ಕಲ್ಲಂಗಡಿ ಹಣ್ಣು ಎಷ್ಟು ಪ್ರಯೋಜನಕಾರಿ ಹಾಗೂ ದೇಹಕ್ಕೆ ಲಾಭಕಾರಿಯೋ, ಅದರ ಬೀಜಗಳು ಕೂಡ ಅಷ್ಟೇ ಪ್ರಯೋಜನಕಾರಿಯೇ ನಿಜ..ಪ್ರತಿಯೊಂದು ಹಣ್ಣುಗಳು ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭಕಾರಿಯೇ..ಕೆಲವೊಂದು ಹಣ್ಣುಗಳು ಎಷ್ಟು ಪ್ರಯೋಜನಕಾರಿಯೋ, ಅದರ ಬೀಜಗಳು ಸಹ ಅಷ್ಟೇ ಪ್ರಯೋಜನಕಾರಿ.ಈ ಬೀಜಗಳು ಪ್ರೋಟೀನ್, ವಿಟಮಿನ್ ಬಿ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್ ಪೋಷಕಾಂಶಗಳಲ್ಲಿ ಹೇರಳವಾಗಿದೆ.ಇವುಗಳಲ್ಲಿರುವ ಮೆಗ್ನೀಸಿಯಮ್, ಒಮೆಗಾ 3, 6 ಕೊಬ್ಬಿನಾಮ್ಲಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.ಇದಲ್ಲದೆ, ಬೀಜಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಆರೋಗ್ಯಕರ ಕೊಬ್ಬುಗಳು ಚರ್ಮವನ್ನು ರಕ್ಷಿಸುತ್ತದೆ.ಮೆಗ್ನೀಸಿಯಮ್ ಮತ್ತು ಪ್ರೋಟೀನ್ ಒಟ್ಟಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿ.ಕಲ್ಲಂಗಡಿ ಬೀಜಗಳು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ ಮತ್ತು ಅದನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತವೆ