ಗೋವಾದಲ್ಲಿ ತ್ರಿಷಾ 'ಥಗ್ಸ್ ಲೈಫ್'

ಮಮತಾ

ಗೋವಾದಲ್ಲಿ ತ್ರಿಷಾ 'ಥಗ್ಸ್ ಲೈಫ್'

ವಿಜಯ್​​ ಬರ್ತಡೇ ದಿನ, ನಂತರ ಸೌತ್​ ಇಂಡಿಯನ್​ ನಟಿ ತ್ರಿಷಾ ಕೃಷ್ಣನ್​ ಅವರ ಪೋಸ್ಟ್ ಸಾಕಷ್ಟು ಸದ್ದು ಮಾಡಿತ್ತು. ಆನಂತರ ಅವರು ಏನು ಮಾಡುತ್ತಿದ್ದಾರೆ ಎಲ್ಲಿದ್ದಾರೆ ಎನ್ನುವ ಸುಳಿವೇ ಇರಲಿಲ್ಲ. ಸದ್ಯ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಫೋಟೋ ಶೂಟ್ ಹಂಚಿಕೊಂಡಿದ್ದು ಅದಕ್ಕೆ ಲೊಕೇಶನ್​ ಮಾರ್ಕ್​​ ಗೋವಾ ಎಂದು ನೀಡಲಾಗಿದೆ. ಆ ಮೂಲಕ ತಾವು ಗೋವಾ ಪ್ರವಾಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.

ಝಾರಾ ಬ್ರ್ಯಾಂಡ್​ ವಿರುದ್ಧ ಗುಡುಗು

ಇತ್ತೀಚೆಗೆ ಝಾರಾ ಬ್ರ್ಯಾಂಡ್​ ನಿಂದ ಆರ್ಡರ್​ ಮಾಡಿದ್ದ ಬಟ್ಟೆಗಳಲ್ಲಿ ದುರ್ವಾಸನೆ ಬರುತ್ತಿತ್ತು ಎಂದು ಕಂಪನಿಯನ್ನು ಟ್ಯಾಗ್​ ಮಾಡಿ ತ್ರಿಷಾ ಕಿಡಕಾರಿದ್ದರು. ಮುಂದಿನ ಬಾರಿ ಹೋಮ್​ ಡೆಲಿವರಿ ಮಾಡುವಾಗ ಈ ಬಗ್ಗೆ ಗಮನವಹಿಸಿ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.

ವಿಜಯ್​ ಜೊತೆಗೆ ಬ್ರೇಕಪ್​ ವದಂತಿಗೆ ಬ್ರೇಕ್

ವಿಜಯ್​ ಅವರ ಹುಟ್ಟುಹಬ್ಬದ ದಿನ ಯಾವುದೇ ವಿಶಸ್ ಹಂಚಿಕೊಂಡಿರಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು. ಇವರಿಬ್ಬರ ಮಧ್ಯೆ ಬ್ರೇಕಪ್​ ಆಗಿದೆ ಎಂದು ವದಂತಿಗಳು ಹರಿದಾಡಿತ್ತು. ಆದರೆ, ಅದಕ್ಕೆ ರಾತ್ರೋರಾತ್ರಿ ಬ್ರೇಕ್​​​ ಹಾಕಿದ್ದರು ನಟಿ ತ್ರಿಷಾ ಇಬ್ಬರು ಪ್ರತ್ಯೇಕವಾಗಿ ಕೇಕ್​ ಕತ್ತರಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು.

ಕರುಪ್ಪು ಸಿನಿಮಾಗೆ ಉತ್ತಮ ಪ್ರತಿಕ್ರಿಯೆ

ಆರ್​ಜೆ ಬಾಲಾಜಿ ನಿರ್ದೇಶನದ, ಸೂರ್ಯ ನಟನೆಯ ಕರುಪ್ಪು ಸಿನಿಮಾ 15 ಮೇ 2026ರಲ್ಲಿ ರಿಲೀಸ್​ ಆಗಿತ್ತು. ಈ ಸಿನಿಮಾ ಸೂರ್ಯ ಅವರಿಗೆ ಬಿಗ್​ ಕಂಬ್ಯಾಕ್​ ಆಗಿತ್ತು. ತ್ರಿಷಾ, ಇಂದ್ರನ್ಸ್​ ಸೇರಿದಂತೆ ಘಟಾನುಘಟಿ ನಾಯಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾಗೆ ಒಟಿಟಿ ಹಾಗೂ ಥಿಯೇಟರ್​ಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಾಕ್ಸ್​ ಆಫೀಸ್​ನಲ್ಲಿ 217 ಕೋಟಿ ಕಲೆಕ್ಷನ್​ ಕಂಡಿದೆ.

ವಿಜಯ್​​-ತ್ರಿಷಾ ಕೆಮಿಸ್ಟ್ರಿ ಸಿನಿಮಾ

ತ್ರಿಷಾ ಮತ್ತು ವಿಜಯ್​ ಅವರ ಜೋಡಿ ಇಂದಿಗೂ ಒಂದು ಹವಾವನ್ನು ಸೌತ್​ ಇಂಡಿಯಾ ಸಿನಿಮಾದಲ್ಲಿ ಕೊಟ್ಟಿದೆ. ಅವರ ಲಿಯೋ ಸಿನಿಮಾ, ಗೋಟ್​​, ಆಥಿ, ತಿರುಪಾಚಿ, ಕುಡುವಿ, ಗಿಲ್ಲಿ ಸಿನಿಮಾಗಳು 90ರ ದಶಕದ ಹಿಟ್​​ ಸಿನಿಮಾಗಳು.