ಚಿನ್ನದ ಗೊಂಬೆ ಊರ್ವಶಿ ರೌಟೇಲಾ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಚಿನ್ನದ ಗೊಂಬೆ ಊರ್ವಶಿ ರೌಟೇಲಾ!

ಬಾಲಿವುಡ್‌ನ ಗ್ಲಾಮರಸ್ ನಟಿ ಊರ್ವಶಿ ರೌಟೇಲಾ ಅವರು ಚಿನ್ನದ ಬಣ್ಣದ ಉಡುಪಿನಲ್ಲಿ ಕ್ಯಾಮರಾಗೆ ನೀಡಿರುವ ಮಾದಕ ಪೋಸ್​ಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿವೆ.

ಕನ್ನಡಿಗರಿಗೂ ಪರಿಚಯ

ನಟ ದರ್ಶನ್​ ಅಭಿನಯದ ಐರಾವತ ಸಿನಿಮಾದಲ್ಲಿ ನಟಿಸುವ ಮೂಲಕ ಊರ್ವಶಿ ರೌಟೇಲಾ ಅವರು ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

ಐಟಂ ಸಾಂಗ್‌ಗಳ ಮೂಲಕವೇ ಫೇಮಸ್

ಬಾಲಿವುಡ್‌ನ ಈ ಕ್ರೇಜಿ ಬ್ಯೂಟಿ ಚಿತ್ರರಂಗದಲ್ಲಿ ತಮ್ಮ ಸ್ಪೆಷಲ್ ಐಟಂ ಸಾಂಗ್‌ಗಳ ಮೂಲಕವೇ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಸ್ಟಾರ್ ಹೀರೊಗಳ ಸಿನಿಮಾಗಳಲ್ಲಿ ಇವರ ಐಟಂ ಸಾಂಗ್ ಇದೆ ಎಂದರೆ ಅಭಿಮಾನಿಗಳು ಕಣ್ಣಿಟ್ಟು ಕಾಯುತ್ತಾರೆ.

ಟಾಲಿವುಡ್‌ನಲ್ಲಿ ಸೃಷ್ಟಿಸಿದ ಕ್ರೇಜ್

ಕೇವಲ ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದಲ್ಲೂ, ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ಬ್ಯಾಕ್-ಟು-ಬ್ಯಾಕ್ ಐಟಂ ಸಾಂಗ್‌ಗಳಲ್ಲಿ ನರ್ತಿಸುವ ಮೂಲಕ ಯುವಕರ ಹೃದಯ ಕದಿದ್ದಾರೆ.

ಸರಣಿ ಸೂಪರ್ ಹಿಟ್ ಸಿನಿಮಾಗಳು

ತೆಲುಗಿನ ಸೂಪರ್​ ಹಿಟ್​ ಸಿನಿಮಾಗಳಾದ 'ಏಜೆಂಟ್', ಪವನ್ ಕಲ್ಯಾಣ್ ಅವರ 'ಬ್ರೋ' ಮತ್ತು ರಾಮ್ ಪೋತಿನೇನಿ ನಟನೆಯ 'ಸ್ಕಂದ' ಚಿತ್ರಗಳ ವಿಶೇಷ ಗೀತೆಗಳಲ್ಲಿ ಊರ್ವಶಿ ರೌಟೇಲಾ ಅವರು ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ.

'ಡಾಕು ಮಹಾರಾಜ್' ಚಿತ್ರದಲ್ಲಿ ಪ್ರಮುಖ ಪಾತ್ರ

ಇತ್ತೀಚಿನ ಸೂಪರ್ ಹಿಟ್ ಚಿತ್ರ 'ಡಾಕು ಮಹಾರಾಜ್' ಸಿನಿಮಾದಲ್ಲಿ ಕೇವಲ ಸ್ಪೆಷಲ್ ಸಾಂಗ್ ಮಾತ್ರವಲ್ಲದೆ, ಒಂದು ಪ್ರಮುಖವಾದ ಪಾತ್ರದಲ್ಲೂ ಕಾಣಿಸಿಕೊಂಡು ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್

ಸಿನಿಮಾಗಳಲ್ಲಿ ಎಷ್ಟೇ ಬಿಜಿಯಾಗಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಊರ್ವಶಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಹಾಟ್ ಫೋಟೋಶೂಟ್‌ಗಳು ಮತ್ತು ಬೋಲ್ಡ್ ಲುಕ್‌ಗಳ ಮೂಲಕ ಇಂಟರ್ನೆಟ್‌ನಲ್ಲಿ ಸದಾ ಟ್ರೆಂಡಿಂಗ್‌ನಲ್ಲಿರುತ್ತಾರೆ.

ಚಿನ್ನದ ಗೊಂಬೆಯಂತೆ ಮಿಂಚಿದ ಸುಂದರಿ

ಇತ್ತೀಚೆಗೆ ಊರ್ವಶಿ ರೌಟೇಲಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಚಿನ್ನದ ಬಣ್ಣದ ಉಡುಪನ್ನು ಧರಿಸಿ, ಐಷಾರಾಮಿ ಕಾರಿನ ಎದುರು ಪೋಸ್​ ನೀಡಿದ್ದಾರೆ.

ಪಡ್ಡೆ ಹುಡುಗರು ಫಿದಾ

ಉರ್ವಶಿ ಅವರು ಚಿನ್ನದ ಬಣ್ಣದ ಉಡುಗೆಯಲ್ಲಿ ಚಿನ್ನದ ಗೊಂಬೆಯಂತೆ ಮಿಂಚಿದ್ದು, ಅವರ ಮಾದಕ ಮೈಮಾಟವನ್ನು ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಹೀಗಾಗಿ ಊರ್ವಶಿ ಸೌಂದರ್ಯ ಹೊಗಳುತ್ತಾ ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ.