ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುವ ಈ ಸೂಪ್​ ಟ್ರೈ ಮಾಡಿ!

ಭಾನುಪ್ರಿಯ ಡಿ.ಕೆ

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುವ ಈ ಸೂಪ್​ ಟ್ರೈ ಮಾಡಿ!

ಚಳಿಗಾಲದ ತಣ್ಣನೆಯ ಹವೆಯಲ್ಲಿ ದೇಹವು ಬೆಚ್ಚಗಿರಬೇಕೆಂದು ಬಯಸುತ್ತದೆ. ಈ ಸಮಯದಲ್ಲಿ ಅನೇಕರು ಹಲವಾರು ರೀತಿಯಲ್ಲಿ ಪಾನೀಯಗಳನ್ನು ಸೇವಿಸಲು ಬಯಸುತ್ತಾರೆ. ಆದರೆ, ರುಚಿ ಜೊತೆಗೆ ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ಇವು ಬಾಯಿಗು ರುಚಿ, ದೇಹಕ್ಕೂ ಹಿತ.

ಚಿಕನ್ ಸೂಪ್

ಜ್ವರ, ಶೀತ, ಚಳಿಗಾಲಕ್ಕೆ ಸೂಪರ್ ರೆಸಿಪಿ ಇದಾಗಿದ್ದು, ಚಿಕನ್, ತರಕಾರಿ, ಶುಂಠಿ-ಬೆಳ್ಳುಳ್ಳಿ ಸೇರಿಸಿ ಮಸಾಲೆಯೊಂದಿಗೆ ಕುದಿಸಿ ಕುಡಿಯುವುದರಿಂದ ಇದು ದೇಹಕ್ಕೆ ಶಕ್ತಿ ನೀಡುತ್ತದೆ.

ಟಮೊಟೋ ಸೂಪ್

ಅತ್ಯಂತ ಜನಪ್ರಿಯ ಮತ್ತು ಸುಲಭ ಸೂಪ್​ ಆಗಿದ್ದು, ಇದನ್ನು ಟಮೊಟೋ , ಬೆಳ್ಳುಳ್ಳಿ, ಶುಂಠಿ, ಕಾಳು ಮೆಣಸು ಸೇರಿಸಿ ಮಸಾಲೆಯೊಂದಿಗೆ ತಯಾರಿಸಿ ಸೇವಿಸಿದರೆ ದೇಹದ ಒಳಗೆ ಬಿಸಿಯನ್ನು ನೀಡುತ್ತದೆ.

ಕ್ಲಿಯರ್ ವೆಜಿಟಬಲ್ ಸೂಪ್

ಕ್ಲಿಯರ್ ವೆಜಿಟಬಲ್ ಸೂಪ್ ತರಕಾರಿಗಳಿಂದ ಮಾಡಿದ್ದು, ಇದಕ್ಕೆ ಜೀರಿಗೆ, ಶುಂಠಿ, ಬೆಳ್ಳುಳ್ಳಿ ಹಾಕಿ ತಯಾರಿಸಿ ಸೇವಿಸಿದರೆ ಇದು ದೇಹಕ್ಕೆ ಬಿಸಿಯಾಗಿರುತ್ತದೆ. ಹೆಚ್ಚು ಕ್ಯಾಲೋರಿ ಇಲ್ಲದೆ ಆರೋಗ್ಯಕರ.

ಕೊತ್ತುಂಬರಿ ಸೂಪ್​​

ಕೊತ್ತುಂಬರಿ ಸೊಪ್ಪಿನ ಸೂಪ್ ಶೀತ, ಕೆಮ್ಮುಗೆ ಅತ್ಯುತ್ತಮ ಆಹಾರವಾಗಿದ್ದು, ಇದನ್ನು ಬೆಳ್ಳುಳ್ಳಿ, ಕೊತ್ತಿಗೆ ಸೊಪ್ಪು, ಮೆಣಸು ಪುಡಿ ಸೇರಿಸಿ ತಯಾರಿಸಿ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಮಶ್ರೂಮ್ ಸೂಪ್

ಮಶ್ರೂಮ್ ಸೂಪ್ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಇದನ್ನು ಮಷ್ರೂಮ್, ಬೆಳ್ಳುಳ್ಳಿ, ಶುಂಠಿ ಸೇರಿಸಿ ಕ್ರೀಮ್ ಹಾಕಿ ತಯಾರಿಸಿದರೆ ಚಳಿಗಾಲಕ್ಕೆ ಪರ್ಫೆಕ್ಟ್ ಆಹಾರವಾಗಿರುತ್ತದೆ.

ಸ್ವೀಟ್ ಕಾರ್ನ್ ಸೂಪ್

ಸ್ವೀಟ್ ಕಾರ್ನ್ ಸೂಪ್ ಭಾರತೀಯ ಶೈಲಿಯಲ್ಲಿ ಅತ್ಯಂತ ಫೇಮಸ್ ಆಗಿದ್ದು, ಇದನ್ನು ಸ್ವೀಟ್ ಕಾರ್ನ್, ತರಕಾರಿ, ಶುಂಠಿ-ಬೆಳ್ಳುಳ್ಳಿ ಸೇರಿಸಿ ತಯಾರಿಸಲಾಗುತ್ತದೆ. ಇದರಿಂದ ದೇಹವು ಬೆಚ್ಚಗಿರುತ್ತದೆ.