ಶ್ವಾಸಕೋಶವು ಗಾಳಿಯಿಂದ ಆಮ್ಲಜನಕವನ್ನು ಹೀರಿಕೊಂಡು ರಕ್ತಕ್ಕೆ ಸೇರಿಸುವುದು ಮತ್ತು ರಕ್ತದಿಂದ ಕಾರ್ಬನ್ ಡೈಆಕ್ಸೈಡ್ ಅನಿಲವನ್ನು ಹೊರಹಾಕುವ ಮೂಲಕ ಎಲ್ಲಾ ಕೋಶಗಳಿಗೆ ಆಮ್ಲಜನಕವನ್ನು ಪೂರೈಸುತ್ತದೆ.
ಧೂಮಪಾನ ಬಿಟ್ಟುಬಿಡಿ
ಅತಿಯಾದ ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್, COPD ಮತ್ತು ಇತರ ರೋಗಗಳಿಗೆ ತುತ್ತಾಗುವಂತೆ ಮಾಡುತ್ತದೆ. ಹಾಗಾಗಿ ಧೂಮಪಾನವನ್ನು ಆದಷ್ಟು ತ್ಯಜಿಸಿ.
ಆರೋಗ್ಯಕರ ಆಹಾರ ಸೇವಿಸಿ
ಆಂಟಿಆಕ್ಸಿಡೆಂಟ್ ಸಮೃದ್ಧ ಹಣ್ಣುಗಳು, ತರಕಾರಿಗಳು, ಬೀಜಗಳು ಮತ್ತು ಮೀನುಗಳನ್ನು ಸೇವಿಸುವುದರಿಂದ ಶ್ವಾಸಕೋಶದ ಉರಿಯೂತ ಕಡಿಮೆ ಮಾಡುತ್ತವೆ.
ನಿಯಮಿತ ವ್ಯಾಯಾಮ ಮಾಡಿ
ಪ್ರತಿನಿತ್ಯ 30 ನಿಮಿಷಗಳ ಕಾಲ ನಡೆಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಓಡುವುದು, ನಡೆಯುವುದು, ಈಜು ಅಥವಾ ಯೋಗದಂಥ ಕಾರ್ಡಿಯೋ ವ್ಯಾಯಾಮಗಳು ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುತ್ತವೆ.
ವಾಯು ಮಾಲಿನ್ಯದಿಂದ ದೂರ ಇರಿ
ಹೆಚ್ಚುತ್ತಿರುವಂತಹ ಹೊಗೆ, ಮಾಲಿನ್ಯದಿಂದ ಶ್ವಾಸಕೋಶಗಳಿಗೆ ಹಾನಿಯಾಗುವ ಪ್ರಭಾವ ಜಾಸ್ತಿಯಾಗಿರುತ್ತದೆ. ಹಾಗಾಗಿ ಹೊರಗೆ ಹೋಗುವಾಗ N95 ಮಾಸ್ಕ್ ಧರಿಸಿ ಓಡಾಡುವ ಅಭ್ಯಾಸವನ್ನು ಮಾಡಿಕೊಳ್ಳಿ.
ಆಳವಾದ ಉಸಿರಾಟ ಅಭ್ಯಾಸ ಮಾಡಿ
ಆಳವಾದ ಉಸಿರಾಟ ಅಥವಾ ಪ್ರಾಣಾಯಾಮದಂಥ ವ್ಯಾಯಾಮಗಳನ್ನು ಅಭ್ಯಾಸ ಮಾಡುವುದರಿಂದ ಇದು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಿ ಒತ್ತಡ ಕಡಿಮೆ ಮಾಡುತ್ತವೆ.
ಒಳಾಂಗಣ ಸಸ್ಯಗಳನ್ನು ಬೆಳೆಸಿ
ಸ್ನೇಕ್ ಪ್ಲಾಂಟ್, ಪೀಸ್ ಲಿಲಿ, ಅಲೋವೆರಾ ಮುಂತಾದ ಸಸ್ಯಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಗಾಳಿಯನ್ನು ಶುದ್ಧೀಕರಿಸಿ ಶ್ವಾಸಕೋಶದ ಆರೋಗ್ಯವನ್ನು ಕಾಪಾಡುತ್ತದೆ.