ನಕಲಿ ಪನೀರ್​ನ್ನು ಕಂಡುಹಿಡಿಯುವ ವಿಧಾನಗಳು

ವಿನಾಯಕ ನಾಯಕ

ನಕಲಿ ಪನೀರ್​ನ್ನು ಕಂಡುಹಿಡಿಯುವ ವಿಧಾನಗಳು

ಮಾರುಕಟ್ಟೆಯಲ್ಲಿ ಕಲಬೆರಕೆ ಪನೀರ್ ಹಾವಳಿ ಹೆಚ್ಚಾಗಿದ್ದು, ಆರೋಗ್ಯದ ಮೇಲೆ ಇದು ಗಂಭೀರ ಪರಿಣಾಮ ಬೀರಬಹುದು. ಹಾಲಿನ ಬದಲು ರಾಸಾಯನಿಕ ಬಳಸಿ ತಯಾರಿಸುವ ನಕಲಿ ಪನೀರ್ ಅನ್ನು ನಿಮ್ಮ ಅಡುಗೆಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ, ಅಸಲಿ ಮತ್ತು ನಕಲಿ ಪನೀರ್ ಪತ್ತೆಹಚ್ಚುವ ಸುಲಭ ವಿಧಾನಗಳು ಇಲ್ಲಿವೆ.

ಮುಟ್ಟಿ ನೋಡಿ ಪರೀಕ್ಷಿಸಿ

ಅಸಲಿ ಪನೀರ್: ಅಸಲಿ ಪನೀರ್ ತುಂಬಾ ಮೃದುವಾಗಿರುತ್ತದೆ . ಇದನ್ನು ಕೈಯಲ್ಲಿ ಹಿಡಿದು ಅದುಮಿದರೆ ಪುಡಿಪುಡಿಯಾಗುವುದಿಲ್ಲ. ನಕಲಿ ಪನೀರ್: ನಕಲಿ ಪನೀರ್ ಸ್ವಲ್ಪ ಗಟ್ಟಿಯಾಗಿರುತ್ತದೆ ಅಥವಾ ರಬ್ಬರ್ ತರಹ ಇರುತ್ತದೆ. ಅದನ್ನು ಕೈಯಲ್ಲಿ ಒತ್ತಿದಾಗ ಸಣ್ಣ ಸಣ್ಣ ತುಂಡುಗಳಾಗಿ ಪುಡಿಯಾಗುತ್ತದೆ.

ಅಯೋಡಿನ್ ಪರೀಕ್ಷೆ (Iodine Test)

ಪನೀರ್ ರನ್ನು ನೀರಿನಲ್ಲಿ ಹಾಕಿ 5 ನಿಮಿಷ ಕುದಿಸಿ, ನಂತರ ತಣ್ಣಗಾಗಲು ಬಿಡಿ. ಇದಕ್ಕೆ ಕೆಲವು ಹನಿ ಅಯೋಡಿನ್ ದ್ರಾವಣವನ್ನು ಹಾಕಿ. ಪನೀರ್ ನೀಲಿ ಬಣ್ಣಕ್ಕೆ ತಿರುಗಿದರೆ ಅದು ನಕಲಿ. ಬಣ್ಣ ಬದಲಾಗದಿದ್ದರೆ ಅದು ಅಸಲಿ.

ತೊಗರಿ ಬೇಳೆ ಅಥವಾ ಸೋಯಾಬೀನ್ ಪುಡಿ ಪರೀಕ್ಷೆ

ಪನೀರ್ ರನ್ನು ಉಗುರುಬೆಚ್ಚಗಿನ ನೀರಿನಲ್ಲಿ ಹಾಕಿ. ಅದಕ್ಕೆ ಸ್ವಲ್ಪ ತೊಗರಿ ಬೇಳೆ ಪುಡಿ ಅಥವಾ ಸೋಯಾಬೀನ್ ಪುಡಿಯನ್ನು ಹಾಕಿ 10 ನಿಮಿಷ ಬಿಡಿ. ನೀರಿನ ಬಣ್ಣವು ನಿಧಾನವಾಗಿ ತಿಳಿ ಕೆಂಪು ಅಥವಾ ಹಳದಿ ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಯೂರಿಯಾ ಇರುವುದು ಖಚಿತ.

ಕುದಿಸಿ ನೋಡಿ

ಪನೀರ್ ತುಂಡುಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಕುದಿಯುವಾಗ ಪನೀರ್ ರಬ್ಬರ್ ತರಹ ಗಟ್ಟಿಯಾದರೆ ಅಥವಾ ಸಂಪೂರ್ಣವಾಗಿ ಕರಗಿ ನೀರಿನಂತಾದರೆ ಅದು ನಕಲಿ. ಅಸಲಿ ಪನೀರ್ ಕುದಿಸಿದಾಗಲೂ ತನ್ನ ಸಾಫ್ಟ್‌ನೆಸ್ ಉಳಿಸಿಕೊಳ್ಳುತ್ತದೆ.

ರುಚಿ ಮತ್ತು ವಾಸನೆ ಪರೀಕ್ಷೆ

ಅಸಲಿ ಪನೀರ್: ಹಾಲಿನ ಸೌಮ್ಯವಾದ ವಾಸನೆ ಇರುತ್ತದೆ ಮತ್ತು ತಿನ್ನಲು ರುಚಿಯಾಗಿರುತ್ತದೆ. ನಕಲಿ ಪನೀರ್: ಇದರಲ್ಲಿ ಹಾಲಿನ ವಾಸನೆ ಇರುವುದಿಲ್ಲ. ಡಿಟರ್ಜೆಂಟ್ ಅಥವಾ ಕೆಮಿಕಲ್ ವಾಸನೆ ಬರಬಹುದು. ಬಾಯಲ್ಲಿ ಇಟ್ಟರೆ ರಬ್ಬರ್ ಅಗಿದಂತೆ ಅನಿಸುತ್ತದೆ.