೊಡವ ಶೈಲಿಯಲ್ಲಿ ಸಾಂಪ್ರದಾಯಿಕ ಮದುವೆ ಕಾರ್ಯಕ್ರಮ ಜರುಗಿತು. ಉದಯಪುರದ ಐಟಿಸಿ ಮೆಮೆಂಟೋಸ್ ಹೋಟೆಲ್ ಈ ಸುಂದರ ಕ್ಷಣಗಳಿಗೆ ಸಾಕ್ಷಿಯಾಯಿತು
ನನ್ನ ಬೆಸ್ಟ್ ಫ್ರೆಂಡ್ ಈಗ ನನ್ನ ಪತ್ನಿ
ಮದುವೆಯ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡ ವಿರೋಶ್ ಜೋಡಿಗೆ ಗಣ್ಯರು, ಅಭಿಮಾನಿಗಳಿಂದ ಶುಭಹಾರೈಕೆಗಳ ಸುರಿಮಳೆ