ಕೆಂಪು ಸೀರೆಯಲ್ಲಿ ಮಾದಕ ವಿಷ್ಣುಪ್ರಿಯಾ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಕೆಂಪು ಸೀರೆಯಲ್ಲಿ ಮಾದಕ ವಿಷ್ಣುಪ್ರಿಯಾ!

ಜನಪ್ರಿಯ ನಿರೂಪಕಿ ಮತ್ತು ನಟಿ ವಿಷ್ಣುಪ್ರಿಯ ಭೀಮಿನೇನಿ ಅವರು ಕೆಂಪು ಸೀರೆಯನ್ನು ಧರಿಸಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಗ್ಲಾಮರ್ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ.

ಇನ್‌ಸ್ಟಾಗ್ರಾಮ್ ಸಬ್‌ಸ್ಕ್ರಿಪ್ಷನ್ ವಿವಾದ

ವಿಷ್ಣುಪ್ರಿಯ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 'ಸಬ್‌ಸ್ಕ್ರಿಪ್ಷನ್' ಮಾದರಿಯನ್ನು ಪರಿಚಯಿಸಿದ್ದು, ಇದರಲ್ಲಿ ಅತಿ ಹೆಚ್ಚು ಬೋಲ್ಡ್ ಹಾಗೂ ಅರೆನಗ್ನ ಕಂಟೆಂಟ್ ಹಂಚಿಕೊಳ್ಳುತ್ತಿದ್ದಾರೆ ಎಂಬ ವಿವಾದ ಎದುರಿಸುತ್ತಿದ್ದಾರೆ.

ದೂರು ದಾಖಲು

ಅಶ್ಲೀಲ ಫೋಟೋಗಳ ಮೂಲಕ ಯುವ ಸಮುದಾಯವನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂಬ ಆರೋಪದ ಮೇರೆಗೆ ವಿಜಯವಾಡದ ಸೈಬರ್ ಕ್ರೈಮ್ ಪೊಲೀಸ್ ಸ್ಟೇಷನ್‌ನಲ್ಲಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ (AISF) ನಾಯಕರು ದೂರು ದಾಖಲಿಸಿದ್ದಾರೆ.

ನನ್ನ ದೇಹ ನನ್ನಿಷ್ಟ

ತಮ್ಮ ವಿರುದ್ಧ ತೀವ್ರ ಟ್ರೋಲಿಂಗ್ ಹಾಗೂ ನೆಗೆಟಿವ್ ಕಮೆಂಟ್‌ಗಳು ವ್ಯಕ್ತವಾಗುತ್ತಿದ್ದರೂ ವಿಷ್ಣುಪ್ರಿಯ ಮಾತ್ರ "ನನ್ನ ದೇಹ, ನನ್ನ ಇಷ್ಟ" ಎಂಬ ಧೋರಣೆ ವ್ಯಕ್ತಪಡಿಸಿದ್ದಾರೆ. ಸದ್ಯ ಅವರ ಸಬ್‌ಸ್ಕ್ರಿಪ್ಷನ್ ಆದಾಯ ಮತ್ತು ಫಾಲೋವರ್ಸ್ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ.

ನೆಟ್ಟಿಗರ ಮನಗೆದ್ದ ಬೋಲ್ಡ್ ಪೋಸ್​ಗಳು

ಸದ್ಯ ಕೆಂಪು ಸೀರೆ ಫೋಟೋಗಳು ವೈರಲ್​ ಆಗಿದ್ದು, ಸಾಂಪ್ರದಾಯಿಕ ಉಡುಗೆಯಲ್ಲೇ ತಾವೊಬ್ಬ ಸುಂದರಿ ಎಂಬುದನ್ನು ಸಾಬೀತುಪಡಿಸುವಂತೆ ಅವರು ನೀಡಿರುವ ಬೋಲ್ಡ್ ಪೋಸ್‌ಗಳು ನೆಟ್ಟಿಗರ ಗಮನವನ್ನು ಸೆಳೆದಿವೆ.

ಸಾಂಪ್ರದಾಯಿಕ ಲುಕ್‌ಗೆ ಹಾಟ್‌ನೆಸ್

ಸಾಂಪ್ರದಾಯಿಕ ಸೀರೆಯುಟ್ಟಿದ್ದರೂ ಸಹ, ತಮ್ಮ ವಿಶಿಷ್ಟ ಹಾವಭಾವ ಮತ್ತು ಮಾದಕತೆಯ ಮೂಲಕ ಯುವಕರ ಹೃದಯದಲ್ಲಿ ಕಿಚ್ಚು ಹಚ್ಚುತ್ತಿದ್ದಾರೆ.

ವೈರಲ್ ಆದ ಫೋಟೋಗಳು

ಇಂಟರ್ನೆಟ್‌ನಲ್ಲಿ ಸದ್ಯ ವಿಷ್ಣುಪ್ರಿಯ ಅವರ ಈ ಹೊಸ ಗ್ಲಾಮರಸ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಭಾರಿ ಸಂಚಲನ ಸೃಷ್ಟಿಸಿವೆ.