ಬೆಳಿಗ್ಗೆ ಎದ್ದಾಗ ನಿಮ್ಮ ಮುಖ ಕನ್ನಡಿಯಂತೆ ಹೊಳೆಯಲು ಇದನ್ನು ಬಳಸಿ!
ಭಾನುಪ್ರಿಯ ಡಿ.ಕೆ
ಬೆಳಿಗ್ಗೆ ಎದ್ದಾಗ ನಿಮ್ಮ ಮುಖ ಕನ್ನಡಿಯಂತೆ ಹೊಳೆಯಲು ಇದನ್ನು ಬಳಸಿ!
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರ ಮುಖವು ಅಕಾಲಿಕ ವಯಸ್ಸಾಗುವ ಲಕ್ಷಣಗಳು ಹೊಂದುತ್ತವೆ. ಇದು ಹೆಚ್ಚು ಸಾಮಾನ್ಯವಾಗಿದ್ದರೂ, ಚರ್ಮದ ಸ್ಥಿತಿಯು ಕಾಲಾನಂತರದಲ್ಲಿ ಬದಲಾಗುತ್ತದೆ. ವಯಸ್ಸಾದಂತೆ ಪ್ರತಿಯೊಬ್ಬ ಮಾನವನ ಚರ್ಮದ ಕೋಶಗಳು ತೇವಾಂಶ ಮತ್ತು ಜಲಸಂಚಯನವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ.
ಗುಲಾಬಿ ಎಣ್ಣೆ
ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಗುಲಾಬಿ ಎಣ್ಣೆಯನ್ನು ಮುಖಕ್ಕೆ ಹಚ್ಚುವುದರಿಂದ ಇದು ಚರ್ಮವನ್ನು ಆಳವಾಗಿ ತೇವಾಂಶಗೊಳಿಸಿ ಮೃದುಗೊಳಿಸುತ್ತದೆ. ಆಂಟಿ-ಇನ್‌ಫ್ಲಮೇಟರಿ ಗುಣಗಳಿಂದ ಕೆಂಪುತನ, ಉರಿ ಮತ್ತು ಅಲರ್ಜಿಯಂತಹ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಅರ್ಗಾನ್ ಎಣ್ಣೆ
ಅರ್ಗಾನ್ ಎಣ್ಣೆಯನ್ನು ಮುಖಕ್ಕೆ ಹಚ್ಚುವುದರಿಂದ ಇದು ಮುಖವನ್ನು ಆಳವಾಗಿ ತೇವಾಂಶಗೊಳಿಸಿ, ಶುಷ್ಕತೆಯನ್ನು ತಡೆಯುತ್ತದೆ. ವಿಟಮಿನ್ ಇ ಮತ್ತು ಆಂಟಿ-ಇನ್‌ಫ್ಲಮೇಟರಿ ಗುಣಗಳಿಂದ ಕೂಡಿರುವುದರಿಂದ ಉರಿ, ಕೆಂಪುತನ, ಮೊಡವೆಗಳನ್ನು ನಿಯಂತ್ರಿಸಿ ಕಲೆಗಳನ್ನು ಮಸುಕುಗೊಳಿಸುತ್ತದೆ.
ಜೊಜೊಬಾ ಎಣ್ಣೆ
ಜೊಜೊಬಾ ಎಣ್ಣೆಯನ್ನು ಮುಖಕ್ಕೆ ಹಚ್ಚುವುದರಿಂದ ಇದು ಚರ್ಮಕ್ಕೆ ಆಳವಾದ ತೇವಾಂಶವನ್ನು ನೀಡಿ, ಶುಷ್ಕತೆಯನ್ನು ತಡೆಯುತ್ತದೆ. ಹಾಗೆಯೇ ನಾನ್-ಕಾಮೆಡೋಜೆನಿಕ್ ಗುಣದಿಂದ ರಂದ್ರಗಳನ್ನು ಮುಚ್ಚದೆ ಎಣ್ಣೆಯ ಚರ್ಮದಲ್ಲಿ ಸೀಬಮ್ ಉತ್ಪಾದನೆಯನ್ನು ಸಮತೋಲನಗೊಳಿಸಿ ಮೊಡವೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ದಾಳಿಂಬೆ ಬೀಜದ ಎಣ್ಣೆ
ಇದರಲ್ಲಿರುವ ಆಂಟಿ-ಇನ್‌ಫ್ಲಮೇಟರಿ ಗುಣಗಳು ಚರ್ಮವನ್ನು ಉರಿ, ಕೆಂಪುತನ, ಮೊಡವೆಗಳನ್ನು ನಿಯಂತ್ರಿಸಿ ಕಲೆಗಳನ್ನು ಮಸುಕುಗೊಳಿಸುತ್ತದೆ. ಚರ್ಮದ ಸ್ಥಿತಿಸ್ಥಾಪಕತೆ ಹೆಚ್ಚಿಸಿ ಕಾಂತಿ ನೀಡುತ್ತದೆ.
ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಿವೆ. ಇದು ಹಾನಿಗೊಳಗಾದ ಚರ್ಮವನ್ನು ಸರಿಪಡಿಸುತ್ತದೆ. ಇದರಲ್ಲಿರುವ ಆಂಟಿ-ಇನ್‌ಫ್ಲಮೇಟರಿ ಗುಣಗಳು ಚರ್ಮವನ್ನು ಉರಿ, ಕೆಂಪುತನ, ಕಣ್ಣಿನ ಕೆಳಭಾಗದ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.