ಕೊನೆಗೂ ವೈರಲ್​ ಆಯ್ತು ವಿಜಯ್-ರಶ್ಮಿಕಾ ಮೆಹೆಂದಿ ಸೀಕ್ರೆಟ್ ಫೋಟೋಸ್!

ಭಾನುಪ್ರಿಯ ಡಿ.ಕೆ

ಕೊನೆಗೂ ವೈರಲ್​ ಆಯ್ತು ವಿಜಯ್-ರಶ್ಮಿಕಾ ಮೆಹೆಂದಿ ಸೀಕ್ರೆಟ್ ಫೋಟೋಸ್!

ಸದಾ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಕೊನೆಗೂ ತಮ್ಮ ಜೀವನದ ಅತ್ಯಂತ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ರಶ್ಮಿಕಾ ಉಡುಪು

ಕೆಂಪು, ಹಸಿರು ಮತ್ತು ಚಿನ್ನದ ಬಣ್ಣದ ಕಸೂತಿ ಕೆಲಸವಿರುವ ಅದ್ಭುತ ಲೆಹಂಗಾವನ್ನು ಧರಿಸಿದ್ದರು. ಅವರ ಕೈಗಳಲ್ಲಿ ಗಾಢವಾದ ಬಣ್ಣ ಹತ್ತಿದ ಮೆಹೆಂದಿ ವಿನ್ಯಾಸವು ಅವರ ಸೌಂದರ್ಯಕ್ಕೆ ಮತ್ತಷ್ಟು ಕಳೆ ನೀಡಿತ್ತು.

ರಾಜಕುಮಾರನಂತೆ ಕಂಗೊಳಿಸಿದ ವಿಜಯ್

ರಶ್ಮಿಕಾ ಅವರಿಗೆ ಪೂರಕವಾಗಿ ಗಾಢ ನೀಲಿ ಬಣ್ಣದ ಸಿಲ್ಕ್ ಧೋತಿ ಮತ್ತು ಹಸಿರು ಬಣ್ಣದ ಕುರ್ತಾದ ಮೇಲೆ ಎಂಬ್ರಾಯ್ಡರಿ ಇರುವ ಜಾಕೆಟ್ ಧರಿಸಿ ರಾಜಕುಮಾರನಂತೆ ವಿಜಯ್​ ಕಂಗೊಳಿಸಿದ್ದರು.

ಮೆಹೆಂದಿ ಡಿಸೈನ್​

ರಶ್ಮಿಕಾ ಅವರು ಇಡೀ ಕೈ ತುಂಬ ಮೆಹೆಂದಿ ಹಾಕಿಸಿಕೊಳ್ಳುವ ಬದಲಿಗೆ, ಸರಳ ಮತ್ತು ಅರ್ಥಪೂರ್ಣವಾದ 'ಮಿನಿಮಲ್' ವಿನ್ಯಾಸವನ್ನು ಆರಿಸಿಕೊಂಡಿದ್ದರು.

ಹಣೆಗೆ ಮುತ್ತಿಟ್ಟ ವಿಜಯ್​

ಫೋಟೋಗಳಲ್ಲಿ ವಿಜಯ್ ದೇವರಕೊಂಡ ಅವರು ರಶ್ಮಿಕಾ ಅವರ ಹಣೆಗೆ ಮುತ್ತಿಡುತ್ತಿರುವ ದೃಶ್ಯವು ಅಭಿಮಾನಿಗಳ ಮನಗೆದ್ದಿದೆ.

ಸಂಗೀತ ಸಂಭ್ರಮ

ರಾಜಸ್ಥಾನಿ ಸಂಸ್ಕೃತಿಯ ಹಿನ್ನೆಲೆಯಲ್ಲಿ ಜಾನಪದ ನೃತ್ಯಗಳು, ಸಂಗೀತ ಮತ್ತು ಮೊಗ್ರಾ ಹೂವುಗಳ ಅಲಂಕಾರದ ನಡುವೆ ಈ ಸಮಾರಂಭ ಜರುಗಿತು.