ಆಗಸ್ಟ್ 8ರಂದು ನಡೆದ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ದೇಶಕಿ ಗೀತು ಮೋಹನ್ ದಾಸ್ ಸೀರೆಯುಟ್ಟು ಬೋಲ್ಡ್ ಆಗಿ ಕಾಣಿಸಿಕೊಂಡರು. ಅದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗುತ್ತಿವೆ.
ಶ್ವೇತವರ್ಣದ ಸೀರೆ
ಬಿಳಿ ಬಣ್ಣದ ಡಿಸೈನರ್ ಸೀರೆ ಧರಿಸಿ, ಕ್ಯಾಮೆರಾಗೆ ವಿವಿಧ ಪೋಸ್ ನೀಡಿರುವ ಗೀತು ಮೋಹನ್ ದಾಸ್, ತಮ್ಮ ಮಾದಕ ನೋಟದಿಂದಲೇ ಸಿನಿ ರಸಿಕರ ಹೃದಯ ಗೆದ್ದಿದ್ದಾರೆ. ಅವರ ಫೋಟೋಗಳಿಗೆ ಕಾಮೆಂಟ್ಗಳ ಮಹಾಪೂರವೇ ಹರಿದುಬರುತ್ತಿದೆ.
ನಟಿಯಾಗಿ ವೃತ್ತಿಜೀವನ ಆರಂಭ
ಗೀತು ಅವರು ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಮೋಹನ್ ಲಾಲ್ ಅಭಿನಯದ 'ಒನ್ನು ಮುತಲ್ ಪೂಜ್ಯಂ ವರೆ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿ, ಹಲವು ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದರು.
ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳು
2004ರಲ್ಲಿ ತೆರೆಕಂಡ 'ಅಕಾಲೆ' ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ಇವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಇವರು ನಿರ್ದೇಶಿಸಿದ 'ಲಯರ್ಸ್ ಡೈಸ್' (Liar's Dice) ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸಿಕ್ಕಿವೆ.
ಆಸ್ಕರ್ ರೇಸ್ ತಲುಪಿದ ನಿರ್ದೇಶಕಿ
ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿಬಂದ ಹಿಂದಿಯ 'ಲಯರ್ಸ್ ಡೈಸ್' ಚಲನಚಿತ್ರವು 87ನೇ ಅಕಾಡೆಮಿ ಪ್ರಶಸ್ತಿಗಳಿಗೆ (ಆಸ್ಕರ್) ಭಾರತದ ಅಧಿಕೃತ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿ ದೊಡ್ಡ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಟಾಕ್ಸಿಕ್ ಸದ್ದು ಜೋರು
ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಟಾಕ್ಸಿಕ್ಗೆ ಆ್ಯಕ್ಷನ್ ಕಟ್ ಹೇಳಿರುವ ಗೀತೂ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಆಗಸ್ಟ್ 26ರಂದು ಬಿಡುಗಡೆಯಾಗಲಿದೆ.
ವೈಯಕ್ತಿಕ ಜೀವನ
ಗೀತು ಮೋಹನ್ ದಾಸ್ ಅವರು ಖ್ಯಾತ ಸಿನಿಮೋಟೋಗ್ರಾಫರ್ ಹಾಗೂ ನಿರ್ದೇಶಕ ರಾಜೀವ್ ರವಿ ಅವರನ್ನು 2009ರಲ್ಲಿ ವಿವಾಹವಾದರು. ದಂಪತಿಗೆ ಆರಾಧನಾ ಎಂಬ ಮಗಳಿದ್ದಾಳೆ.