ಅಲ್ಫಾನ್ಸೋ ಮಾವು (Alfonso Mango)
ಭಾರತದ ಮಾವಿನ ರಾಜ ಎಂದೇ ಕರೆಯಲ್ಪಡುವ ಅಲ್ಫಾನ್ಸೋ (ರತ್ನಗಿರಿ ಆಪೂಸ್) ಜಾಗತಿಕವಾಗಿ ಅತ್ಯಂತ ಜನಪ್ರಿಯ ಮತ್ತು ದುಬಾರಿ ಮಾವುಗಳಲ್ಲಿ ಒಂದಾಗಿದೆ. ಇದರ ಅದ್ಭುತ ಸುವಾಸನೆ, ದಪ್ಪನೆಯ ತಿರುಳು ಮತ್ತು ವಿಶಿಷ್ಟ ಸಿಹಿಗೆ ವಿದೇಶಗಳಲ್ಲೂ ಭಾರಿ ಬೇಡಿಕೆಯಿದೆ. ಸೀಸನ್ ಆರಂಭದಲ್ಲಿ ಇದರ ಬೆಲೆ ಪ್ರತಿ ಡಜನ್‌ಗೆ 3,000 ದಿಂದ 5,000 ರೂಪಾಯಿ ವರೆಗೆ ಇರುತ್ತದೆ.