ರಮೇಶ್ ಕುಮಾರ್ ಬಿ ಎಡಮೋಳೆ
100 ವರ್ಷಗಳಿಗೂ ಹೆಚ್ಚು ಅವಧಿಯ ಬಳಿಕ ಕಾಣಸಿಕ್ಕ ಎರಡನೇ ಅಪರೂಪದ ದೃಶ್ಯ ಇದಾಗಿದೆ.
ಪಕ್ಷಿಯ ಹೆಸರು ಗ್ರೀನ್
ಹನಿಕ್ರೀಪರ್
ಹಸಿರು ಬಣ್ಣದಲ್ಲಿರುವ ದೇಹದ ಅರ್ಧ ಭಾಗ ಹೆಣ್ಣು ಮತ್ತು ನೀಲಿ ಬಣ್ಣದಲ್ಲಿರುವ ಇನ್ನರ್ಧ ಭಾಗ ಗಂಡು.
ಈ ಪಕ್ಷಿ ಯುನೈಟೆಡ್
ಸ್ಟೇಟ್ಸ್
ನ ದಕ್ಷಿಣ ಕರೊಲಿನಾ ರಾಜ್ಯದ ಕೊಲಂಬಿಯಾದಲ್ಲಿ ಕಂಡುಬಂದಿದೆ.
ಈ ಪಕ್ಷಿ ಸಾಮಾನ್ಯವಾಗಿ ಬಲಭಾಗದಲ್ಲಿ ಪುರುಷ ಪುಕ್ಕ ಮತ್ತು ಎಡಭಾಗದಲ್ಲಿ ಹೆಣ್ಣು ಗರಿಗಳನ್ನು ಹೊಂದಿದೆ.
ಈ ವಿದ್ಯಮಾನವು ಪಕ್ಷಿಗಳಲ್ಲಿ ಅತ್ಯಂತ ಅಪರೂಪವಾಗಿದೆ. ಇದನ್ನು ವೈಜ್ಞಾನಿಕವಾಗಿ ಗೈನಾಂಡ್ರೊಮಾರ್ಫಿಕ್ ಎಂದು ಕರೆಯಲಾಗುತ್ತದೆ.
ಮೊಟ್ಟೆ ಉತ್ಪಾದಿಸಲು ಸ್ತ್ರೀ ಕೋಶ ವಿಭಜನೆ ಸಮಯದಲ್ಲಿ ಉಂಟಾಗುವ ದೋಷದಿಂದ ಎರಡು ವೀರ್ಯವೂ ಫಲೀಕರಣಗೊಳ್ಳುವುದರಿಂದ ಈ ರೀತಿ ಸಂಭವಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ