ಮಿಸ್ಟರ್ ಪರ್ಫೆಕ್ಟ್ನ ರಾಣಿ ಕಾಜಲ್ ಅಗರ್ವಾಲ್ ಅವರು ಇನ್ಸ್ಟಾಗ್ರಾಂನಲ್ಲಿ ಹೊಸ ಫೋಟೋ ಶೂಟ್ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಪಿಂಕ್ ಮಿನಿ ಗೌನ್ ತೊಟ್ಟು, ಸಿಂಪಲ್ ಮೇಕಪ್ ಮಾಡಿಕೊಂಡಿರುವುದು ಸಖತ್ ಗ್ಲಾಮರಸ್ ಆಗಿ ಕಾಣುವಂತೆ ಮಾಡಿದೆ.
'ಗಾರ್ಗಿಯಸ್ ಮಮ್ಮಿ' ಎಂದ ಫ್ಯಾನ್ಸ್
ಆಲ್ ಬ್ಲಷ್ ನೋ ಬ್ಲಫ್ ಹೀಗೆಂದು ಶೀರ್ಷಿಕೆ ಕೊಟ್ಟು ಕಾಜಲ್ ಅಗರ್ವಾಲ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಆಲ್ ವೇಸ್ ಐಸ್ ಆನ್ ಯೂ ಕ್ಯೂಟಿ, ಗಾರ್ಗಿಯಸ್ ಮಮ್ಮಿ, ಬಾರ್ಬಿ ಡಾಲ್ ಎಂತೆಲ್ಲ ಫ್ಯಾನ್ಸ್ ಅವರಿಗೆ ಕಾಮೆಂಟ್ ಮಾಡಿದ್ದಾರೆ.
ಕಾಜಲ್ ಮುಂದಿನ ಸಿನಿಮಾ ಯಾವುದು?
ಕಾಜಲ್ ಅಗರ್ವಾಲ್ ಅವರು ಕೊಂಚ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಸಿಕಂದರ್, ಸತ್ಯಭಾಮಾ, ಕಣ್ಣಪ್ಪ, ಇಂಡಿಯನ್ 2 ಸಿನಿಮಾ ನಂತರ ಅವರು ಯಾವುದೇ ಹೊಸ ಸಿನಿಮಾಗಳಿಗೆ ಸೈನ್ ಮಾಡಿಲ್ಲ ಎಂದು ಹೇಳಲಾಗುತ್ತಿದೆ.
ಕಾಜಲ್ ಸಿನಿ ಪಯಣ ಹೀಗಿತ್ತು
ಕಾಜಲ್ ಅಗರ್ವಾಲ್ ಅವರು ಜ್ಯೂನ್ ಹೋ ಗಯಾನಾ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟರು. ತೆಲುಗಿನ ಲಕ್ಷ್ಮಿ ಕಲ್ಯಾಣಂ ಮೊದಲ ಸಿನಿಮಾ. ಆನಂತರ ತಮಿಳು ಸಿನಿಮಾ ರಂಗಕ್ಕೆ ಫಝನಿ ಮೂಲಕ ಕಾಲಿಟ್ಟರು
ಹಿಟ್ ಕೊಟ್ಟ ಸಿನಿಮಾಗಳು
ಮಗಧೀರ, ಆರ್ಯ 2, ಮೆರ್ಸೆಲ್ ಮತ್ತು ವಿವೇಗಂ, ಮಿಸ್ಟರ್ ಪರ್ಫೆಕ್ಟ್, ಸಿಂಗಂ, ಚಂದಮಾಮಾ ಸಿನಿಮಾಗಳು ಅವರ ಸಿನಿಮಾ ಕೆರಿಯರ್ನಲ್ಲೇ ದೊಡ್ಡ ಹಿಟ್ ಕೊಟ್ಟ ಚಿತ್ರಗಳು.
2020ರಲ್ಲಿ ಮದುವೆ ಜೊತೆ ಮದುವೆ
ಉದ್ಯಮಿ ಗೌತಮ್ ಕಿಚ್ಲು ಜೊತೆಗೆ ಅಕ್ಟೋಬರ್ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಂಪತಿಗೆ ನೀಲ್ ಕಿಚ್ಲು ಹೆಸರಿನ ಮಗನಿದ್ದಾನೆ. ಮದುವೆಯಾದ ಬಳಿಕವೂ ಅವರ ಹಳೆಯ ಫಿಟ್ನೆಸ್ ಅನ್ನೇ ಮೆಂಟೇನ್ ಮಾಡಿರುವುದು ಫ್ಯಾನ್ಸ್ಗೆ ಅಚ್ಚರಿ ಮೂಡಿಸಿದ್ದಲ್ಲದೇ ಅವರ ಬಗ್ಗೆಮತ್ತಷ್ಟು ಅಭಿಮಾನವನ್ನು ಹೆಚ್ಚಿಸಿದೆ