ಭಾರತದ ಟಾಪ್​ 5 ಶ್ರೀಮಂತ ಮುಖ್ಯಮಂತ್ರಿಗಳು

ವಿನಾಯಕ ನಾಯಕ

ಭಾರತದ ಟಾಪ್​ 5 ಶ್ರೀಮಂತ ಮುಖ್ಯಮಂತ್ರಿಗಳು

ಭಾರತದ ಮುಖ್ಯಮಂತ್ರಿಗಳ ಆಸ್ತಿ ವಿವರ ಕುರಿತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಬಿಡುಗಡೆ ಮಾಡಿರುವ ಇತ್ತೀಚಿನ ವರದಿ ದೇಶಾದ್ಯಂತ ಭಾರಿ ಕುತೂಹಲ ಮೂಡಿಸಿದೆ. ದೇಶದ ಅತ್ಯಂತ ಶ್ರೀಮಂತ ಟಾಪ್ 5 ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಡಿ. ಕೆ. ಶಿವಕುಮಾರ್ (ಕರ್ನಾಟಕ)

ಪ್ರಸ್ತುತ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಡಿ. ಕೆ. ಶಿವಕುಮಾರ್ ಅವರು ಸುಮಾರು 1,413 ಕೋಟಿ ಆಸ್ತಿ ಹೊಂದಿರುವ ದೇಶದ ಅತ್ಯಂತ ಶ್ರೀಮಂತ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (INC) ಪಕ್ಷದಲ್ಲಿ ಗುರುತಿಸಿ ಕೊಂಡಿದ್ದಾರೆ.

ಎನ್. ಚಂದ್ರಬಾಬು ನಾಯ್ಡು (ಆಂಧ್ರಪ್ರದೇಶ)

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ತೆಲುಗು ದೇಶಂ ಪಾರ್ಟಿ (TDP) ಜೊತೆ ಗುರುತಿಸಿ ಕೊಂಡಿರುವ ಇವರು ಒಟ್ಟು 931 ಕೋಟಿ ಆಸ್ತಿಯ ಒಡೆಯರಾಗಿದ್ದಾರೆ.

ಸಿ. ಜೋಸೆಫ್ ವಿಜಯ್ (ತಮಿಳುನಾಡು)

ತಮಿಳು ಚಿತ್ರರಂಗದ ಖ್ಯಾತ ನಟ ಮತ್ತು ತಮಿಳುನಾಡು ರಾಜ್ಯದ ನೂತನ ಮುಖ್ಯಮಂತ್ರಿಯಾಗಿರುವ ಜೋಸೆಫ್ ವಿಜಯ್ ಅಲಿಯಾಸ್​ ದಳಪತಿ ವಿಜಯ್​ ಸುಮಾರು 648 ಕೋಟಿ ಹೊಂದಿದ್ದಾರೆ. ಇವರ ಪಕ್ಷದ ಹೆಸರು ತಮಿಳಗ ವೆಟ್ರಿ ಕಳಗಂ (TVK)

ಪೆಮಾ ಖಂಡು (ಅರುಣಾಚಲ ಪ್ರದೇಶ)

ಈಶಾನ್ಯ ಭಾರತದ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾದ ಪೆಮಾ ಖಂಡು ಸುಮಾರು 332 ಕೋಟಿ ಆಸ್ತಿಯ ಒಡೆಯರಾಗಿದ್ದಾರೆ. ಇವರು ಭಾರತೀಯ ಜನತಾ ಪಾರ್ಟಿ (BJP) ಜೊತೆ ಗುರುತಿಸಿ ಕೊಂಡಿದ್ದಾರೆ.

ನೆಫಿಯು ರಿಯೋ (ನಾಗಾಲ್ಯಾಂಡ್)

ನಾಗಾಲ್ಯಾಂಡ್‌ನ ಮುಖ್ಯಮಂತ್ರಿಯಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸುತ್ತಿರುವ ನೆಫಿಯು ರಿಯೋ ಈ ಪಟ್ಟಿಯಲ್ಲಿ 46 ಕೋಟಿ ಮೂಲಕ 5 ಶ್ರೀಮಂತ ಸಿಎಂ ಎಂದು ಗುರುತಿಸಿ ಕೊಂಡಿದ್ದಾರೆ. ಇವರು ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (NDPP) ಯ ನಾಯಕರಾಗಿದ್ದಾರೆ.