ನೋಡ ನೋಡ ಎಂತ ಚೆಂದ ಕೃತಿ..

ಮಮತಾ

ನೋಡ ನೋಡ ಎಂತ ಚೆಂದ ಕೃತಿ..

ಉಪ್ಪೇನಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಕೃತಿ ಶೆಟ್ಟಿ ಮೂಲತಃ ಕರ್ನಾಟಕದ ಮಂಗಳೂರಿನಾಕೆ. ಇತ್ತೀಚೆಗೆ ಅವರ ಲವ್​ ಇನ್ಶುರೆನ್ಸ್​ ಕಂಪನಿ ಸಿನಿಮಾ ರಿಲೀಸ್​ ಆಗಿ ಫ್ಯಾನ್ಸ್ ಮನ ಗೆದ್ದಿದ್ದರು. ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಸ್ಯಾರಿ ಪೋಟೋ ಶೂಟ್​ ಲುಕ್​ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ಸೀರೆಲಿ ಹುಡಗೀರ ನೋಡಲೇ ಬಾರದು ಎಂದ ಫ್ಯಾನ್ಸ್

ಹವಾ ಹವಾ ವಾಸ್​ ಇನ್​ ಮೈ ಫೇವರ್​ ಎಂದು ಬೇಬಿ ಪಿಂಕ್​ ಸ್ಯಾರಿ ಉಟ್ಟು ಅದಕ್ಕೆ ಮಿಕ್ಸ್​ ಬಣ್ಣದ ಸ್ಲೀವ್​ ಲೆಸ್​ ಬ್ಲೌಸ್​ ಧರಿಸಿದ್ದಾರೆ. ಸೀರೆ ಲುಕ್​ಗೆ ಹೊಂದುವರಂತೆ ಹಾಕಿರುವ ಉಂಗುರ, ಒಂದೇ ಒಂದು ಬಳೆ ಸಿಂಪಲ್​ ಮೇಕಪ್​ನ ಲುಕ್​​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಉಪ್ಪೇನಾ ಮೂಲಕ ಸಿನಿಮಾಕ್ಕೆ ಎಂಟ್ರಿ

2021ರಲ್ಲಿ ರಿಲೀಸ್ ಆಗಿದ್ದ ಉಪ್ಪೇನಾ ಸಿನಿಮಾ ಕೃತಿ ಅವರಿಗೆ ಸಾಕಷ್ಟು ಫ್ರೇಮ್​ ಕೊಟ್ಟಿತ್ತು ಸಿನಿಮಾ ಸಕ್ಸಸ್​ ನಂತ್ರ ಸಾಲು ಸಾಲು ಚಿತ್ರಗಳ ಆಫರ್​ ಬಂದಿತ್ತು ಆದ್ರೆ ಯಾವುದು ಅಷ್ಟೊಂದು ಗೆಲುವು ಕಂಡುಕೊಂಡಿಲ್ಲ. ಅವರು ಕನ್ನಡದಲ್ಲಿಯೂ ನಟಿಸಬೇಕು ಎನ್ನುವುದು ಅಭಿಮಾನಿಗಳ ಒತ್ತಾಸೆಯಾಗಿದೆ.

ಸಿನಿಮಾ ಲಿಸ್ಟ್​ ಹೀಗಿದೆ

ಉಪ್ಪೇನಾ ಗೆಲುವಿನ ನಂತರ ಅದೇ ವರ್ಷದಲ್ಲಿ ಅವರು ಶ್ಯಾಮ್​ ಸಿಂಗ್​ ರಾಯ್ನಲ್ಲಿ ನಟಿಸಿದರು. 2024ರಲ್ಲಿ ಮನಮೇ, 2022ರಲ್ಲಿ ದಿ ವಾರಿಯರ್​​, ಕಾರ್ತಿಕ್​ ನಟನೆಯ ವಾ ವಾಥಿಯಾರ್​ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಅವರು ಕಾಲಿವುಡ್​ಗೆ ಕಾಲಿಟ್ಟರು.

ಸಿಕ್ಕ ಅವಾರ್ಡ್​ಗಳಿಷ್ಟು

ಕೃತಿ ಶೆಟ್ಟಿ ಫಿಲ್ಮ್‌ಫೇರ್ ಪ್ರಶಸ್ತಿ ದಕ್ಷಿಣ ಮತ್ತು SIIMA ಪ್ರಶಸ್ತಿಯನ್ನು ಪಡೆದಿದ್ದಾರೆ. ಮಂಗಳೂರಿನ ಬಂಟ ಕುಡುಂಬದಲ್ಲಿ 2003ರಲ್ಲಿ ಜನಿಸಿದ ಕೃತಿಗೆ ಈಗಿನ್ನು 22 ವರ್ಷ. ಕೃತಿ ತಂದೆ ಉದ್ಯಮಿ, ತಾಯಿ ಫ್ಯಾಷನ್​ ಡಿಸೈನರ್​.

ಐಲವ್ಯೂ ಎಂದ ಫ್ಯಾನ್ಸ್

ಕೃತಿ ಶೆಟ್ಟಿ ಅವರ ಫೋಟೋ ಶೂಟ್​​ ಪಟಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಐ ಲವ್ಯೂ ನ್ಯಾಚುರಲ್​ ಬ್ಯೂಟಿ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

'ಮಲ್ಟಿಸ್ಟಾರರ್' ನಲ್ಲಿ ಕೃತಿ?

ಟಾಲಿವುಡ್‌ನ ಯಶಸ್ವಿ ನಿರ್ದೇಶಕ ಅನಿಲ್ ರವಿಪುಡಿ ಸದ್ಯದಲ್ಲೇ ತೆರೆಗೆ ತರುತ್ತಿರುವ ಬಹುನಿರೀಕ್ಷಿತ 'ಮಲ್ಟಿಸ್ಟಾರರ್' ಚಿತ್ರದ ತಾರಾಬಳಗದ ಬಗ್ಗೆ ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ವಿಕ್ಟರಿ ವೆಂಕಟೇಶ್ ಮತ್ತು ನಂದಮೂರಿ ಕಲ್ಯಾಣ್ ರಾಮ್ ಮತ್ತು ಕೀರ್ತಿ ಸುರೇಶ್​, ಕೃತಿ ಶೆಟ್ಟಿ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.