ಟಾಲಿವುಡ್ನ ಪ್ರಸಿದ್ಧ ನಿರೂಪಕಿ ಮತ್ತು ನಟಿ ವಿಷ್ಣುಪ್ರಿಯಾ ಭೀಮನೇನಿ ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹಾಟ್ ಫೋಟೋಗಳು ವೈರಲ್ ಆಗಿದ್ದು, ಪಡ್ಡೆ ಹುಡುಗರ ನಿದ್ದೆಗಡಿಸಿವೆ.
ನೇರಳೆ ಸುಂದರಿ
ತಮ್ಮ ಗ್ಲಾಮರಸ್ ಲುಕ್‌ನಿಂದಲೇ ಸದಾ ಸುದ್ದಿಯಲ್ಲಿರುವ ವಿಷ್ಣುಪ್ರಿಯಾ ಇದೀಗ ತಿಳಿ ನೇರಳೆ ಬಣ್ಣದ ಡೀಪ್ ನೆಕ್ ಗೌನ್‌ನಲ್ಲಿ ಅತ್ಯಂತ ಸುಂದರವಾಗಿ ಕಂಗೊಳಿಸುತ್ತಿದ್ದು, ಅವರ ಇತ್ತೀಚಿನ ಫೋಟೋಶೂಟ್ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಪಡ್ಡೆ ಹುಡುಗರು ಫಿದಾ
ಎದೆಸೀಳು ಕಾಣುವಂತಹ ನೇರಳೆ ಬಣ್ಣದ ಡೀಪ್ ನೆಕ್ ಗೌನ್‌ನಲ್ಲಿ ವಿಷ್ಣುಪ್ರಿಯಾ ಅವರ ಹಾಟ್ನೆಸ್ ಕಂಡು ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಕಾಮೆಂಟ್ಗಳ ಮೂಲಕ ಟಾಲಿವುಡ್ ಬ್ಯೂಟಿ ಮೈಮಾಟವನ್ನು ಕೊಂಡಾಡುತ್ತಿದ್ದಾರೆ.
ವೃತ್ತಿಜೀವನದ ಆರಂಭ
ವಿಷ್ಣುಪ್ರಿಯಾ ಅವರು ತೆಲುಗು ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ರಿಯಾಲಿಟಿ ಶೋ 'ಪೋವೇ ಪೋರಾ' ಕಾರ್ಯಕ್ರಮವನ್ನು ಸುಡಿಗಾಲಿ ಸುಧೀರ್ ಜೊತೆ ನಿರೂಪಣೆ ಮಾಡುವ ಮೂಲಕ ಮನೆಮಾತಾದರು.
ಸಿನಿಮಾ ರಂಗಕ್ಕೆ ಎಂಟ್ರಿ
ಕೇವಲ ಕಿರುತೆರೆಗಷ್ಟೇ ಸೀಮಿತವಾಗದ ಇವರು, ಚೆಕ್ ಮೇಟ್ ಎಂಬ ತೆಲುಗು ಚಿತ್ರದ ಮೂಲಕ ಬೆಳ್ಳಿಪರದೆಗೂ ಕಾಲಿಟ್ಟರು. ತದನಂತರ ಕೆಲವು ವೆಬ್ ಸರಣಿಗಳು ಹಾಗೂ ಪೋಷಕ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾ ಸ್ಟಾರ್
ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ವಿಷ್ಣುಪ್ರಿಯಾ, ತಮ್ಮ ಹಾಟ್ ಫೋಟೋಶೂಟ್‌ಗಳು, ಮಾಡೆಲಿಂಗ್ ಚಿತ್ರಗಳು ಮತ್ತು ರೀಲ್ಸ್ ಡ್ಯಾನ್ಸ್ ವಿಡಿಯೋಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ.
ಬೋಲ್ಡ್ ಉಡುಗೆ ಹಾಗೂ ಟ್ರೋಲಿಂಗ್ ವಿವಾದ
ವಿಷ್ಣುಪ್ರಿಯಾ ಅವರು ಆಗಾಗ ಅತಿ ಹೆಚ್ಚು ಗ್ಲಾಮರಸ್ ಹಾಗೂ ಬೋಲ್ಡ್ ಆದ ಉಡುಪುಗಳನ್ನು ಧರಿಸಿ ಫೋಟೋಶೂಟ್ ಮಾಡಿಸುತ್ತಾರೆ. ಇದೇ ಕಾರಣಕ್ಕೆ ಆಗಾಗ ಸಂಪ್ರದಾಯವಾದಿ ನೆಟ್ಟಿಗರಿಂದ ಟ್ರೋಲ್ ಆಗುತ್ತಿರುತ್ತಾರೆ.
ಲವ್ ಮತ್ತು ಮದುವೆ ವದಂತಿಗಳ ವಿವಾದ
ಖ್ಯಾತ ನಟ ಮತ್ತು ನಿರ್ದೇಶಕ ಜೆಡಿ ಚಕ್ರವರ್ತಿ ಅವರೊಂದಿಗೆ ವಿಷ್ಣುಪ್ರಿಯಾ ಪ್ರೀತಿಯಲ್ಲಿದ್ದಾರೆ ಮತ್ತು ಅವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಟಾಲಿವುಡ್‌ನಲ್ಲಿ ಭಾರಿ ಸದ್ದು ಮಾಡಿದ್ದವು.
ಬಿಗ್ ಬಾಸ್ ರಿಯಾಲಿಟಿ ಶೋ ಭಾಗಿ
ಬಿಗ್ ಬಾಸ್ ತೆಲುಗು ಸೀಸನ್ 8'ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ವಿಷ್ಣುಪ್ರಿಯಾ, ಅಲ್ಲಿ ತಮ್ಮ ನೇರ ನಡೆ-ನುಡಿ ಹಾಗೂ ಆಟದ ಶೈಲಿಯಿಂದ ಗಮನ ಸೆಳೆದಿದ್ದರು. ಅಲ್ಲೂ ಸಹ ಅವರ ಕೆಲವೊಂದು ಹೇಳಿಕೆಗಳು ಮತ್ತು ವರ್ತನೆಗಳು ವಿವಾದ ಹಾಗೂ ಚರ್ಚೆಗಳಿಗೆ ಕಾರಣವಾಗಿದ್ದವು.