ಟಾಲಿವುಡ್ ನಟಿ ವೈಷ್ಣವಿ ಚೈತನ್ಯ ಅವರು ತಮ್ಮ ಹೊಸ ಕೇಶ ವಿನ್ಯಾಸದೊಂದಿಗೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳು ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಬೇಬಿ ಚಿತ್ರದ ಯಶಸ್ಸು
ಯೂಟ್ಯೂಬರ್ ಆಗಿ ಎಂಟ್ರಿ ಕೊಟ್ಟು ಆ ಬಳಿಕ ನಟಿಯಾಗಿ ಬದಲಾದ ವೈಷ್ಣವಿ ಚೈತನ್ಯ, 2023 ರಲ್ಲಿ ತೆರೆಕಂಡ ಬ್ಲಾಕ್ಬಸ್ಟರ್ ಬೇಬಿ ಚಿತ್ರದ ಮೂಲಕ ಯುವಕರ ಸೆನ್ಸೇಷನ್ ಆದರು.
ಕೈಕೊಟ್ಟ ಲವ್ ಮಿ ಮತ್ತು ಜ್ಯಾಕ್
ಬೇಬಿ ಚಿತ್ರದ ಯಶಸ್ಸಿನ ನಂತರ, ಲವ್ ಮಿ ಮತ್ತು ಜ್ಯಾಕ್ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡರು. ಆದರೆ, ಈ ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ.
ಎಪಿಕ್ - ದಿ ಸೆಮಿಸ್ಟರ್
ಎರಡು ಸಿನಿಮಾಗಳ ಸೋಲಿನಿಂದ ಎದೆಗುಂದದ ವೈಷ್ಣವಿ, ತಮ್ಮ ಮುಂದಿನ ದೊಡ್ಡ ಯೋಜನೆಯತ್ತ ಗಮನಹರಿಸಿದ್ದಾರೆ. ಮತ್ತೆ ಆನಂದ್ ದೇವರಕೊಂಡ ಜತೆಗೆ ಎಪಿಕ್ - ದಿ ಸೆಮಿಸ್ಟರ್ನಲ್ಲಿ ನಟಿಸುತ್ತಿದ್ದಾರೆ.
ಅಭಿಮಾನಿಗಳು ಉತ್ಸುಕ
ಈ ಚಿತ್ರವು ಈಗಾಗಲೇ ಯುವಕರಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಬೇಬಿ ಚಿತ್ರದ ಜೋಡಿಯನ್ನು ಮತ್ತೆ ಪರದೆಯ ಮೇಲೆ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಹೊಸ ಲುಕ್
ಇತ್ತೀಚೆಗೆ, ವೈಷ್ಣವಿ ಅವರು ಹೊಸ ಸಿನಿಮಾದಲ್ಲಿರುವ ತಮ್ಮ ಲುಕ್ ಅನ್ನು ಬಹಿರಂಗಪಡಿಸಿದ್ದಾರೆ. ಸುರುಳಿಯಾಕಾರದ ಕೇಶವಿನ್ಯಾಸ ಮಾಡಲಾಗಿದ್ದು, ಈ ಲುಕ್ ವೈಷ್ಣವಿ ಸೌಂದರ್ಯಕ್ಕೆ ಮೆರಗು ತಂದಿದೆ ಅಂತಿದ್ದಾರೆ ಅಭಿಮಾನಿಗಳು.