ಬಿಸಿಲಲ್ಲೂ ಕೂಲ್ ಆಗಿ ಕಾಣಲು ಆಫೀಸ್‌ಗೆ ಹೋಗುವಾಗ ಈ ಬಾಟಮ್ ವೇರ್ ಬಳಸಿ!

ಭಾನುಪ್ರಿಯ ಡಿ.ಕೆ

ಬಿಸಿಲಲ್ಲೂ ಕೂಲ್ ಆಗಿ ಕಾಣಲು ಆಫೀಸ್‌ಗೆ ಹೋಗುವಾಗ ಈ ಬಾಟಮ್ ವೇರ್ ಬಳಸಿ!

ಬೇಸಿಗೆಯ ಬಿಸಿಲಿನಲ್ಲಿ ಆಫೀಸ್‌ಗೆ ಹೋಗುವಾಗ ಆರಾಮದಾಯಕವಾಗಿರುವ ಜೊತೆಗೆ ವೃತ್ತಿಪರವಾಗಿ ಕಾಣುವಂತಹ ಬಟ್ಟೆಗಳನ್ನು ಆರಿಸಿಕೊಳ್ಳುವುದು ಬಹಳ ಮುಖ್ಯ. ಬೆವರಿನ ಕಿರಿಕಿರಿ ತಪ್ಪಿಸಲು ಮತ್ತು ಸ್ಟೈಲಿಶ್ ಆಗಿ ಕಾಣಲು ಈ ರೀತಿಯ ಬಾಟಮ್​ಗಳನ್ನು ಬಳಸಿರಿ.

ಕಾಟನ್ ಲಿನಿನ್ ಪ್ಯಾಂಟ್ಸ್

ಬೇಸಿಗೆಗೆ ಅತ್ಯಂತ ಸೂಕ್ತವಾದ ಬಟ್ಟೆಯೆಂದರೆ ಲಿನಿನ್. ಇದು ಗಾಳಿಯಾಡಲು ಅನುವು ಮಾಡಿಕೊಡುತ್ತದೆ ಮತ್ತು ಬೆವರಿನ ಅಂಶವನ್ನು ಬೇಗನೆ ಹೀರಿಕೊಳ್ಳುತ್ತದೆ.ತಿಳಿ ಬಣ್ಣದ ಲಿನಿನ್ ಪ್ಯಾಂಟ್ಸ್ ಅನ್ನು ಫಾರ್ಮಲ್ ಶರ್ಟ್ ಅಥವಾ ಟಾಪ್ ಜೊತೆ ಧರಿಸಿ.

ಪಲಾಝೊ ಪ್ಯಾಂಟ್ಸ್

ಪಲಾಝೊಗಳು ವಿಸ್ತಾರವಾಗಿರುವುದರಿಂದ ಕಾಲುಗಳಿಗೆ ಗಾಳಿಯಾಡಲು ಸುಲಭವಾಗುತ್ತದೆ. ಆಫೀಸ್‌ಗೆ ಧರಿಸುವಾಗ ಅತಿಯಾದ ವಿನ್ಯಾಸವಿಲ್ಲದ, ಸಿಂಪಲ್ ಆದ ಕಾಟನ್ ಪಲಾಝೊಗಳನ್ನು ಆರಿಸಿಕೊಳ್ಳಿ.

ಕ್ಯುಲೋಟ್ಸ್

ಕ್ಯುಲೋಟ್ಸ್ ಎಂದರೆ ಮೊಣಕಾಲಿನ ಕೆಳಗೆ ಬರುವ ಸ್ವಲ್ಪ ಅಗಲವಾದ ಪ್ಯಾಂಟ್ಸ್. ಇವು ನೋಡಲು ಸ್ಕರ್ಟ್‌ನಂತೆ ಕಂಡರೂ ಪ್ಯಾಂಟ್‌ನಷ್ಟೇ ಆರಾಮದಾಯಕವಾಗಿರುತ್ತವೆ. ಮಾಡರ್ನ್ ಆಫೀಸ್ ಲುಕ್‌ಗೆ ಇದು ಬೆಸ್ಟ್ ಚಾಯ್ಸ್.

ಸ್ಟ್ರೈಟ್ ಫಿಟ್ ಕಾಟನ್ ಪ್ಯಾಂಟ್ಸ್

ಬಿಗಿಯಾದ ಜೀನ್ಸ್ ಅಥವಾ ಲೆಗ್ಗಿಂಗ್ಸ್ ಬದಲಿಗೆ ಸ್ಟ್ರೈಟ್ ಫಿಟ್ ಕಾಟನ್ ಪ್ಯಾಂಟ್ಸ್ ಬಳಸಿ. ಇದು ಕಾಲುಗಳಿಗೆ ಅಂಟಿಕೊಳ್ಳುವುದಿಲ್ಲ ಮತ್ತು ದಿನವಿಡೀ ಕೆಲಸ ಮಾಡಲು ಆರಾಮ ನೀಡುತ್ತದೆ.

ಕಾಟನ್ ಸಿಗರೇಟ್ ಪ್ಯಾಂಟ್ಸ್

ನಿಮಗೆ ಪ್ಯಾಂಟ್ ಸ್ವಲ್ಪ ಫಿಟ್ಟಿಂಗ್ ಆಗಿರಬೇಕು ಎನಿಸಿದರೆ ಸಿಗರೇಟ್ ಪ್ಯಾಂಟ್ಸ್ ಬಳಸಬಹುದು. ಆದರೆ ಬಟ್ಟೆ ಮಾತ್ರ ಪ್ಯೂರ್ ಕಾಟನ್ ಆಗಿರಲಿ. ಇದು ಕುರ್ತಾಗಳ ಜೊತೆ ಅತ್ಯಂತ ಪ್ರೊಫೆಷನಲ್ ಆಗಿ ಕಾಣುತ್ತದೆ.