ಉಗ್ರಂ ಮಂಜು ನಿಶ್ಚಿತಾರ್ಥ

ಕಲಾನ್ವಿತ ಜಿ ಜೈನ್

ಉಗ್ರಂ ಮಂಜು ನಿಶ್ಚಿತಾರ್ಥ

ನಟ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಉಗ್ರಂ ಮಂಜು ನಿಶ್ಚಿತಾರ್ಥ ಮಾಡಿಕೊಂಡು ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ.

ಉಗ್ರಂ ಸಿನಿಮಾ ಖ್ಯಾತಿಯ ಮಂಜುನಾಥ್ ಗೌಡ

ಅಂದಹಾಗೆ, ಉಗ್ರಂ ಮಂಜು ಅವರ ನಿಜವಾದ ಹೆಸರು ಮಂಜುನಾಥ್ ಗೌಡ. ಸ್ಯಾಂಡಲ್‌ವುಡ್‌ನಲ್ಲಿ ಖ್ಯಾತ ಖಳನಟ ಮತ್ತು ಪೋಷಕ ನಟರಾಗಿ ಗುರುತಿಸಿಕೊಂಡಿದ್ದಾರೆ. 2014ರಲ್ಲಿ ತೆರೆಕಂಡ ಪ್ರಶಾಂತ್ ನೀಲ್ ನಿರ್ದೇಶನದ 'ಉಗ್ರಂ' ಸಿನಿಮಾದಲ್ಲಿ ನೆಗೆಟಿವ್ ರೋಲ್‌ಗಳಲ್ಲಿ ಕಾಣಿಸಿಕೊಂಡು, ತಮ್ಮ ನಟನೆಯಿಂದಲೇ ಮನೆ ಮಾತಾದರು.

ಬಿಗ್ ಬಾಸ್ ಸೀಸನ್​ 11ರ ಸ್ಪರ್ಧಿ

ಬಿಗ್ ಬಾಸ್ ಸೀಸನ್​ 11ರ ಸ್ಪರ್ಧಿ ಯಾಗಿಯೂ ಮಂಜು ಭಾಗವಹಿಸಿದ್ದರು. ಅಲ್ಲಿಯೂ ಆಟ, ಅಭಿನಯಗಳನ್ನು ಮಾಡುವುದರ ಮೂಲಕ ಒಂದಿಷ್ಟು ಜನರ ಪ್ರೀತಿಗೂ ಪಾತ್ರರಾಗಿದ್ದಾರೆ.

ಸಂಧ್ಯಾ ಜೊತೆ ಉಗ್ರಂ ಮಂಜುಗೆ ನಿಶ್ಚಿತಾರ್ಥ

ಪಿಣ್ಯದಲ್ಲಿ ಈ ಸಮಾರಂಭ ನಡೆದಿದ್ದು, ಹೂ ಮುಡಿಸುವ ಶಾಸ್ತ್ರದ ಜೊತೆಗೆ ನಿಶ್ಚಿತಾರ್ಥವು ಕೂಡ ಇಂದೇ ನೆರವೇರಿದೆ. ವಧು ಸಂಧ್ಯಾ ಅವರು ಸ್ಪರ್ಶ್ ಆಸ್ಪತ್ರೆಯಲ್ಲಿ ಅಡ್ಮಿನ್ ಡಿಪಾರ್ಟೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.