ಸೀರೆಯಲ್ಲಿ ಮಿಂಚಿದ ಎಪಿಕ್​ ಬ್ಯೂಟಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಸೀರೆಯಲ್ಲಿ ಮಿಂಚಿದ ಎಪಿಕ್​ ಬ್ಯೂಟಿ

'ಎಪಿಕ್ – ಫಸ್ಟ್ ಸೆಮಿಸ್ಟರ್' ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಟಿ ವೈಷ್ಣವಿ ಚೈತನ್ಯ ಅವರು ಸೀರೆಯಲ್ಲಿ ಮಿಂಚಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ನಿನ್ನೆಯಷ್ಟೇ ನಡೆದ ಕಾರ್ಯಕ್ರಮ

ಎಪಿಕ್​ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವು ಸೆಪ್ಟೆಂಬರ್ 4, 2026 ರಂದು ನಡೆಯಿತು. ಈ ಚಿತ್ರದಲ್ಲಿ ಆನಂದ್​ ದೇವರಕೊಂಡ ನಾಯಕರಾಗಿದ್ದು, ವೈಷ್ಣವಿ ನಾಯಕಿಯಾಗಿದ್ದಾರೆ.

ಗುಲಾಬಿ ಬಣ್ಣದ ಸೀರೆ

ಈ ಕಾರ್ಯಕ್ರಮದಲ್ಲಿ ನಟಿ ವೈಷ್ಣವಿ ಚೈತನ್ಯ ಅವರು ಸುಂದರವಾದ ಲೈಟ್ ಪಿಂಕ್ (ಗುಲಾಬಿ ಬಣ್ಣದ) ಸೀರೆಯಲ್ಲಿ ಕಂಗೊಳಿಸಿದರು. ಸೀರೆಗೆ ಮ್ಯಾಚಿಂಗ್​ ಆಗುವಂತಹ ಸ್ಲೀವ್‌ಲೆಸ್ ಎಂಬ್ರಾಯ್ದರ್ ಬ್ಲೌಸ್ ಧರಿಸಿ ಮಾದಕವಾಗಿ ಕಾಣಿಸಿಕೊಂಡರು.

ಮ್ಯಾಚಿಂಗ್​ ಆಭರಣ ಮಿಂಚು

ಕುತ್ತಿಗೆಗೆ ವಜ್ರದ ನೆಕ್ಲೇಸ್ ಹಾಗೂ ಅದಕ್ಕೆ ಮ್ಯಾಚಿಂಗ್ ಆಗುವ ಸುಂದರವಾದ ಕಿವಿಯೋಲೆಗಳನ್ನು ವೈಷ್ಣವಿ ಧರಿಸಿದ್ದರು. ಅಲ್ಲದೆ, ಕೂದಲನ್ನು ಅಂದವಾಗಿ ಬ್ರೇಡ್ ಮಾಡಿ (ಜಡೆ) ಸ್ಟೈಲಿಶ್ ಆಗಿ ಕಾಣಿಸಿಕೊಂಡರು.

ಮತ್ತೆ ಆನಂದ್ ಜತೆ ವೈಷು

ಭಾರಿ ಯಶಸ್ಸು ಗಳಿಸಿದ 'ಬೇಬಿ' ಚಿತ್ರದ ಬಳಿಕ ಈ ಜನಪ್ರಿಯ ಜೋಡಿ ಮತ್ತೆ ಒಂದಾಗಿರುವುದರಿಂದ ಪ್ರೇಕ್ಷಕರಲ್ಲಿ ಮತ್ತು ಯುವಜನತೆಯಲ್ಲಿ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯಿದೆ.

ನಿರ್ದೇಶನ ಹಾಗೂ ಹಿನ್ನೆಲೆ

ಜನಪ್ರಿಯ ವೆಬ್ ಸೀರೀಸ್ '90ಸ್ – ಎ ಮಿಡ್ಯುಲ್ ಕ್ಲಾಸ್ ಬಯೋಪಿಕ್' ಖ್ಯಾತಿಯ ಆತಿತ್ಯ ಹಾಸನ್ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇದು ಆ ವೆಬ್ ಸೀರೀಸ್‌ನ ಒಂದು ಸ್ಪಿನ್-ಆಫ್ ಕಥೆಯಾಗಿದೆ.

ಕಥೆಯ ಹಿನ್ನೆಲೆ

ಈ ಚಿತ್ರದ ಕಥೆಯು ವಿದೇಶಿ ಕಾಲೇಜು ಹಾಗೂ ಲಂಡನ್ ಹಿನ್ನೆಲೆಯಲ್ಲಿ ಸಾಗುತ್ತದೆ. ಇದು ಕಾಲೇಜು ಜೀವನ, ಪ್ರೀತಿ, ಸ್ನೇಹಿ ಹಾಗೂ ಭಾವನಾತ್ಮಕ ಸನ್ನಿವೇಶಗಳ ಒಟ್ಟು ಪ್ಯಾಕೇಜ್ ಆಗಿದೆ.

ನಿರ್ಮಾಣ ಹಾಗೂ ಸಂಗೀತ

ಸಿತಾರ ಎಂಟರ್ಟೈನ್ಮೆಂಟ್ಸ್ ಮತ್ತು ಫಾರ್ಚ್ಯೂನ್ ಫೋರ್ ಸ್ಟುಡಿಯೋಸ್ ಲಾಂಛನದಲ್ಲಿ ಎಸ್. ನಾಗವಂಶಿ ಹಾಗೂ ಸಾಯಿ ಸೌಜನ್ಯ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹೆಶಮ್ ಅಬ್ದುಲ್ ವಹಾಬ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಬಿಡುಗಡೆ ದಿನಾಂಕ

ಈ ಯೂತ್‌ಫುಲ್ ರೊಮ್ಯಾಂಟಿಕ್ ಎಂಟರ್‌ಟೈನರ್ ಸಿನಿಮಾವು ಸೆಪ್ಟೆಂಬರ್ 11, 2026 ರಂದು ವಿಶ್ವದಾದ್ಯಂತ ತೆರೆಕಾಣಲಿದೆ.